ಲಖನೌ, ಡಿ. 24: ಒಂದೇ ಬೈಕ್‍ನಲ್ಲಿ ಐದು ಮಂದಿ ಯುವಕರು ಸವಾರಿ ಮಾಡುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (viral video) ಆಗಿದೆ. ಉತ್ತರ ಪ್ರದೇಶದ (Uttar Pradesh) ಹಾಪುರದ ರಾಷ್ಟ್ರೀಯ ಹೆದ್ದಾರಿ 9 (NH-9) ನಲ್ಲಿ ಈ ಘಟನೆ ನಡೆದಿದೆ. ಐವರು ಯುವಕರಲ್ಲಿ ಒಬ್ಬನನ್ನು ಮತ್ತೊಬ್ಬ ಹಿಡಿದು ಸರ್ಕಸ್ ಮಾಡುತ್ತ ಸಾಗಿದ್ದಾರೆ. ಹಿಂದೆ ಕುಳಿತಿದ್ದ ಯುವಕ ಈ ಸವಾರಿಯನ್ನು ರೆಕಾರ್ಡ್ ಮಾಡಿದ್ದಾನೆ.
ಈಗ ವೈರಲ್ ಆಗಿರುವ ಈ ವಿಡಿಯೊವನ್ನು ಬೈಕ್ ಅನ್ನು ಹಿಂಬಾಲಿಸಿದ ವಾಹನ ಸವಾರರು ತಮ್ಮ ಮೊಬೈಲ್ ಫೋನ್‍ನಲ್ಲಿ ಚಿತ್ರೀಕರಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಕೂಡಲೇ ಸ್ಥಳೀಯ ಅಧಿಕಾರಿಗಳು ಗಮನಿಸಿದ್ದಾರೆ. ಈ ಸಂಬಂಧ ಪಿಲ್ಖುವಾ ಕೊಟ್ವಾಲಿಯ ಪೊಲೀಸರು, ಯುವಕರ ವಿರುದ್ಧ ಸಂಚಾರ ಉಲ್ಲಂಘನೆ ಪ್ರಕರಣ ದಾಖಲಿಸಿ, ಅಜಾಗರೂಕ ಚಾಲನೆಗಾಗಿ 31,000 ರೂ. ದಂಡ ವಿಧಿಸಿದ್ದಾರೆ.
ಮಗನ ಹುಟ್ಟುಹಬ್ಬ ಆಚರಿಸಲು ರಸ್ತೆ ಮಧ್ಯೆಯೇ ಪಟಾಕಿ ಹಚ್ಚಿದ ಉದ್ಯಮಿ: ಪ್ರಶ್ನಿಸಿದವರ ಮೇಲೆ ರೇಗಾಡಿ ಧಿಮಾಕು
ಸಂಚಾರ ನಿಯಮಗಳನ್ನು ಉಲ್ಲಂಘಿಸದಂತೆ ಅಧಿಕಾರಿಗಳು ನಾಗರಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಇಂತಹ ದುಸ್ಸಾಹಸಗಳು ಸವಾರರನ್ನು ಮಾತ್ರವಲ್ಲದೆ ಇತರ ಪ್ರಯಾಣಿಕರನ್ನೂ ಅಪಾಯಕ್ಕೆ ಸಿಲುಕಿಸುತ್ತವೆ ಎಂದು ಒತ್ತಿ ಹೇಳಿದ್ದಾರೆ.
ಇಲ್ಲಿದೆ ಯುವಕರ ಬೈಕ್ ಸವಾರಿ ವಿಡಿಯೊ:
ಕೆಲವು ದಿನಗಳ ಹಿಂದೆ, ದೆಹಲಿ-ಲಖನೌ ರಾಷ್ಟ್ರೀಯ ಹೆದ್ದಾರಿಯ ಹಾಪುರ್ ಭಾಗದಲ್ಲಿ ಇದೇ ರೀತಿಯ ಅಪಾಯಕಾರಿ ಕೃತ್ಯ ವರದಿಯಾಗಿತ್ತು. ಜನನಿಬಿಡ ಹೆದ್ದಾರಿಯ ಮೇಲೆ ಹಾದುಹೋಗುವ ರೈಲ್ವೆ ಸೇತುವೆಯ ಮೇಲೆ ವ್ಯಕ್ತಿಯೊಬ್ಬ ಅಪಾಯಕಾರಿ ಸಾಹಸ ಮಾಡುತ್ತಿರುವ ವಿಡಿಯೊ ವೈರಲ್ ಆಗಿತ್ತು.
ದೃಶ್ಯಗಳಲ್ಲಿ, ಆ ವ್ಯಕ್ತಿ ರಸ್ತೆಯಿಂದ ಹಲವಾರು ಅಡಿ ಎತ್ತರದ ಕಬ್ಬಿಣದ ರೈಲ್ವೆ ಸೇತುವೆಯಿಂದ ನೇತಾಡಿದ್ದಾನೆ. ಹೈವೆಯಲ್ಲಿ ವಾಹನಗಳು ವೇಗವಾಗಿ ಸಾಗುತ್ತಿದ್ದರೂ, ಯುವಕನ ಸೇತುವೆ ಅಂಚಿನಿಂದ ನಿಂತುಕೊಂಡು ಪುಲ್-ಅಪ್ ಪ್ರದರ್ಶಿಸಿದ್ದಾನೆ. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಮತ್ತೊಂದು ವಿಡಿಯೊದಲ್ಲಿ, ವ್ಯಕ್ತಿಯೊಬ್ಬ ರೈಲ್ವೆ ಹಳಿಗಳ ಮೇಲೆ ಚಲಿಸುವ ರೈಲಿನ ಪಕ್ಕದಲ್ಲಿ ಓಡುತ್ತಿರುವುದು, ಪುಷ್-ಅಪ್‌ಗಳನ್ನು ಮಾಡುವುದು ಮತ್ತು ನೇರವಾಗಿ ಹಳಿಗಳ ಮೇಲೆ ಹಾರಿರುವುದು ಕಂಡುಬಂದಿದೆ. ಈ ದೃಶ್ಯಗಳು ಪಿಲ್ಖುವಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿವೆ ಎಂದು ಹೇಳಲಾಗಿದೆ.
ಈ ಘಟನೆಗಳ ಹೊರತಾಗಿ, ಕೆಲವು ತಿಂಗಳ ಹಿಂದೆ, ಬಾಗ್‌ಪತ್ ಬಳಿಯ NH-9ರಲ್ಲಿ ಚಲಿಸುತ್ತಿರುವ SUVಯ ಮೇಲೆ ಅಪಾಯಕಾರಿ ಸಾಹಸ ಪ್ರದರ್ಶಿಸಿದ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿತ್ತು. ವೈರಲ್ ಆಗಿರುವ ವಿಡಿಯೊದಲ್ಲಿ ಸ್ಕಾರ್ಪಿಯೋ ಚಾಲಕ ಅಪಾಯವನ್ನು ಮೈಮೇಲೆ ಎಳೆದುಕೊಂಡು ದುಸ್ಸಾಹಸ ಪ್ರದರ್ಶಿಸಿದ್ದ. ಪ್ರಯಾಣಿಕರ ಬದಿಯ ಎರಡೂ ಬಾಗಿಲುಗಳು ತೆರೆದೇ ಇದ್ದವು. ಅವನು ಸೀಟಿನಿಂದ ಎದ್ದು ಬಾನೆಟ್ ಮೇಲೆ ನಿಂತು, ಸ್ಟೀರಿಂಗ್ ವೀಲ್ ಅನ್ನು ಹಾಗೇ ಬಿಟ್ಟಿದ್ದನು.
ಒಂದು ಹಂತದಲ್ಲಿ, ಅವನು ಕಾರಿನ ವಿಂಡ್‌ಶೀಲ್ಡ್‌ಗೆ ಒರಗಿ, ಬಾನೆಟ್ ಮೇಲೆ ಕುಳಿತು, ಕೊನೆಗೆ ವಾಹನದ ಮೇಲೆ ಹತ್ತಿದ್ದಾನೆ. ವಾಹನ ಚಲಿಸುತ್ತಿದ್ದರೆ ಅವನು ಅದರ ಮೇಲೆ ನಿಂತಿದ್ದನು. ಈ ದುಸ್ಸಾಹಸವನ್ನು SUV ಪಕ್ಕದಲ್ಲಿ ಪ್ರಯಾಣಿಸುತ್ತಿದ್ದ ಕಾರೊಂದು ಚಿತ್ರೀಕರಿಸಿತ್ತು.