ನವದೆಹಲಿ,ಜು.17: ಉದ್ಯೋಗ ಅಂದಾಗ ನಮಗೆ ಅಲ್ಲಿ ನೀಡಿರುವ ಹುದ್ದೆಗಳು ಕೂಡ ಪ್ರಮುಖವಾಗುತ್ತವೆ. ಒಂದು ವೇಳೆ ನಾವು ಕಿರಿಯ ಉದ್ಯೋಗಿಗಳಾಗಿ ಕಂಪನಿಗೆ ಸೇರಿದ್ದರೆ ನಮ್ಮ ಹಿರಿಯ ಅಧಿಕಾರಿಗಳ ಸಲಹೆಯನ್ನು ನಾವು ಪಾಲಿಸಬೇಕಾಗುತ್ತವೆ. ಇದೀಗ ಭಾರತೀಯ ಉದ್ಯೋಗಿಯೊಬ್ಬರು ಈ ಬಗ್ಗೆ ತಮ್ಮ ಅಳಲನ್ನು ಶೇರ್ ಮಾಡಿಕೊಂಡಿದ್ದಾರೆ. ತನ್ನ ಮಾನ್ಯೇಜರ್ ರಜೆಯಲ್ಲಿದಾಗ ಕಂಪನಿಯ ಹಿರಿಯ ಅಧಿಕಾರಿಗೆ ಸಹಾಯ ಮಾಡಿ ತನಗೆ ಶಿಕ್ಷೆಯಾಯಿತು ಎಂದು ಬೇಸರ ಹೊರಹಾಕಿದ್ದಾರೆ. ಈ ಪೋಸ್ಟ್ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು "ಇದು ಎಲ್ಲ ಉದ್ಯೋಗ ದಲ್ಲಿ ನಡೆಯುವ ಮೊದಲನೇ ಸಮಸ್ಯೆ" ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ.
ತನ್ನ ಮ್ಯಾನೇಜರ್ ಎರಡು ವಾರಗಳ ರಜೆಯಲ್ಲಿದ್ದಾಗ ಕಂಪನಿಯ ಹಿರಿಯ ಅಧಿಕಾರಿ ನನ್ನ ಬಳಿ ಸಹಾಯ ಕೇಳಿದ್ದರು. ಆದರೆ ಮ್ಯಾನೇಜರ್ ಅವರ ಅನುಪಸ್ಥಿತಿಯಲ್ಲಿ ಸಹಾಯ ಹಸ್ತ ಚಾಚಿದ್ದರಿಂದ ತನ್ನ ಮ್ಯಾನೇಜರ್ ತನಗೆ ಕಡಿಮೆ ರೇಟಿಂಗ್ ನೀಡಿದ್ದಾರೆ ಎಂದು ರೆಡ್ಡೆಟ್ ನಲ್ಲಿ ಹಂಚಿಕೊಂಡಿದ್ದಾರೆ.
ತನ್ನ ಮ್ಯಾನೇಜರ್ ರಜೆಯಲ್ಲಿದ್ದಾಗ ಬಾಸ್‌ಗೆ ಸಹಾಯ ಮಾಡಿದೆ ಎಂಬ ಕಾರಣಕ್ಕೆ ಕಡಿಮೆ ರೇಟಿಂಗ್ ನೀಡಿದ್ದಾರೆ. ನಾನು ಇಲ್ಲಿ ಮಾಡಿದ್ದು ತಪ್ಪೇ?” ಎಂಬ ಶೀರ್ಷಿಕೆಯಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ಉದ್ಯೋಗಿ ತಿಳಿಸಿರುವ ಪ್ರಕಾರ, ಅವರ ಮ್ಯಾನೇಜರ್ ಕೆಲವು ದಿನದವರೆಗೆ ರಜೆ ಯಲ್ಲಿದ್ದರು. ಹೀಗಾಗಿ ಮೇಲಾಧಿಕಾರಿ ಕೆಲಸದ ತುರ್ತು ಕಾರಣಗಳಿಗಾಗಿ ಇವರನ್ನು ನೇರವಾಗಿ ಸಂಪರ್ಕಿಸಿ ಸಹಾಯ ಕೇಳಿದ್ದರು.
Viral Video: ನೆರೆಮನೆಯ ಯುವಕನಿಂದನೇ ಕಿರುಕುಳ; ವಿಡಿಯೊ ಮಾಡಿ ಕಣ್ಣೀರು ಹಾಕಿದ ಅಪ್ರಾಪ್ತ ಬಾಲಕಿ
ಸ್ಪಷ್ಟವಾಗಿ ನಾನು ಇಲ್ಲ ಎಂದು ಹೇಳಲು ಅಥವಾ ಅವರನ್ನು ನಿರ್ಲಕ್ಷಿಸಲು ಸಾಧ್ಯವಾಗಿಲ್ಲ. ಆದ್ದರಿಂದ ನಾನು ಸಹಾಯ ಮಾಡಿ ಕೆಲಸವನ್ನು ಪೂರ್ಣಗೊಳಿಸಿದೆ. ಆದರೆ ನನ್ನ ವೃತ್ತಿ ಜೀವನದಲ್ಲಿ ಸಹಾಯ ಮಾಡಿದ್ದಕ್ಕಾಗಿ ನನಗೆ ದಂಡ ವಿಧಿಸಲಾಗಿದೆ. ಮ್ಯಾನೇಜರ್ ರಜೆಯಿಂದ ವಾಪಸ್ ಬಂದು ಈ ವಿಷಯ ತಿಳಿದು ತನಗೆ ಕಡಿಮೆ ರೇಟಿಂಗ್ ನೀಡಿದ್ದಾರೆ. ಅಷ್ಟೇ ಅಲ್ಲದೆ, "ನನ್ನನ್ನು ಮೀರಿ ಹಿರಿಯ ಅಧಿಕಾರಿಗೆ ನೇರವಾಗಿ ಸಹಾಯ ಮಾಡಿದ್ದೇ ರೇಟಿಂಗ್ ಕಡಿಮೆ ಮಾಡಲು ಕಾರಣ" ಎಂದು ಲಿಖಿತ ರೂಪದಲ್ಲಿ ನಮೂದಿಸಿದ್ದಾರೆ.
''ಭಾರತೀಯ ಕಾರ್ಪೊರೇಟ್ ವಲಯದಲ್ಲಿ ಇಂತಹ ವರ್ತನೆಯೂ ಇರುತ್ತದಾ?'' ಎಂದು ಪ್ರಶ್ನೆ ಮಾಡಿದ್ದಾರೆ. ಒಬ್ಬ ಬಳಕೆದಾರರು, "ನಿಮ್ಮ ಮ್ಯಾನೇಜರ್ ಅಸುರಕ್ಷಿತ ವ್ಯಕ್ತಿಯಂತೆ ಕಾಣುತ್ತಿದ್ದಾರೆ" ಎಂದು ಹೇಳಿದರು. ಮತ್ತೊಬ್ಬರು "ಕಾರ್ಪೊರೇಟ್ ಲೋಕದಲ್ಲಿ ಮ್ಯಾನೇಜರ್ ಗಳ ಮಾತುಗಳನ್ನು ಕೇಳುವುದೇ ಅತಿ ದೊಡ್ಡ ಒತ್ತಡದ ಕೆಲಸ" ಎಂದರು.