ಭೋಪಾಲ್: ಪ್ರತಿಯೊಂದಕ್ಕೂ ಅತ್ಯಗತ್ಯ ದಾಖಲೆ ಅಂದ್ರೆ ಅದು ಆಧಾರ್ ಕಾರ್ಡ್.. ಆದರೆ ಈ ದಾಖಲೆ ಅಪ್ ಡೇಟ್ ಮಾಡುವುದೇ ಈಗ ರಾಜ್ಯದಲ್ಲಿ ದೊಡ್ಡ ಸವಾಲಾಗಿ ಹೋಗಿದೆ. ಚಿಕ್ಕ ಮಕ್ಕ ಳಿಂದ ಹಿಡಿದು ಹಿರಿಯವರಗೆ ಹೊಸದಾಗಿ ಆಧಾರ್ ಮಾಡಿಸಲು, ತಿದ್ದುಪಡಿ ಮಾಡಲು , ಅಪ್ ಡೇಟ್ ಮಾಡಲು ಹೀಗೆ ದಿನಗಟ್ಟಲೆ ಅಲೆಯಬೇಕಾದ ಸ್ಥಿತಿ ಉಂಟಾಗಿದೆ. ಇತ್ತೀಚೆಗಷ್ಟೇ ವೃದ್ಧ ರೊಬ್ಬರು ಆಧಾರ್ ಕೆವೈಸಿಗಾಗಿ ಮನೆಯಲ್ಲಿರುವ ಲ್ಯಾಂಡ್ ಫೋನ್ ಅನ್ನೇ ಸೇವಾ ಕೆಂದ್ರಕ್ಕೆ ತೆಗೆದು ಕೊಂಡಿರುವ ವಿಡಿಯೊ ವೈರಲ್ ಆಗಿತ್ತು. ಇದೀಗ ಈ ಆಧಾರ್ ಅಪ್‌ಡೇಟ್‌ಗಾಗಿ ಒಬ್ಬ ತಂದೆ ತನ್ನ ಅಂಗವಿಕಲ ಮಗನನ್ನು 66 ಕಿ.ಮೀ ದೂರ ತನ್ನ ಹೆಗಲ ಮೇಲೆ ಕೂರಿಸಿಕೊಂಡು ಕರೆದೊಯ್ದ ವಿಚಾರ ಭಾರೀ ವೈರಲ್ (Viral News) ಆಗಿದೆ. ತನ್ನ ಮಗನನ್ನು ಹೊತ್ತುಕೊಂಡು ಕಚೇರಿ -ಕಚೇರಿಗೂ ಅಲೆದರೂ ಕೂಡ ಮಾತ್ರ ಪ್ರಯೋಜನವಾಗಿಲ್ಲ. ಈ ಹೃದಯವಿದ್ರಾವಕ ಘಟನೆ ಮಧ್ಯ ಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ನಡೆದಿದ್ದು ನೆಟ್ಟಿಗರು ಅಧಿಕಾರಗಳ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
55 ವರ್ಷದ ಭೋಲಾ ಮಿಶ್ರಾ ಆಧಾರ್ ಕಾರ್ಡ್ ನವೀಕರಿಸಲು ತನ್ನ ಮಗನನ್ನು ಹೊತ್ತುಕೊಂಡೆ ಇಟೌರಾ ಗ್ರಾಮದಿಂದ 66 ಕಿಲೋಮೀಟರ್ ದೂರ ನಡೆದಿದ್ದಾರೆ. ಅವರ 18 ವರ್ಷದ ಮಗ ದೈಹಿಕ ವಾಗಿ ಅಸಮರ್ಥರಾಗಿದ್ದರು. ಆತನ ಆಧಾರ್ ಕೆವೈಸಿ ಕಳೆದ ಆರು ತಿಂಗಳಿಂದ ಅಪ್‌ಡೇಟ್ ಆಗಿಲ್ಲ. ಇದರಿಂದಾಗಿ ಕುಟುಂಬಕ್ಕೆ ಸಿಗಬೇಕಿದ್ದ ಆಹಾರ ಧಾನ್ಯ ಮತ್ತು ಮಗನಿಗೆ ಬರುತ್ತಿದ್ದ ಪಿಂಚಣಿ ಸಂಪೂರ್ಣವಾಗಿ ನಿಲ್ಲಿಸಲಾಗಿತ್ತು. ಹೀಗಾಗಿ 55 ವರ್ಷದ ಭೋಲಾ ಮಿಶ್ರಾ ಮಗನ ಆಧಾರ್ ಕಾರ್ಡ್ ನವೀಕರಿಸಲು ಇಟೌರಾ ಗ್ರಾಮದಿಂದ 66 ಕಿಲೋ ಮೀಟರ್ ದೂರ ಪ್ರಯಾಣಿಸಿದ್ದಾರೆ. ತಮ್ಮ 18 ವರ್ಷದ ಅಂಗವಿಕಲ ಮಗ ಓಂನನ್ನು ಹೊತ್ತುಕೊಂಡು ನಡೆದಿದ್ದಾರೆ.
Viral Video: ಗುರುವೇ ಹೀಗಾದ್ರೆ ಮಕ್ಕಳ ಕಥೆಯೇನು? ಈತನ ಪಾಠ ಕೇಳಿದ್ರೆ ನಿಮ್ಗೆ ಶಾಕ್ ಆಗುತ್ತೆ- ವಿಡಿಯೊ ನೋಡಿ
ತನ್ನ ಮಗ ಓಂನ ಬೆರಳಚ್ಚುಗಳು ಸ್ಪಷ್ಟವಾಗಿಲ್ಲದ ಕಾರಣ ಸಿಸ್ಟಂನಲ್ಲಿ ಅಪ್ ಡೇಟ್ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಕೇಂದ್ರದ ಸಿಬ್ಬಂದಿ 'ಸಿಸ್ಟಂ ಪ್ರಿಂಟ್‌ಗಳನ್ನು ಹೊಂದಿ ಸಲು ಸಾಧ್ಯವಿಲ್ಲ' ಎಂದು ಹೇಳಿ ಅಪ್‌ಡೇಟ್ ಮಾಡಲು ನಿರಾಕರಿಸಿದ್ದಾರೆ. ಹೀಗಾಗಿ ಭೋಳಾ ಮಿಶ್ರಾ ಅವರು ತಹ ಶಿಲ್ದಾರ್ ಕಚೇರಿ, ಪಡಿತರ ಅಂಗಡಿ ಮತ್ತು ಆಧಾರ್ ಸೇವಾ ಕೇಂದ್ರ ಗಳಿಗೆ ನಡುವೆ ತಿಂಗಳುಗಟ್ಟಲೆ ಅಲೆದು ಸುಸ್ತಾಗಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲೂ ಯಾರಿಗೂ ತಮ್ಮ ಕಷ್ಟವನ್ನು ಹೇಳಿ ಕೊಳ್ಳಲು ಅವಕಾಶ ಸಿಗಲಿಲ್ಲ.
ಹೀಗಾಗಿ ಅಲೆದು ಸುಸ್ತಾದ ಭೋಳಾ ಮಿಶ್ರಾ ಅವರು ಮಗನನ್ನು ಹೊತ್ತುಕೊಂಡೆ ಆಧಾರ್ ಕೇಂದ್ರಕ್ಕೆ ತೆರಳಿದ್ದಾರೆ. ಆದರೆ ಅಲ್ಲಿಯೂ ಪರಿಹಾರ ಸಿಗದೆ ನಿರಾಶರಾಗಿ ಮನೆಗೆ ಮರಳಿರುವ ಘಟನೆ ನಡೆದಿದೆ. ಈ ಘಟನೆ ವರದಿಯಾದ ನಂತರ, ಕಟ್ನಿ ಜಿಲ್ಲಾಧಿಕಾರಿ ಆಶೀಶ್ ತಿವಾರಿ ಅವರು ಪ್ರತಿಕ್ರಿಯೆ ನೀಡಿ ದ್ದಾರೆ. ಯುವಕನ ಆಧಾರ್ ಅಪ್‌ಡೇಟ್ ಮಾಡಲು ಮತ್ತು ಪಿಂಚಣಿ ಸೌಲಭ್ಯಗಳನ್ನು ನೀಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಆಧಾರ್ ತಿದ್ದುಪಡಿಗಾಗಿ ಸರಕಾರ ಬೇರೆ ವ್ಯವಸ್ಥೆ ಜಾರಿ ಮಾಡಿದರೆ ಒಳಿತು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು ಅಧಿಕಾರಿಗಳು ಬಡವರ ಪರ ಕೆಲಸ ಮಾಡಲು ಸಿದ್ದ ಇರುವುದಿಲ್ಲ.. ಬಡ ತಂದೆ ಎಷ್ಷು ನೊಂದಿರಬೇಕು ಎಂದು ಕಾಮೆಂಟ್ ಹಾಕಿದ್ದಾರೆ.