ಹೈದರಾಬಾದ್, ಮಾ. 8: ಹೈದರಾಬಾದ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕಿಂಗ್‌ಫಿಷರ್ ಬಿಯರ್ ಬಾಟಲಿಯೊಳಗೆ ಜೀವಂತ ಮೀನು ಪತ್ತೆಯಾಗಿದ್ದು, ಮದ್ಯ ಖರೀದಿಸಿದ ಗ್ರಾಹಕ ಶಾಕ್‌ಗೆ ಒಳಗಾಗಿದ್ದಾನೆ. ಬಾಟಲಿಯನ್ನು ಓಪನ್ ಮಾಡಿದ ಕೂಡಲೇ ಆ ವ್ಯಕ್ತಿ ಬಿಯರ್‌ನಲ್ಲಿ ಏನೋ ತೇಲುತ್ತಿರುವುದನ್ನು ಗಮನಿಸಿದ್ದಾನೆ. ಸರಿಯಾಗಿ ಗಮನಿಸಿದಾಗ ಬಿಯರ್ ಬಾಟಲಿಯೊಳಗೆ ಒಂದು ಸಣ್ಣ ಮೀನು ಈಜುತ್ತಿರುವುದು ಕಂಡುಬಂದಿದೆ. ಈ ಅನಿರೀಕ್ಷಿತ ದೃಶ್ಯವು (Viral Video) ನೆಟ್ಟಿಗರಿಗೆ ಆಘಾತ ತಂದಿದೆ.
ಮಾಹಿತಿಯ ಪ್ರಕಾರ ಮಲ್ಲಾಪುರದ ಸ್ಥಳೀಯ ಮದ್ಯದಂಗಡಿ ಜೇಪಿ ವೈನ್ ಶಾಪ್‌ನಿಂದ ಗ್ರಾಹಕ ಕಿಂಗ್‌ಫಿಷರ್ ಬಿಯರ್ ಬಾಟಲಿಯನ್ನು ಖರೀದಿಸಿದಾಗ ಈ ಘಟನೆ ಸಂಭವಿಸಿದೆ. ಗ್ರಾಹಕನು ಬಾಟಲಿ ಕೈಗೆತ್ತಿಕೊಂಡಾಗ ಅದರೊಳಗೆ ಏನೋ ಚಲಿಸುತ್ತಿರುವ ದೃಶ್ಯ ಗಮನಕ್ಕೆ ಬಂದಿದೆ. ಹತ್ತಿರದಿಂದ ಪರಿಶೀಲಿಸಿದಾಗ ಮೀನು ಎಂದು ಗೊತ್ತಾಗಿದೆ. ಪರಿಸ್ಥಿತಿಯ ಅರಿತುಕೊಂಡ ಆ ವ್ಯಕ್ತಿ ತಕ್ಷಣ ಅಂಗಡಿ ಸಿಬ್ಬಂದಿ ಮತ್ತು ವ್ಯವಸ್ಥಾಪಕರ ಗಮನಕ್ಕೆ ತಂದಿದ್ದಾನೆ.
ವಿಡಿಯೊ ನೋಡಿ:
ಸಿಬ್ಬಂದಿ ದೂರನ್ನು ಗಂಭೀರವಾಗಿ ಪರಿಗಣಿಸುವ ಬದಲು ಇದನ್ನು ನಿರಾಕರಿಸಿದ್ದಾರೆ ಎಂದು ಗ್ರಾಹಕ ಹೇಳಿದ್ದಾನೆ. ʼʼನಾವು ಕೇವಲ ಬಂದ ಮದ್ಯವನ್ನು ಮಾರಾಟ ಮಾಡುತ್ತೇವೆ ಅಷ್ಟೇ. ಅದನ್ನು ತಯಾರು ಮಾಡುವುದು ನಾವಲ್ಲ. ಇದಕ್ಕೆ ನಮ್ಮಿಂದ ಪರಿಹಾರ ಇಲ್ಲ. ಏನಿದ್ದರೂ ಕಂಪನಿಗೆ ದೂರು ನೀಡಿʼʼ ಎಂದು ಹೇಳಿ ಜಾರಿಕೊಂಡಿದ್ದಾರೆ ಎನ್ನಲಾಗಿದೆ.
ಜನ ನಿಬಿಡ ರಸ್ತೆ ಮಧ್ಯೆ ನಮಾಜ್ ಮಾಡಿದ ಮಹಿಳೆ; ವಾಹನ ಸವಾರರು ಹೈರಾಣ
ಅಂಗಡಿಯ ಪ್ರತಿಕ್ರಿಯೆಯಿಂದ ನಿರಾಶೆಗೊಂಡ ಗ್ರಾಹಕ ಘಟನೆಯ ಬಗ್ಗೆ ದೂರು ನೀಡಲು ನಿರ್ಧರಿಸಿದ್ದಾನೆ. ಬಿಯರ್ ಬಾಟಲಿಯೊಳಗೆ ಸಣ್ಣ ಮೀನು ಚಲಿಸುತ್ತಿರುವುದನ್ನು ತೋರಿಸುವ ವಿಡಿಯೊವನ್ನು ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿದ್ದಾನೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಮದ್ಯದ ಬಾಟಲಿಗಳ ಸೀಲಿಂಗ್ ಮತ್ತು ಗುಣಮಟ್ಟದ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.