ದೆಹಲಿ, ಮೇ 1: ಇತ್ತೀಚೆಗೆ ಹೆಚ್ಚಿನವರು ಪ್ರಯಾಣಕ್ಕಾಗಿ ರೈಲು ಸಂಚಾರವನ್ನೇ ಅವಲಂಬಿಸಿದ್ದಾರೆ. ಕಡಿಮೆ ವೆಚ್ಚದ ಜತೆಗೆ ಪ್ರಯಾಣವು ಸುಲಭ ಎನ್ನುವುದು ಇದಕ್ಕೆ ಕಾರಣ. ಅದರಲ್ಲೂ ನಗರಗಳಲ್ಲಿ ಮೆಟ್ರೋ ಪ್ರಯಾಣ ಅತ್ಯಂತ ಆರಾಮದಾಯಕ ಎನಿಸಿಕೊಂಡಿದೆ. ಆದರೆ ಸಾರ್ವಜನಿಕ ಸ್ಥಳದಲ್ಲಿ ಪ್ರಯಾಣಿಕರ ನಡುವೆ ಜಗಳ, ಕಿತ್ತಾಟ ಹೆಚ್ಚಾಗಿದೆ. ಅಂತಹದ್ದೇ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ. ಮೆಟ್ರೋದ ಕಿಕ್ಕಿರಿದು ತುಂಬಿದ ಬೋಗಿಯಲ್ಲಿ ಸೀಟಿನ ವಿಚಾರವಾಗಿ ಕಿತ್ತಾಟ ನಡೆದಿದ್ದು, ಮಹಿಳೆ ಹಾಗೂ ಪುರುಷ ಪ್ರಯಾಣಿಕನ ನಡುವೆ ಜಗಳ ಭುಗಿಲೆದ್ದಿದೆ. ಈ ವಾಗ್ವಾದವು ಬಳಿಕ ದೈಹಿಕ ಘರ್ಷಣೆಗೂ ಕಾರಣವಾಯಿತು. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral Video) ಆಗಿದೆ.
ದೆಹಲಿ ಮೆಟ್ರೋದಲ್ಲಿ ಸೀಟಿನ ವಿಚಾರದಲ್ಲಿ ತೀವ್ರ ಜಗಳ ನಡೆದಿದೆ. ಈ ದೃಶ್ಯವು ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಗಳ ನಡವಳಿಕೆ ಮತ್ತು ಹೆಚ್ಚುತ್ತಿರುವ ಪ್ರಯಾಣಿಕರ ಒತ್ತಡದ ಬಗ್ಗೆ ಚರ್ಚೆ ಹುಟ್ಟು ಹಾಕಿದೆ. ಮೊದಲಿಗೆ ಪುರುಷ ಪ್ರಯಾಣಿಕ ಹಾಗೂ ಮಹಿಳೆಯ ನಡುವೆ ಮಾತಿನ ಚಕಮಕಿ ನಡೆದಿದ್ದು ಬಳಿಕ ಮಹಿಳೆ ಪುರುಷನಿಗೆ ಕಪಾಳಮೋಕ್ಷ ಮಾಡಿದ್ದಾಳೆ.
ವಿಡಿಯೊ ನೋಡಿ:
ಘರ್ ಕೆ ಕಲೇಶ್ ಖಾತೆಯಿಂದ ಹಂಚಿಕೊಳ್ಳಲಾದ ವೈರಲ್ ವಿಡಿಯೊ ತುಂಬಿದ ಮೆಟ್ರೋ ಕೋಚ್ ಅನ್ನು ತೋರಿಸುತ್ತದೆ. ಸ್ವಲ್ಪ ಹೊತ್ತಿನಲ್ಲೇ ಮಹಿಳೆ ಮತ್ತು ಪುರುಷ ಪ್ರಯಾಣಿಕರ ನಡುವೆ ಕಿತ್ತಾಟ ಆರಂಭವಾಗಿದೆ. ವಾಗ್ವಾದ ಹೆಚ್ಚುತ್ತಿದ್ದಂತೆ ಮಹಿಳೆಯೊಬ್ಬಳು ಸಿಟ್ಟಿನಿಂದ ಪುರುಷ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ್ದಾಳೆ. ಇದರಿಂದ ಆ ವ್ಯಕ್ತಿ ತಕ್ಷಣ ಎದ್ದು ನಿಂತು ಆಕೆಗೆ ಹೊಡೆಯಲು ತೆರಳಿದ್ದಾನೆ, ಇದರಿಂದ ಅಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಶಾಲಾ ಬಸ್ಸಿನಲ್ಲಿ ನೇತಾಡುತ್ತಾ ಹೋಗುತ್ತಿರುವ ವಿದ್ಯಾರ್ಥಿಗಳು
ಈ ಸಂದರ್ಭ ಪ್ರಯಾಣಿಕರು ಮಧ್ಯಪ್ರ ವೇಶಿಸಿ ಇಬ್ಬರನ್ನೂ ಕಂಪಾರ್ಟ್‌ಮೆಂಟ್‌ನೊಳಗೆ ಸಮಾಧಾನದಿಂದ ಇರಲು ಪ್ರಯತ್ನಿಸಿದ್ದಾರೆ. ಆದರೆ ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ.ಈ ಬಗ್ಗೆ ನೆಟ್ಟಿಗರು ಕೂಡ ಕಿಡಿಕಾರಿದ್ದು ಸಾರ್ವಜನಿಕ ಸಾರಿಗೆಯಲ್ಲಿ ಇಂತಹ ಘಟನೆ ಇಂದು ಸಾಮಾನ್ಯವಾಗಿ ಬಿಟ್ಟಿದೆ ಎಂದಿದ್ದಾರೆ.
ಬಳಕೆದಾರರೊಬ್ಬರು ಇಂದು ದೆಹಲಿ ಮೆಟ್ರೋ ಮನರಂಜನಾ ತಾಣವಾಗಿದೆ ಎಂದು ಹಾಸ್ಯ ಮಾಡಿದ್ದಾರೆ. ಮತ್ತೊಬ್ಬರು ಸರ್ಕಾರಿ ಬಸ್, ರೈಲು ಪ್ರಯಾಣ ಎಲ್ಲದರಲ್ಲೂ ಮಹಿಳೆಯರದ್ದೇ ದರ್ಬಾರ್. ಪುರುಷರು ಏನು ಮಾಡಬೇಕು? ಎಂದು ಪ್ರಶ್ನಿಸಿದ್ದಾರೆ.