ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಗುರುವೇ ಹೀಗಾದ್ರೆ ಮಕ್ಕಳ ಕಥೆಯೇನು? ಈತನ ಪಾಠ ಕೇಳಿದ್ರೆ ನಿಮ್ಗೆ ಶಾಕ್‌ ಆಗುತ್ತೆ- ವಿಡಿಯೊ ನೋಡಿ

ಛತ್ತೀಸ್‌ಗಢದ ಬಲರಾಮಪುರ ಜಿಲ್ಲೆಯಲ್ಲಿ ಸಹಾಯಕ ಶಿಕ್ಷಕ ಮಕ್ಕಳಿಗೆ ಇಂಗ್ಲಿಷ್‌ ಪದಗಳನ್ನು ತಪ್ಪಾಗಿ ಕಲಿಸುತ್ತಿದ್ದ ವಿಡಿಯೋ ವೈರಲ್ ಆಗಿದೆ. ಈ ವಿಚಾರ ಶಿಕ್ಷಣ ಅಧಿಕಾರಿಗೆ ತಲುಪಿದ ನಂತರ ಶಿಕ್ಷಕನನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ. ಈ ಘಟನೆ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಅರ್ಹತೆ ಮತ್ತು ತರಬೇತಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಛೇ... ಇವನೆಂಥಾ ಶಿಕ್ಷಕ? ಇವ್ನ ಬಳಿ ವಿದ್ಯೆ ಕಲಿತವರ ಗತಿ ಅಷ್ಟೇ!

ತಪ್ಪಾಗಿ ಕಾಗುಣಿತ ಹೇಳಿಕೊಟ್ಟ ಶಿಕ್ಷಕ -

Profile
Pushpa Kumari Nov 18, 2025 4:59 PM

ಛತ್ತೀಸ್‌ಗಢ: ಕಳೆದ ಕೆಲವು ದಿನಗಳ ಹಿಂದಷ್ಟೇ ಶಾಲೆಯ ಶಿಕ್ಷಕರೊಬ್ಬರು ಮಕ್ಕಳಿಗೆ ತಪ್ಪಾಗಿ 'ಎಬಿಸಿಡಿ' ಹೇಳಿಕೊಟ್ಟಿರುವ ವಿಡಿಯೊ ವೈರಲ್ ಆಗಿತ್ತು. ಈ ದೃಶ್ಯ ಹಲವರ ನಗುವಿಗೆ ಕಾರಣ ವಾಗಿದ್ದು ಕೆಲವರು ಹಾಸ್ಯವಾಗಿ ಪರಿಗಣಿಸಿದರೆ, ಇನ್ನೂ ಕೆಲವರು ಮಕ್ಕಳ ಭವಿಷ್ಯದ ಬಗ್ಗೆ ಪ್ರಶ್ನೆ ಮಾಡಿದ್ದರು. ಇದೀಗ ಮತ್ತೊಮ್ಮೆ ಇಂತಹುದೇ ಘಟನೆಯೊಂದು ನಡೆದಿದ್ದು ಛತ್ತೀಸ್‌ಗಢದ ಬಲ ರಾಮಪುರ ಜಿಲ್ಲೆಯಲ್ಲಿ ಸಹಾಯಕ ಶಿಕ್ಷಕ ಮಕ್ಕಳಿಗೆ ಇಂಗ್ಲಿಷ್‌ ಪದಗಳನ್ನು ತಪ್ಪಾಗಿ ಕಲಿಸುತ್ತಿದ್ದ ವಿಡಿಯೋ ವೈರಲ್ (Viral Video) ಆಗಿದೆ. ಈ ವಿಚಾರ ಶಿಕ್ಷಣ ಅಧಿಕಾರಿಗೆ ತಲುಪಿದ ನಂತರ ಶಿಕ್ಷಕನನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ. ಈ ಘಟನೆ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಅರ್ಹತೆ ಮತ್ತು ತರಬೇತಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಛತ್ತೀಸ್‌ಗಢದ ಬಲರಾಂಪುರ ಜಿಲ್ಲೆಯಲ್ಲಿನ ಮಚಂದಂಡ್ ಕೊಗ್ವಾರ್ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು ಸಹಾಯಕ ಶಿಕ್ಷಕ ಪ್ರವೀಣ್ ಟೊಪ್ಪೊ ಅವರು ವಿದ್ಯಾರ್ಥಿಗಳಿಗೆ ತಪ್ಪಾದ ಇಂಗ್ಲಿಷ್ ಕಾಗುಣಿತಗಳನ್ನು ಹೇಳಿಕೊಟ್ಟಿದ್ದಾರೆ. ವಿಡಿಯೋದಲ್ಲಿ, ಅವರು ಮೂಗಿನ 'ನೋಸ್' ಎಂಬ ಪದಕ್ಕೆ "ನೋಗೆ" "ಇಯರ್" ಪದಕ್ಕೆ 'ಇಯೆರ್' ಮತ್ತು "ಐ" ಪದಕ್ಕೆ "ಐಯ್" ನಂತಹ ಕಾಗುಣಿತಗಳನ್ನು ಬರೆದು ಕಲಿಸುತ್ತಿರುವ ದೃಶ್ಯ ಕಂಡುಬಂದಿದೆ. ಅಲ್ಲದೆ, ಅವರಿಗೆ ವಾರದ ದಿನಗಳು ಮತ್ತು ಕುಟುಂಬದ ಸದಸ್ಯರ ಹೆಸರುಗಳನ್ನು ಬರೆಯಲು ಕೂಡ ತಿಳಿದಿರಲಿಲ್ಲ ಎಂದು ವರದಿ ಯಾಗಿದೆ.

ವಿದ್ಯಾರ್ಥಿಗಳಿಗೆ ತಪ್ಪು ಕಾಗುಣಿತ ಕಲಿಸಿದ ಶಿಕ್ಷಕ

ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದ ಆಕ್ರೋಶ ಕೇಳಿಬಂದಿದೆ. ಇದನ್ನು ಜಲ್ಲಾ ಶಿಕ್ಷಣಾಧಿಕಾರಿ ಎಂ.ಆರ್. ಯಾದವ್ ಅವರು ತಕ್ಷಣವೇ ಘಟನೆಯ ಬಗ್ಗೆ ತನಿಖೆ ಮಾಡಲು ಆದೇಶಿಸಿದರು. ತದನಂತರ, ಶಾಲೆಯ ಸಮೂಹ ಸಂಯೋಜಕರು ಭೇಟಿ ನೀಡಿ ಪರಿಶೀಲನೆ ಮಾಡಿದಾಗ ಶಿಕ್ಷಕರು ತಪ್ಪು ಮಾಹಿತಿಯನ್ನು ಬೋಧಿಸುತ್ತಿರುವುದು ದೃಢ ಪಟ್ಟಿದೆ.

ದರೋಡೆಕೋರರಿಗೇ ಚಳ್ಳೆಹಣ್ಣು ತಿನ್ನಿಸಿದ ಚಿನ್ನದ ಮಳಿಗೆ ಮಾಲೀಕ... ಈತನ ಧೈರ್ಯಕ್ಕೊಂದು ಸಲಾಂ! ವಿಡಿಯೊ ನೋಡಿ

ತನಿಖಾ ವರದಿ ಆಧರಿಸಿ, ಶಿಕ್ಷಣ ಇಲಾಖೆಯು ಪ್ರವೀಣ್ ತೊಪ್ಪೋ ಅವರನ್ನು ಅಮಾನತು ಮಾಡ ಲಾಗಿದೆ. ಪ್ರಸ್ತುತ ಈ ಶಾಲೆಯಲ್ಲಿ ಒಟ್ಟು 42 ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಮಾತ್ರ ಇದ್ದು, ಅವರಲ್ಲಿ ಒಬ್ಬರು ಈಗ ಅಮಾನತುಗೊಂಡಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಇವರು ಓದಿ ಸರಕಾರಿ ಕೆಲಸ ಗಿಟ್ಟಿಸಿಕೊಂಡದಲ್ಲ ಇರಬೇಕು..ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು ಇಂತಹ ಶಿಕ್ಷಕರಿದ್ದರೆ ಮಕ್ಕಳ ಭವಿಷ್ಯ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.

ಸದ್ಯ ಪೋಷಕರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.ಮತ್ತು ತಮ್ಮ ಮಕ್ಕಳು ಸರಿಯಾದ ಶಿಕ್ಷಣ ವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಅರ್ಹ ಬದಲಿ ಶಿಕ್ಷಕರನ್ನು ಶೀಘ್ರದಲ್ಲೇ ನೇಮಿಸ ಬೇಕೆಂದು ವಿನಂತಿಸಿದ್ದಾರೆ. ಇತ್ತೀಚೆಗೆ ದೇಶದಾದ್ಯಂತ ಶಿಕ್ಷಕರು ಕಳಪೆ ಭಾಷಾ ಜ್ಞಾನವನ್ನು ಪ್ರದರ್ಶಿಸಿದ ಹಲವಾರು ಪ್ರಕರಣಗಳು ವರದಿಯಾಗಿದ್ದು, ಈ ಘಟನೆಯು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೌಶಲ್ಯ ಮತ್ತು ತರಬೇತಿ ಸುಧಾರಣೆಯ ಅಗತ್ಯವನ್ನು ಒತ್ತಿ ಹೇಳುತ್ತದೆ..