ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Viral Video: ಕ್ಷುಲ್ಲಕ ಕಾರಣಕ್ಕೆ ಲಿಫ್ಟ್‌ನಲ್ಲೇ ಹೊಡೆದಾಡಿದ ಅಪಾರ್ಟ್‌ಮೆಂಟ್ ಮಾಲಕರು; ದೊಡ್ಡವರ ಸಣ್ಣ ಗುಣ ಎಂದ ನೆಟ್ಟಿಗರು

ಅಪಾರ್ಟ್‌ಮೆಂಟ್ ಮಾಲಕರ ಸಂಘದ ಸದಸ್ಯರಿಬ್ಬರು ಹಳೆಯ ವೈಷಮ್ಯದ ವಿಚಾರವಾಗಿ ಲಿಫ್ಟ್ ಒಳಗೆಯೇ ಹೊಡೆದಾಡಿಕೊಂಡ ಘಟನೆ ನಡೆದಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ GS-7 ಹೈ-ರೈಸ್ ಸೊಸೈಟಿಯ ಲಿಫ್ಟ್ ಒಳಗೆ ಈ ಘಟನೆ ನಡೆದಿದ್ದು, ಅಪಾರ್ಟ್‌ಮೆಂಟ್ ಮಾಲಕರ ಸಂಘದ ಇಬ್ಬರು ಮಾಜಿ ಪದಾಧಿಕಾರಿಗಳು ಹಲ್ಲೆಯಲ್ಲಿ ತೊಡಗಿರುವುದು ಕಂಡು ಬಂದಿದೆ. ಈ ಘಟನೆ ವಿಡಿಯೊ ವೈರಲ್ ಆಗಿದೆ.

ಅಪಾರ್ಟ್‌ಮೆಂಟ್ ವಿವಾದಕ್ಕೆ ಲಿಫ್ಟ್‌ನಲ್ಲೇ ಹೊಡೆದಾಟ: ವಿಡಿಯೊ ವೈರಲ್

ಅಪಾರ್ಟ್‌ಮೆಂಟ್ ವಿವಾದಕ್ಕೆ ಲಿಫ್ಟ್‌ನಲ್ಲೇ ಹೊಡೆದಾಟ -

Profile
Pushpa Kumari Jul 16, 2026 7:45 PM

ಲಖನೌ, ಜು. 16: ಉತ್ತರ ಪ್ರದೇಶದಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಅಪಾರ್ಟ್‌ಮೆಂಟ್ ಮಾಲಕರ ಸಂಘದ ಸದಸ್ಯರಿಬ್ಬರು ಹಳೆಯ ವೈಷಮ್ಯದ ವಿಚಾರವಾಗಿ ಲಿಫ್ಟ್ ಒಳಗೆಯೇ ಹೊಡೆದಾಡಿಕೊಂಡಿದ್ದಾರೆ. ಗಾಜಿಯಾಬಾದ್‌ನಲ್ಲಿರುವ GS-7 ಹೈ-ರೈಸ್ ಸೊಸೈಟಿಯ ವಸತಿ ಲಿಫ್ಟ್ ಒಳಗೆ ಈ ಘಟನೆ ನಡೆದಿದ್ದು, ಅಪಾರ್ಟ್‌ಮೆಂಟ್ ಮಾಲಕರ ಸಂಘದ ಇಬ್ಬರು ಮಾಜಿ ಪದಾಧಿಕಾರಿಗಳು ಪರಸ್ಪರ ಹಲ್ಲೆಯಲ್ಲಿ ತೊಡಗಿಸಿಕೊಂಡ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಘಟನೆ ವಿಡಿಯೊ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಕಿಡಿಕಾರಿದ್ದಾರೆ.

ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಇಬ್ಬರು ಲಿಫ್ಟ್ ಒಳಗಡೆಯೇ ಭೀಕರವಾಗಿ ಹೊಡೆದಾಡಿಕೊಂಡಿದ್ದಾರೆ. ಜಗಳ ಮಾಡಿಕೊಂಡವರನ್ನು ಅಪಾರ್ಟ್‌ಮೆಂಟ್ ಸಂಘದ ಮಾಜಿ ಪದಾಧಿಕಾರಿಗಳಾದ ಪ್ರಹ್ಲಾದ್ ಕುಮಾರ್ ಮತ್ತು ದೀಪಕ್ ಚೋಪ್ರಾ ಎಂದು ಗುರುತಿಸಲಾಗಿದೆ. ಸ್ಥಳೀಯರ ಪ್ರಕಾರ, ಇಬ್ಬರ ನಡುವೆ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ನಿರ್ವಹಣೆಗೆ ಸಂಬಂಧಿಸಿದಂತೆ ಈ ಹಿಂದೆಯೇ ಜಗಳ ಉಂಟಾಗಿದ್ದು, ಇದೇ ದ್ವೇಷ ಮತ್ತೊಮ್ಮೆ ಭುಗಿಲೆದ್ದಿದೆ.

ವಿಡಿಯೊ ನೋಡಿ:



ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಹರಿದಾಡುತ್ತಿದೆ. ಪ್ರಹ್ಲಾದ್ ಕುಮಾರ್ ಮತ್ತು ದೀಪಕ್ ಚೋಪ್ರಾ ಲಿಫ್ಟ್‌ನಲ್ಲಿ ಪ್ರಯಾಣಿಸುವಾಗ ಜಗಳ ಆರಂಭವಾಗಿತ್ತು. ಈ ಪೈಕಿ ಒಬ್ಬರು ಆರಂಭದಲ್ಲಿ ತಮ್ಮ ಫೋನ್‌ ಸ್ಕ್ರೋಲ್ ಮಾಡುತ್ತಿರುವುದು ಕಂಡುಬಂದರೆ, ಇನ್ನೊಬ್ಬರು ಸುಮ್ಮನೆ ನಿಂತಿದ್ದರು.

ಮನೆ ಬಾಗಿಲಿನ ಉಚಿತ ರಕ್ತ ಪರೀಕ್ಷೆ ಸೇವೆಗೆ ಅಮೆರಿಕದ ಮಹಿಳೆ ಮೆಚ್ಚುಗೆ

ಸ್ವಲ್ಪ ಕ್ಷಣಗಳ ನಂತರ ಟಿ-ಶರ್ಟ್ ಧರಿಸಿದ ವ್ಯಕ್ತಿ ಇನ್ನೊಬ್ಬರೊಂದಿಗೆ ಸಂಭಾಷಣೆ ಪ್ರಾರಂಭಿಸಿದ್ದಾರೆ. ಲಿಫ್ಟ್‌ನಲ್ಲಿ ಇವರ ಜತೆ ಇದ್ದ ಮಹಿಳೆ ತಮ್ಮ ಫ್ಲೋರ್ ತಲುಪಿ ಕೆಳಗಿಳಿಯುತ್ತಿದ್ದಂತೆ, ಇಬ್ಬರ ನಡುವಿನ ಮಾತಿನ ಚಕಮಕಿ ವಿಕೋಪಕ್ಕೆ ಹೋಗಿದೆ. ಟಿ-ಶರ್ಟ್ ಧರಿಸಿದ್ದ ವ್ಯಕ್ತಿ ಮೊದಲು ಕೈ ಮಾಡಿದ್ದಾರೆ. ನಂತರ ಇಬ್ಬರೂ ಪರಸ್ಪರ ಮುಷ್ಟಿ ಮಾಡಿ ಹೊಡೆದಾಡಿಕೊಂಡಿದ್ದಾರೆ.

ಈ ಬಗ್ಗೆ ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಈ ವಿಡಿಯೊ ಗಮನಿಸಿ ನೆಟ್ಟಿಗರು ಕಿಡಿಕಾರಿದ್ದು, ಇತ್ತೀಚೆಗೆ ಜನರು ನಾಗರಿಕ ಪ್ರಜ್ಞೆ ಮರೆಯುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಸಣ್ಣಪುಟ್ಟ ವಿಚಾರಗಳಿಗಾಗಿ ರೌಡಿಗಳಂತೆ ವರ್ತಿಸುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.