ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಬಾಡಿಗೆಗೆ ಬೇಸತ್ತು ಬಸ್ಸನ್ನೇ ಮನೆಯನ್ನಾಗಿ ಮಾಡಿದ್ರು! ಇದನ್ನು ನೋಡಿದ್ರೆ ನಿಮ್ಗೂ ಶಾಕ್‌ ಆಗುತ್ತೆ

Old bus turned into new home: ಹೆಚ್ಚುತ್ತಿರುವ ಬಾಡಿಗೆ ವೆಚ್ಚಗಳಿಂದ ಬೇಸತ್ತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳು ಹಳೆಯ ಡಬ್ಬಲ್ ಡೆಕ್ಕರ್ ಟೂರ್ ಬಸ್ ಒಂದನ್ನು ಖರೀದಿಸಿ ಮನೆಯನ್ನಾಗಿ ಪರಿವರ್ತಿಸಿದ್ದಾರೆ. ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್‌ನಲ್ಲಿ ಈ ಬಸ್ ಅನ್ನು ಖರೀದಿಸಿದ್ದಾರೆ.

ಅಬ್ಬಾ... ಇವ್ರ ತಲೆಯೇ! ಬಸ್ಸನ್ನು ಮನೆಯನ್ನಾಗಿ ಮಾಡಿದ ಸ್ಟೂಡೆಂಟ್ಸ್‌

-

Priyanka P Priyanka P Sep 1, 2025 5:53 PM

ಲಂಡನ್: ವಿದ್ಯಾರ್ಥಿಗಳೆಲ್ಲರೂ ಕಲಿಕೆಯಲ್ಲಿ ಮುಂದಿರದೆ ಇರಬಹುದು. ಆದರೆ ಸೃಜನಶೀಲತೆ ವಿಚಾರಕ್ಕೆ ಬಂದಾಗ ಅವರು ಮುಂಚೂಣಿಯಲ್ಲಿರುತ್ತಾರೆ. ಇದಕ್ಕೆ ಒಂದು ಅದ್ಭುತ ಉದಾಹರಣೆಯೆಂದರೆ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ( Oxford University) ಇಬ್ಬರು ವಿದ್ಯಾರ್ಥಿಗಳು, ಹೆಚ್ಚುತ್ತಿರುವ ಬಾಡಿಗೆ ವೆಚ್ಚಗಳಿಂದ ಬೇಸತ್ತಿದ್ದರು. ಹೀಗಾಗಿ ಶಿಥಿಲಗೊಂಡ ಡಬಲ್ ಡೆಕ್ಕರ್ ಬಸ್ (bus) ಖರೀದಿಸಿ ಅದನ್ನು ಮನೆಯನ್ನಾಗಿ ಪರಿವರ್ತಿಸಲು ನಿರ್ಧರಿಸಿದರು. ಈ ರೂಪಾಂತರವು ಅನೇಕರನ್ನು ಅಚ್ಚರಿಗೊಳಿಸಿದೆ.

ವಸತಿ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ 20 ವರ್ಷದ ಲಿಯೋ ಬೆವನ್ ಮತ್ತು ಕಿಟ್ ರೆನ್‌ಶಾ, ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್ ಮೂಲಕ ಹಳೆಯ ಡಬಲ್ ಡೆಕ್ಕರ್ ಬಸ್ ಖರೀದಿಸಿದರು. ಅಂದಿನಿಂದ ಅದನ್ನು ತಮ್ಮ ನಿವಾಸವನ್ನಾಗಿ ಮಾಡಿಕೊಂಡಿದ್ದಾರೆ. ಅಂತಿಮ ವರ್ಷದ ಅಧ್ಯಯನ ಮಾಡುತ್ತಿರುವ ಈ ವಿದ್ಯಾರ್ಥಿಗಳು ವರ್ಷಕ್ಕೆ ಪೌಂಡ್ 9,000 ರಿಂದ ಪೌಂಡ್ 10,000 (ಸುಮಾರು ರೂ.10 ಲಕ್ಷದಿಂದ ರೂ.11 ಲಕ್ಷ) ವಸತಿ ವೆಚ್ಚಗಳೊಂದಿಗೆ ಹೆಣಗಾಡುತ್ತಿದ್ದರು.

bus3

ಲಿಯೋ ತನ್ನ ಮೊದಲ ವರ್ಷದಲ್ಲಿ ವಿಶ್ವವಿದ್ಯಾಲಯದ ವಸತಿಗಾಗಿ ಈಗಾಗಲೇ ಪೌಂಡ್ 7,500, ಎರಡನೇ ವರ್ಷದಲ್ಲಿ ಪೌಂಡ್ 6,500 ಪಾವತಿಸಿದ್ದರು. ಅಂತಿಮ ವರ್ಷದಲ್ಲಿ ಪೌಂಡ್ 10,000 ಪಾವತಿಸಬೇಕಾಗಿತ್ತು. ಹೆಚ್ಚುತ್ತಿರುವ ವೆಚ್ಚದಿಂದ ಬಹಳ ತೊಂದರೆಗೊಳಗಾಗಿದ್ದರು. ಹೀಗಾಗಿ ಹೊಸ ಐಡಿಯಾ ಮಾಡಿದ ಇವರು ಬಸ್ ಒಂದನ್ನು ಖರೀದಿಸಿ ಮನೆಯನ್ನಾಗಿ ಪರಿವರ್ತಿಸಿದ್ದಾರೆ.

ಇದನ್ನೂ ಓದಿ: Viral Video: ಬ್ಯಾಂಕ್ ಮ್ಯಾನೇಜರ್ ಮೇಲೆ ಮುಸುಕುಧಾರಿಗಳಿಂದ ಹಲ್ಲೆ

bus1

ಜೂನ್ 2024 ರಲ್ಲಿ, ಲಿಯೋ ಮತ್ತು ಕಿಟ್ 44 ಅಡಿ ಉದ್ದದ ಡಬಲ್ ಡೆಕ್ಕರ್ ಬಸ್ ಅನ್ನು ಕೇವಲ ಪೌಂಡ್ 5,000 (ಸುಮಾರು ರೂ. 5.9 ಲಕ್ಷ) ಗೆ ಖರೀದಿಸುವಲ್ಲಿ ಯಶಸ್ವಿಯಾದರು. ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್‌ನಲ್ಲಿ 30 ನಿಮಿಷಗಳಲ್ಲಿ ಒಪ್ಪಂದವನ್ನು ಪೂರ್ಣಗೊಳಿಸಿದರು. ಬಸ್ ಚಾಲನೆಯಲ್ಲಿರುವ ಸ್ಥಿತಿಯಲ್ಲಿಲ್ಲದ ಕಾರಣ, ಅದನ್ನು ಲಿವರ್‌ಪೂಲ್‌ನಿಂದ ಆಕ್ಸ್‌ಫರ್ಡ್‌ಗೆ ತರಲು ಅವರು ಪೌಂಡ್ 1,300 (ರೂ. 1.5 ಲಕ್ಷ) ಪಾವತಿಸಬೇಕಾಯಿತು.

ಅವರು ಈಗ ವಾಹನವನ್ನು ಗೊತ್ತುಪಡಿಸಿದ ಸ್ಥಳದಲ್ಲಿ ನಿಲ್ಲಿಸುತ್ತಾರೆ. ವಾರಕ್ಕೆ ಪೌಂಡ್ 73 (ರೂ. 8,690) ಪಾರ್ಕಿಂಗ್ ಶುಲ್ಕವನ್ನು ಪಾವತಿಸುತ್ತಾರೆ. ವರ್ಷದ ಅಂತ್ಯದ ವೇಳೆಗೆ, ಈ ಪರ್ಯಾಯ ವಸತಿ ಪರಿಹಾರವು ಅವರಿಗೆ £ 2,500 ರಿಂದ £ 3,500 (ರೂ. 2.9 ಲಕ್ಷದಿಂದ ರೂ. 4 ಲಕ್ಷ) ಉಳಿಯುವ ನಿರೀಕ್ಷೆಯಿದೆ.

bus

ಅಂದಹಾಗೆ, ಬಸ್ ಅನ್ನು ವಾಸಯೋಗ್ಯ ಸ್ಥಳವನ್ನಾಗಿ ಪರಿವರ್ತಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಬಸ್‍ನ ಒಳಭಾಗವು ಕಳಪೆ ಸ್ಥಿತಿಯಲ್ಲಿತ್ತು. ಸತ್ತ ಇಲಿಗಳು, ಸೂಜಿಗಳು ಎಲ್ಲೆಡೆ ಹರಡಿಕೊಂಡಿತ್ತು. ವಿದ್ಯಾರ್ಥಿಗಳು ಸ್ವತಃ ನವೀಕರಣವನ್ನು ಪ್ರಾರಂಭಿಸಿದರು. ಪ್ರಯಾಣಿಕರ ಮತ್ತು ಚಾಲಕನ ಆಸನಗಳು ಇತ್ಯಾದಿಗಳನ್ನು ತೆಗೆದು ಹಾಕಿದರು. ಲೆದರ್ ಸೀಟು, ಕಪಾಟುಗಳು, ಟಿವಿ ಮತ್ತು ಧ್ವನಿ ವ್ಯವಸ್ಥೆಯಂತಹ ಕೆಲವು ಮೂಲ ವೈಶಿಷ್ಟ್ಯಗಳನ್ನು ಉಳಿಸಿಕೊಳ್ಳಲು ಮತ್ತು ನವೀಕರಿಸಲು ಆಯ್ಕೆ ಮಾಡಿಕೊಂಡರು. ಆದರೆ, ಬಸ್‌ನಲ್ಲಿ ಸ್ನಾನಗೃಹವಿಲ್ಲ, ಆದ್ದರಿಂದ ಇಬ್ಬರೂ ಸ್ನೇಹಿತರ ಮನೆಗಳಲ್ಲಿ ಸ್ನಾನ ಮಾಡುತ್ತಿದ್ದಾರೆ.

ಲಿಯೋ ಮತ್ತು ಕಿಟ್ ಈ ಯೋಜನೆಯು ಸವಾಲುಗಳಿಂದ ತುಂಬಿದೆ ಎಂದು ಹೇಳಿದರು. ಆದರೆ ಅನುಭವವು ರೋಮಾಂಚಕಾರಿ ಮತ್ತು ಪ್ರತಿಫಲದಾಯಕವಾಗಿದೆ ಎಂದು ಹೇಳಿದ್ದಾರೆ. ಮೂಲ ಸೆಟಪ್‌ನಿಂದ ಸಾಧ್ಯವಾದಷ್ಟು ಮರುಬಳಕೆ ಮಾಡುತ್ತಿದ್ದೇವೆ. ಇನ್ನೂ ಮಾಡಬೇಕಾದ ಕೆಲಸಗಳಿವೆ. ನೆಲಹಾಸು ಹಾಕುವುದು, ಗೋಡೆಗಳನ್ನು ದುರಸ್ತಿ ಮಾಡುವುದು, ಅಡುಗೆಮನೆ ಮತ್ತು ಶೌಚಾಲಯವನ್ನು ಅಳವಡಿಸುವುದು ಇತ್ಯಾದಿ ಪ್ರಮುಖ ಕೆಲಸಗಳು ಬಾಕಿಯಿದೆ. ಅದನ್ನೂ ಪೂರ್ಣಗೊಳಿಸುತ್ತೇವೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.