ಚೆನ್ನೈ, ಫೆ.19: ಈ ಭಾರಿಯ ಶಿವರಾತ್ರಿಯನ್ನು ಎಲ್ಲೆಡೆ ಅದ್ಧೂರಿಯಿಂದ ಆಚರಿಸಲಾಗಿದೆ. ಈ ನಡುವೆ ದಕ್ಷಿಣ ಕೊರಿಯಾದ ಗಾಯಕ ಔರಾ ಶಿವರಾತ್ರಿ ಆಚರಣೆಯ ಭಾಗವಾಗಿ ಭಾರಿ ಸುದ್ದಿಯಾಗಿದ್ದಾರೆ. ಖ್ಯಾತ ಗಾಯಕ ಔರಾ ಈ ಬಾರಿಯ ಮಹಾಶಿವರಾತ್ರಿಯನ್ನು ತಮಿಳುನಾಡಿನ ಚೆನ್ನೈನಲ್ಲಿ ಅತ್ಯಂತ ಭಕ್ತಿಯಿಂದ ಆಚರಿಸುವ ಮೂಲಕ ಎಲ್ಲರ ಭಾರತೀಯರ ಮನ ಗೆದ್ದಿದ್ದಾರೆ. ಶಿವನ ಸ್ತೋತ್ರ ಪಠಿಸುತ್ತಾ ಶಿವನ ಆರಾಧನೆಯಲ್ಲಿ ಮುಳುಗಿರುವ ಅವರ ವಿಡಿಯೊ ವೈರಲ್ (Viral Video) ಆಗಿದೆ.
ದಕ್ಷಿಣ ಕೊರಿಯಾದ ಪಾಪ್ ಗಾಯಕ ಔರಾ ಚೆನ್ನೈನಲ್ಲಿ ಮಹಾಶಿವರಾತ್ರಿಯ ಹೃದಯಸ್ಪರ್ಶಿ ಅನುಭವವನ್ನು ಹಂಚಿಕೊಂಡಿದ್ದಾರೆ. ಸಾಂಪ್ರದಾಯಿಕ ಬಿಳಿ ಮುಂಡು, ನೀಲಿ ಶರ್ಟ್ ಧರಿಸಿದ್ದ ಅವರು, ಹಬ್ಬದ ವಾತಾವರಣವನ್ನು ವಿಭಿನ್ನವಾಗಿಸಿದ್ದಾರೆ. ಇವರು ಶಿವ ತಾಂಡವ ಸ್ತೋತ್ರವನ್ನು ಪಠಿಸಿದ ರೀತಿ ಎಲ್ಲರಿಗೂ ಅಚ್ಚರಿ ಉಂಟು ಮಾಡಿದೆ. ಶಿವ ತಾಂಡವ ಸ್ತೋತ್ರವನ್ನು ಯಾವುದೇ ತಪ್ಪಿಲ್ಲದೆ ಅವರು ಪಠಿಸಿದ್ದಾರೆ.
ವಿಡಿಯೊ ನೋಡಿ:
ಸಂಸ್ಕೃತ ಶ್ಲೋಕಗಳು, ಲಯ ಮತ್ತು ಉಚ್ಚಾರಣೆಗೆ ಹೆಸರುವಾಸಿಯಾಗಿದ್ದು ಈ ಸ್ತೋತ್ರವು ಸ್ಥಳೀಯ ಭಾಷಿಕರಿಗೂ ಕೂಡ ಸವಾಲಿನದ್ದಾಗಿದೆ. ಆದಾಗ್ಯೂ, ಔರಾ ಫೋನ್ ಅಥವಾ ಪುಸ್ತಕವನ್ನು ನೋಡದೆ ಅದನ್ನು ಆತ್ಮವಿಶ್ವಾಸದಿಂದ ಪಠಿಸಿದ್ದಾರೆ. ದೇವಸ್ಥಾನದಲ್ಲಿದ್ದ ಮತ್ತೊಬ್ಬ ಭಕ್ತೆ ಮೊಬೈಲ್ ನೋಡಿ ಸ್ತೋತ್ರ ಹೇಳಿದರೆ ಔರಾ ಯಾವ ಸಹಾಯವಿಲ್ಲದೆ ನಿರರ್ಗಳವಾಗಿ ಪಠಿಸಿದು ಗಮನ ಸೆಳೆದಿದೆ.
ರೀಲ್ಸ್ ತಂದ ಅವಾಂತರ; ವಿಡಿಯೊ ಮಾಡುತ್ತ ಮೈಮರೆತು ಚರಂಡಿಗೆ ಬಿದ್ದ ಯುವತಿ
ಈ ಅನುಭವವನ್ನು ಹಂಚಿಕೊಂಡ ಔರಾ ದೇವಾಲಯ ಭೇಟಿಯನ್ನು ಮರೆಯಲಾಗದ ಆಶೀರ್ವಾದ ಎಂದು ಕರೆದಿದ್ದಾರೆ. ಭಕ್ತರ ಸಮ್ಮುಖದಲ್ಲಿ ಜಪ ಮಾಡುವುದು ಆಳವಾದ ಭಾವನಾತ್ಮಕ ಅನುಭವವನ್ನು ನೀಡಿದೆ. ತಾನು ಭಾರತದಲ್ಲಿ ಹುಟ್ಟದಿದ್ದರೂ ಇಲ್ಲಿನ ಸಂಸ್ಕೃತಿ ಮತ್ತು ಸಂಪ್ರದಾಯದ ಮೇಲೆ ನನಗೆ ಬಹಳಷ್ಟು ಗೌರವವಿದೆ ಎಂದಿದ್ದಾರೆ. ಹಬ್ಬಕ್ಕೆ ಕೆಲವೇ ದಿನಗಳ ಮೊದಲು, ಔರಾ ಶಿವ ಶಿವಂ ಎಂಬ ಸಂಗೀತ ವಿಡಿಯೊವನ್ನು ಬಿಡುಗಡೆ ಮಾಡಿದರು. ಇದು ಅವರ ಆಧ್ಯಾತ್ಮಿಕ ಒಲವು ಮತ್ತು ಭಾರತೀಯ ಸಂಸ್ಕೃತಿಯ ಬಗ್ಗೆ ಮೆಚ್ಚುಗೆಯನ್ನು ಸಾರಿ ಹೇಳಿದೆ.