ನವದೆಹಲಿ,ಮಾ.25: ಉದ್ಯೋಗ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಗೂ ಬಹಳ ಮುಖ್ಯವಾಗುತ್ತದೆ. ಆದರೆ ಇಂದು ಶಿಕ್ಷಣ ವಂತರಿಗೂ ಉದ್ಯೋಗ ಪಡೆದುಕೊಳ್ಳುವುದು ಬಹಳಷ್ಟು ಕಷ್ಟಕರ. ಅದರೆ ಇಲ್ಲೊಂದು ಯುವತಿಯೂ ವಿದೇಶದಲ್ಲಿ ಕೆಲಸ ಸಿಕ್ಕಿದೆ ಎಂದು ನಂಬಿ ಮೊದಲ ದಿನವೇ ಕೆಲಸ ದಿಂದ ವಜಾ ಗೊಂಡಿರುವ ಘಟನೆ ನಡೆದಿದೆ. ಕಂಪನಿಯ ನಡವಳಿಕೆ ಬಗ್ಗೆ ಯುವತಿ ಆಕ್ರೋಶ ವ್ಯಕ್ತ (Viral News) ಪಡಿಸಿದ್ದಾಳೆ.
ವಿದೇಶದ ಫಾರ್ಮಸಿಯಲ್ಲಿ ಯುವತಿಯೊಬ್ಬಳಿಗೆ ಕೆಲಸ ಸಿಕ್ಕಿತ್ತು. ಇದನ್ನು ನಂಬಿ ಆಕೆಯೂ ತನ್ನ ಇದ್ದ ಕೆಲಸವನ್ನು ಕೂಡ ಬಿಟ್ಟು ಇದ್ದ ಮನೆಯನ್ನು ಕೂಡ ಬದಲಾಯಿಸಿದ್ದಾಳೆ. ಆದರೆ ಮೊದಲ ದಿನವೇ ಕಂಪನಿಗೆ ಭೇಟಿ ಕೊಟ್ಟ ಯುವತಿಗೆ ಶಾಕ್ ಎದುರಾಗಿದೆ. ಕಂಪನಿಯೂ ಆಕೆಯನ್ನು ಒಂದೇ ದಿನದಲ್ಲಿ ಕೆಲಸದಿಂದ ತೆಗೆದುಹಾಕಿದೆ. ಇದರಿಂದ ನೊಂದ ಯುವತಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾಳೆ.
Viral News: ಬೆಳಗ್ಗೆ 6:30ಕ್ಕೆ ಆಫೀಸ್‌ಗೆ ಹಾಜರಾಗಬೇಕು ಎಂಬ ಆದೇಶಕ್ಕೆ ಜೆನ್ ಝೀ ಉದ್ಯೋಗಿಯ ಖಡಕ್ ರೆಸ್ಪಾನ್ಸ್
ಇತ್ತೀಚೆಗೆ ನಾನು ಪೋರ್ಟ್ ಅಲ್ಬರ್ನಿಯ ನೋ ಫ್ರಿಲ್ಸ್ ನಲ್ಲಿ ಫಾರ್ಮಸಿ ಸಹಾಯಕಿಯಾಗಿ ನೇಮಕಗೊಂಡೆ. ಕೆಲಸವನ್ನು ಸ್ವೀಕರಿಸುವ ಮೊದಲು, ಫಾರ್ಮಸಿ ವ್ಯವಸ್ಥಾಪಕರು ಆ ಸ್ಥಾನವನ್ನು ತೆಗೆದು ಕೊಳ್ಳಲು ನನ್ನನ್ನು ನೇರವಾಗಿ ಪ್ರೋತ್ಸಾಹಿಸಿದರು. ಅದರ ಆಧಾರದ ಮೇಲೆ, ನಾನು ಸ್ಥಳಾಂತರಗೊಳ್ಳುವ ದೊಡ್ಡ ನಿರ್ಧಾರವನ್ನು ತೆಗೆದುಕೊಂಡೆ. ಇದರಿಂದ ತನಗಿದ್ದ ಹಳೆಯ ಕೆಲಸ ತೊರೆದು ತನ್ನ ಮನೆಯನ್ನು ಬದಲಾಯಿಸಿದೆ.
ಆದರೆ ಕೆಲಸಕ್ಕೆ ಹಾಜರಾದ ಕೆಲವೇ ಗಂಟೆಯಲ್ಲಿ ಯಾವುದೇ ಸೂಚನೆ ನೀಡದೆ ತೆಗೆದು ಹಾಕಿದ್ದಾರೆ. ಈ ಘಟನೆಗಳ ತೀವ್ರ ತಿರುವು ತನ್ನನ್ನು ಆಘಾತ ಮತ್ತು ಹತಾಶೆಗೊಳಿಸುವಂತೆ ಮಾಡಿದೆ. ಈಗ ಕೈಯಲ್ಲಿ ಕೆಲಸವಿಲ್ಲದೆ ಅಜ್ಞಾತ ಸ್ಥಳದಲ್ಲಿ ಸಿಲುಕಿಕೊಂಡಿದ್ದೀನೆ ಎಂದಿದ್ದಾರೆ. ಕಂಪನಿಯ ಈ ನಿರ್ಧಾರಕ್ಕೆ ಮಹಿಳೆ ದೂರು ನೀಡಲು ಮುಂದಾಗಿದ್ದಾಳೆ. ಈ ಪೋಸ್ಟ್ ನೋಡಿದ ನೆಟ್ಟಿಗರು ಕಂಪನಿಯ ನಡೆಯ ಬಗ್ಗೆ ತೀವ್ರವಾಗಿ ಖಂಡಿಸಿದ್ದಾರೆ.