ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಪ್ರೇಯಸಿ ಜೊತೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿರಾಯ; ನಡುರಸ್ತೆಯಲ್ಲೇ ನಡೀತು ಜಡೆಜಗಳ- ಇಲ್ಲಿದೆ ವಿಡಿಯೊ

Fierce Fight Erupts: ಮಹಿಳೆಯೊಬ್ಬರು ತನ್ನ ಪತಿಯನ್ನು ಆತನ ಗೆಳತಿಯೊಂದಿಗೆ ರೆಡ್ ಹ್ಯಾಂಡ್ ಆಗಿ ಹಿಡಿದ ನಂತರ ರಸ್ತೆ ಮಧ್ಯದಲ್ಲೇ ಭಾರಿ ಜಗಳ ನಡೆದಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಈ ಘಟನೆಯನ್ನು ವ್ಯಕ್ತಿಯೊಬ್ಬರು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಕಾನ್ಪುರ: ರಸ್ತೆ ಮಧ್ಯದಲ್ಲಿ ಪತಿ-ಪತ್ನಿ ನಡುವೆ ಭಾರಿ ಜಗಳ ನಡೆದ ಘಟನೆ ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ ನಡೆದಿದೆ. ಮಹಿಳೆಯೊಬ್ಬಳು ತನ್ನ ಪತಿಯನ್ನು ಆತನ ಗೆಳತಿಯೊಂದಿಗೆ ರೆಡ್ ಹ್ಯಾಂಡ್ ಆಗಿ ಹಿಡಿದ ನಂತರ ಜಗಳ ನಡೆದಿದೆ. ಈ ಜಗಳ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗಿದೆ. ಪತ್ನಿ ಮತ್ತು ಗೆಳತಿ ರಸ್ತೆಯಲ್ಲಿ ಸಾರ್ವಜನಿಕರ ಮುಂದೆ ಹೊಡೆದಾಡಿಕೊಂಡಿದ್ದಾರೆ.

ಕಾನ್ಪುರದ ನರ್ವಾಲ್ ಮಾಡ್ ಬಳಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮಹಿಳೆ ತನ್ನ ಪತಿಯನ್ನು ಗೆಳತಿಯೊಂದಿಗೆ ನೋಡಿದ ನಂತರ ಆತನೊಂದಿಗೆ ಜಗಳ ಪ್ರಾರಂಭಿಸಿದ್ದಾಳೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಮಾತಿನ ಚಕಮಕಿ ತೀವ್ರಗೊಳ್ಳುತ್ತಿದ್ದಂತೆ ಗೆಳತಿ ಕೂಡ ಮಧ್ಯಪ್ರವೇಶಿಸಿದ್ದಾಳೆ. ಈ ವೇಳೆ ಇಬ್ಬರ ನಡುವೆ ಹೊಡೆದಾಟವೂ ನಡೆದಿದೆ. ಈ ಘಟನೆಯನ್ನು ವ್ಯಕ್ತಿಯೊಬ್ಬರು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೊ ವೀಕ್ಷಿಸಿ:



ಮಹಿಳೆ ತನ್ನ ಗಂಡನಿಗೆ ಅನೈತಿಕ ಸಂಬಂಧವಿದೆ ಎಂದು ಅನುಮಾನಿಸಿದ್ದಳು. ರಸ್ತೆಮಧ್ಯೆ ಅವರಿಬ್ಬರನ್ನು ನೋಡಿದಾಗ ಅವಳ ಸಂಶಯ ನಿಜವಾಯಿತು. ಗಂಡ ಮತ್ತು ಅವನ ಗೆಳತಿ ಅವಳನ್ನು ನೋಡಿ ಆಘಾತಕ್ಕೊಳಗಾದರು. ಈ ವೇಳೆ ಗಂಡನ ಬಳಿ ಬಂದು ಹೆಂಡತಿಯು ಪ್ರಶ್ನಿಸಲು ಪ್ರಾರಂಭಿಸಿದಳು. ಇದು ಪತಿ-ಪತ್ನಿ ನಡುವೆ ನಡುರಸ್ತೆಯಲ್ಲೇ ಜಗಳಕ್ಕೆ ಕಾರಣವಾಯಿತು. ಜಗಳ ತೀವ್ರಗೊಳ್ಳುತ್ತಿದ್ದಂತೆ ಪತಿ ತನ್ನ ಹೆಂಡತಿಯನ್ನು ರಸ್ತೆಯ ಮಧ್ಯದಲ್ಲಿ ಕಪಾಳಮೋಕ್ಷ ಮಾಡಿದನು. ಅಷ್ಟೇ ಅಲ್ಲ, ಆತನ ಗೆಳತಿ ಕೂಡ ಅವನ ಹೆಂಡತಿಯ ಮೇಲೆ ಹಲ್ಲೆ ಮಾಡಿದಳು.

ಇದನ್ನೂ ಓದಿ: Hardik Pandya: ವದಂತಿಯ ಮಧ್ಯೆ ಮುಂಬೈ ವಿಮಾನ ನಿಲ್ದಾಣದಲ್ಲಿ ಮಹಿಕಾ ಜತೆ ಕಾಣಿಸಿಕೊಂಡ ಹಾರ್ದಿಕ್ ಪಾಂಡ್ಯ

ವಿಡಿಯೊದಲ್ಲಿ, ಪತಿಯು ಅವನ ಗೆಳತಿಯನ್ನು ಬೆಂಬಲಿಸುತ್ತಾ ಪತ್ನಿಯನ್ನು ಹೊಡೆಯುವಂತೆ ಹೇಳುತ್ತಿರುವುದು ಕಂಡುಬರುತ್ತದೆ. ವಿಡಿಯೊದಲ್ಲಿ ಅವನು ಅವಳಿಗೆ ಹೊಡಿ ಎಂದು ಕೂಗುತ್ತಿರುವುದು ಕಂಡುಬರುತ್ತದೆ. ಇದನ್ನು ಕೇಳಿದ ಗೆಳತಿ ಆತ ಹೇಳಿದಂತೆ ಮಾಡಿದ್ದಾಳೆ. ಹೀಗಾಗಿ ಇದು ಇಬ್ಬರು ಮಹಿಳೆಯರ ನಡುವೆ ಕಾದಾಟಕ್ಕೆ ಕಾರಣವಾಯಿತು. ಇಬ್ಬರು ಪರಸ್ಪರ ರಸ್ತೆಯಲ್ಲಿ ತಮ್ಮ ಕೂದಲನ್ನು ಎಳೆದುಕೊಂಡಿದ್ದು, ಪರಸ್ಪರ ತಳ್ಳಾಟ-ನೂಕಾಟ ಮತ್ತು ಹೊಡೆಯುವುದು ಕಂಡುಬಂದಿದೆ. ಪಕ್ಕದಲ್ಲಿ ವಾಹನಗಳು ಚಲಿಸುತ್ತಿದ್ದರೂ ಯಾವುದಕ್ಕೂ ಕ್ಯಾರೆ ಎನ್ನದ ಇಬ್ಬರೂ ಜಗಳವಾಡಿದ್ದಾರೆ.

ಇನ್ನು ಪತ್ನಿ ಮತ್ತು ಗೆಳತಿಯ ನಡುವೆ ಜಡೆ ಜಗಳ ನಡೆಯುತ್ತಿದ್ದರೂ ಪತಿ ಮಹಾಶಯ ಮಾತ್ರ ಮಧ್ಯಪ್ರವೇಶಿಸಲಿಲ್ಲ. ಆದರೆ, ಆತ ತನ್ನ ಗೆಳತಿಗೆ ಸಪೋರ್ಟ್ ಮಾಡುತ್ತಾ ಪತ್ನಿಗೆ ಹೊಡೆಯುವಂತೆ ತಿಳಿಸಿದ್ದಾನೆ. ಈ ಘಟನೆಯನ್ನು ರಸ್ತೆಯ ಬದಿಯಲ್ಲಿ ಮೂಕ ಪ್ರೇಕ್ಷಕನಂತೆ ನಿಂತಿದ್ದ ಆ ವ್ಯಕ್ತಿಯನ್ನು ನೋಡುಗರು ಮಧ್ಯಪ್ರವೇಶಿಸಿ ಜಗಳ ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ. ಬಳಿಕ ಆ ವ್ಯಕ್ತಿ ಮಧ್ಯಪ್ರವೇಶಿಸಿ ಜಗಳ ನಿಲ್ಲಿಸಲು ಪ್ರಯತ್ನಿಸಿದನು. ಆದರೆ ಅವನ ಹೆಂಡತಿ ಅವನ ಮಾತನ್ನು ಕೇಳಲಿಲ್ಲ, ಅವನನ್ನು ತಳ್ಳಿದ್ದಾಳೆ.