ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವಂದೇ ಭಾರತ್ ರೈಲಿನಲ್ಲಿ ಕಸ ಹಾಕಿದ ಹೆಕ್ಕಿಸಿದ ತಂದೆ; ಶ್ಲಾಘನೆ ವ್ಯಕ್ತ ಪಡಿಸಿದ ನೆಟ್ಟಿಗರು!

Viral Video: ಇಲ್ಲೊಬ್ಬ ತಂದೆ ತನ್ನ ಎರಡು ವರ್ಷದ ಪುಟ್ಟ ಮಗನಿಗೆ ನಾಗರಿಕ ಪ್ರಜ್ಞೆಯ ಪಾಠ ಮಾಡಿಸಿ ದ್ದಾರೆ. ವಂದೇ ಭಾರತ್ ರೈಲಿನ ನೆಲದಲ್ಲಿ ಬಾಲಕನು ಚಿಪ್ಸ್ ಚೆಲ್ಲಿರುತ್ತಾನೆ. ಇದನ್ನು ಗಮನಿಸಿದ ತಂದೆಯೂ ಮಗನಿಗೆ ನಮ್ಮ ಕಸವನ್ನು ನಾವೇ ಕ್ಲೀನ್ ಮಾಡಬೇಕು ಎಂದು ಬುದ್ದಿಮಾತು ಹೇಳಿ ಮಗನಿಂದಲೇ ಕಸವನ್ನು ವಿಲೇವಾರಿ ಮಾಡಿಸಿದ್ದಾರೆ. ಸದ್ಯ ಈ ವಿಡಿಯೊಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಮಗನಿಂದಲೇ ಕಸ ವಿಲೇವಾರಿ ಮಾಡಿಸಿದ ತಂದೆ

ನವದೆಹಲಿ,ಫೆ.25: "ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ" ಎಂಬ ಗಾದೆಮಾತನ್ನು ನೀವು ಕೇಳಿರಬಹುದು. ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಸರಿಯಾದ ಬುದ್ದಿ, ಒಳ್ಳೆಯ ಗುಣಗಳನ್ನು ಕಲಿಸಿದರೆ ಮಾತ್ರ ದೊಡ್ಡವರಾದ ಮೇಲೆ ಕಲಿಯಲು ಸಾಧ್ಯ. ಇದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಬ್ಬ ತಂದೆ ತನ್ನ ಎರಡು ವರ್ಷದ ಪುಟ್ಟ ಮಗನಿಗೆ ನಾಗರಿಕ ಪ್ರಜ್ಞೆಯ ಪಾಠ ಮಾಡಿಸಿದ್ದಾರೆ. ವಂದೇ ಭಾರತ್ ರೈಲಿನ ನೆಲದಲ್ಲಿ ಬಾಲಕನು ಚಿಪ್ಸ್ ಚೆಲ್ಲಿರುತ್ತಾನೆ. ಇದನ್ನು ಗಮನಿಸಿದ ತಂದೆಯೂ ಮಗನಿಗೆ ನಮ್ಮ ಕಸವನ್ನು ನಾವೇ ಕ್ಲೀನ್ ಮಾಡಬೇಕು ಎಂದು ಬುದ್ದಿಮಾತು ಹೇಳಿ ಮಗನಿಂದಲೇ ಕಸವನ್ನು ವಿಲೇವಾರಿ ಮಾಡಿಸಿದ್ದಾರೆ. ಸದ್ಯ ಈ ವಿಡಿಯೊಗೆ (Viral Video) ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರೈಲ್ವೆ ಬೋಗಿಯೊಳಗೆ ನಡೆದ ಈ ಒಂದು ಸಣ್ಣ ಘಟನೆಯು ನಾಗರಿಕ ಜವಾಬ್ದಾರಿ ಮತ್ತು ಪೋಷಕರ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ತಂದೆ ಅವ್ಯವಸ್ಥೆಯನ್ನು ನಿರ್ಲಕ್ಷಿಸುವ ಬದಲು ಅರ್ಥಪೂರ್ಣ ಪಾಠವನ್ನು ಪುಟ್ಟ ಮಗನಿಗೆ ಮಾಡಿದ್ದಾರೆ.

ವಿಡಿಯೋ ನೋಡಿ:



ರೈಲಿನಲ್ಲಿ ಪ್ರಯಾಣಿಸುವಾದ ಸಮಲ್ ಎಂಬ ಎರಡು ವರ್ಷದ ಬಾಲಕ ಆಟದ ಸಮಯದಲ್ಲಿ ಸ್ವಚ್ಛವಾದ ಕೋಚ್ ನೆಲದ ಮೇಲೆ ಚಿಪ್ಸ್ ಚೆಲ್ಲಿದಾನೆ. ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಪೋಷಕರು ಮಗುವನ್ನು ಬೈದು ಅಥವಾ ತಾವೇ ಕ್ಲೀನ್ ಮಾಡುತ್ತಾರೆ. ಆದರೆ ಇಲ್ಲಿ ತಂದೆಯ ಅತ್ಯಂತ ಶಾಂತವಾಗಿ ಮಗನಿಗೆ ಒಂದು ಪ್ರಶ್ನೆ ಕೇಳುತ್ತಾರೆ. ಈ ಕಸವನ್ನು ಯಾರು ಸ್ವಚ್ಛ ಮಾಡಬೇಕು? ಮಗು ಹಿಂಜರಿದಾಗ, ರೈಲು ತನ್ನ ಮನೆ ಯಲ್ಲದಿದ್ದರೂ, ಅದು ಇನ್ನೂ ಇತರರ ಹಂಚಿಕೆಯ ಸಾರ್ವಜನಿಕ ಸ್ಥಳ ಎಂದು ವಿವರಿಸಿದರು.

Viral News: ಈ ದೇಶದ ಮಹಿಳೆಯರಿಗೆ ಬಾಡಿಗೆ ಗಂಡ ಬೇಕಂತೆ! ಸರ್ಕಾರವೇ ವಿದೇಶಿ ಹುಡುಗರಿಗೆ ಆಹ್ವಾನ ನೀಡುತ್ತೆ, ಎಲ್ಲಿದೆ ಈ ಕಂಟ್ರಿ?

ನಾವು ಮಾಡಿದ ಗಲೀಜನ್ನು ಬೇರೆಯವರು ಬಂದು ಸ್ವಚ್ಛಗೊಳಿಸುವುದಕ್ಕೆ ಬಿಡಬಾರದು‌. ನಮ್ಮ ಕಸ ನಾವೇ ತೆಗೆಯಬೇಕು ಎಂದಿದ್ದಾರೆ.‌ ತಂದೆಯ ಮಾತನ್ನು ಅರ್ಥ ಮಾಡಿಕೊಂಡ ಆ ಪುಟ್ಟ ಬಾಲಕ, ತಕ್ಷಣವೇ ತಾನೇ ಬಾಗಿ ನೆಲದ ಮೇಲಿದ್ದ ಚಿಪ್ಸ್ ತುಣುಕುಗಳನ್ನು ಒಂದೊಂದಾಗಿ ಆಯ್ದು ಕಸದ ಬುಟ್ಟಿಗೆ ಹಾಕಿದ್ದಾನೆ.‌ ಸದ್ಯ ಈ ವೀಡಿಯೊ ತ್ವರಿತವಾಗಿ ಗಮನ ಸೆಳೆದಿದ್ದು ಅನೇಕ ವೀಕ್ಷಕರು ತಂದೆಯ ಕೆಲಸಕ್ಕೆ ಶ್ಲಾಘಿಸಿದರು.

ಬಳಕೆದಾರರೊಬ್ಬರು ನಾಗರಿಕ ಪ್ರಜ್ಞೆಯನ್ನು ಚಿಕ್ಕ ವಯಸ್ಸಿನಿಂದಲೇ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದ ಎಂದು ಬರೆದಿದ್ದಾರೆ.ಮತ್ತೊಬ್ಬರು ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವುದು ಕೇವಲ ಸಿಬ್ಬಂದಿಯ ಕೆಲಸವಲ್ಲ, ಅದು ಪ್ರಯಾಣಿಕರ ಕರ್ತವ್ಯವೂ ಹೌದು ಎಂದಿದ್ದಾರೆ