ಮಗನ ಹುಟ್ಟುಹಬ್ಬ ಆಚರಿಸಲು ರಸ್ತೆ ಮಧ್ಯೆಯೇ ಪಟಾಕಿ ಹಚ್ಚಿದ ಉದ್ಯಮಿ: ಪ್ರಶ್ನಿಸಿದವರ ಮೇಲೆ ರೇಗಾಡಿ ಧಿಮಾಕು
Viral Video: ಸಾರ್ವಜನಿಕ ರಸ್ತೆಯನ್ನು ತನ್ನ ಆಸ್ತಿಯಂತೆ ಬಳಸಿಕೊಂಡು ಮಗನ ಬರ್ತ್‌ಡೇ ಆಚರಿಸಿದ ವಿಡಿಯೊವೊಂದು ವೈರಲ್ ಆಗಿದೆ. ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿ ಮಗನ ಹುಟ್ಟುಹಬ್ಬ ಆಚರಿಸಿದ ಸೂರತ್ ಉದ್ಯಮಿಯ ವರ್ತನೆಯ ವಿರುದ್ದ ನೆಟ್ಟಿಗರು ಕಿಡಿಕಾರಿದ್ದಾರೆ. ಸದ್ಯ ಈ ವಿಡಿಯೊ ಭಾರಿ ವೈರಲ್ ಆಗಿದೆ.
ರಸ್ತೆ ತಡೆದು ಪಟಾಕಿ ಸಿಡಿಸಿದ ಉದ್ಯಮಿ -
ಗಾಂಧಿನಗರ, ಡಿ. 24: ಸಾರ್ವಜನಿಕ ಸ್ಥಳವನ್ನು ಬೇಕಾಬಿಟ್ಟಿಯಾಗಿ ಬಳಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇತ್ತೀಚೆಗಷ್ಟೇ ರಾಷ್ಟ್ರೀಯ ಹೆದ್ದಾರಿ ಮಧ್ಯೆಯೇ ಮಹಿಳೆಯೊಬ್ಬರು ಅಡುಗೆ ಮಾಡುತ್ತಿರುವ ವಿಡಿಯೊ ವೈರಲ್ (Viral Video) ಆಗಿತ್ತು. ಈ ನಡುವೆ ಸಾರ್ವಜನಿಕ ರಸ್ತೆಯನ್ನು ತನ್ನ ಆಸ್ತಿಯಂತೆ ಬಳಸಿಕೊಂಡು ಮಗನ ಬರ್ತ್‌ಡೇ ಆಚರಿಸಿದ ಉದ್ಯಮಿಯ ವಿಡಿಯೊವೊಂದು ವೈರಲ್ ಆಗಿದೆ. ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿ ಮಗನ ಹುಟ್ಟುಹಬ್ಬ ಆಚರಿಸಿದ ಸೂರತ್ ಉದ್ಯಮಿಯ ವರ್ತನೆಯ ವಿರುದ್ದ ನೆಟ್ಟಿಗರು ಕಿಡಿಕಾರಿದ್ದಾರೆ. ಸಾರ್ವಜನಿಕ ರಸ್ತೆಯನ್ನು ಮಗನ ಹುಟ್ಟುಹಬ್ಬಕ್ಕೆ ಬಳಸಿಕೊಂಡಿರುವ ವಿಡಿಯೊ ಭಾರಿ ವೈರಲ್ ಆಗಿದೆ.
ಗುಜರಾತ್‌ನ ಸೂರತ್ ಸುಲ್ತಾನಾಬಾದ್‌ನ ಜನನಿಬಿಡ ರಸ್ತೆಯಲ್ಲಿಯೇ ಈ ದೃಶ್ಯ ಕಂಡು ಬಂದಿದೆ. ಸ್ಥಳೀಯ ಉದ್ಯಮಿಯೊಬ್ಬರು ತಮ್ಮ ಮಗನ ಹುಟ್ಟುಹಬ್ಬಕ್ಕೆ ಸಾರ್ವಜನಿಕ ರಸ್ತೆಯನ್ನು ಬಳಸಿಕೊಂಡು ಟೀಕೆಗೆ ಗುರಿಯಾಗಿದ್ದಾರೆ. ಉದ್ಯಮಿ ದೀಪಕ್ ಇಜಾರ್ದಾರ್ ತಮ್ಮ ಮಗನ ಹುಟ್ಟುಹಬ್ಬದ ಸಂಭ್ರಮಕ್ಕಾಗಿ ರಸ್ತೆ ಮಧ್ಯದಲ್ಲೇ ಪಟಾಕಿಗಳನ್ನು ಸಿಡಿಸಿದ್ದಾರೆ. ರಸ್ತೆಯಲ್ಲೇ ಪಟಾಕಿ ಹಚ್ಚಿದ್ದರಿಂದ ವಾಹನ ಸವಾರರು ಆತಂಕಕ್ಕೊಳಗಾಗಿದ್ದರು.
ವಿಡಿಯೊ ನೋಡಿ:
A businessman in Gujarat caused a public uproar when he stopped traffic and set off firecrackers to mark his son’s birthday. Deepak Ijardar’s actions, which included threatening motorists with fireworks, were captured on camera and widely shared online. When confronted about the… pic.twitter.com/8TRTXzX78v
— Political Critic (@PCSurveysIndia) December 23, 2025
ದೀಪಕ್ ಇಜರ್ದಾರ್ ಎಂದು ಗುರುತಿಸಲಾದ ವ್ಯಕ್ತಿ ರಸ್ತೆಯ ಮಧ್ಯದಲ್ಲಿ ನಿಂತಿರುವುದನ್ನು ಕಾಣಬಹುದು. ಇನ್ನೊಬ್ಬ ವ್ಯಕ್ತಿ ಅವನಿಗೆ ಪಟಾಕಿಗಳನ್ನು ಹತ್ತಿಸಲು ಸಹಾಯ ಮಾಡಿದ್ದಾನೆ. ವಿಡಿಯೊದಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುವುದು ಮತ್ತು ಬೆಂಕಿಯ ಕಿಡಿಗಳ ನಡುವೆಯೇ ವಾಹನ ಸವಾರರು ಸಂಚರಿಸುವ ಅಪಾಯಕಾರಿ ದೃಶ್ಯಗಳು ಕಂಡು ಬಂದಿವೆ. ಇಷ್ಟೆಲ್ಲ ಗೊಂದಲ ಕಂಡು ಬಂದರೂ ಆ ವ್ಯಕ್ತಿ ತನ್ನ ಕೃತ್ಯವನ್ನು ಮುಂದುವರಿಸಿದ್ದಾನೆ.
ಮಿಚೆಲ್ ಒಬಾಮಾ ಹೊಸ ಫೋಟೋಶೂಟ್ ವೈರಲ್; ತೂಕ ಇಳಿಕೆಯ ಬಗ್ಗೆ ಹೊಸ ಚರ್ಚೆ
ಸಾರ್ವಜನಿಕರು ಆ ವ್ಯಕ್ತಿ ಬಳಿ ಈ ಕೃತ್ಯವನ್ನು ಪ್ರಶ್ನಿಸಿದಾಗ, ದೀಪಕ್ ಇಜಾರ್ದಾರ್ ಜನರನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ. "ನಾನೊಬ್ಬ ಸೆಲೆಬ್ರಿಟಿ. ಐದು ನಿಮಿಷಗಳ ಕಾಲ ನಿಮ್ಮನ್ನು ತಡೆಯುವುದು ಗಂಭೀರ ಅಪರಾಧವೇನಲ್ಲʼʼ ಎಂದು ಧಿಮಾಕು ಪ್ರದರ್ಶಿಸಿದ್ದಾರೆ. ಈ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಸದ್ಯ ಸಾರ್ವಜನಿಕ ರಸ್ತೆಯಲ್ಲಿ ಪಟಾಕಿ ಸಿಡಿಸಿ ಅಡ್ಡಿಪಡಿಸಿದ್ದಕ್ಕಾಗಿ ದೀಪಕ್ ಇಜರ್ದಾರ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 223ರ ಅಡಿಯಲ್ಲಿ ಪ್ರಕರಣ ದಾಖಲಿಸ ಲಾಗಿದೆ. ವಿಡಿಯೊ ನೋಡಿದ ನೆಟ್ಟಿಗರೊಬ್ಬರು "ಕಾನೂನಿನ ಮುಂದೆ ಯಾವುದೂ ಮಿಗಿಲಲ್ಲ" ಪ್ರತಿಕ್ರಿಯೆ ನೀಡಿದ್ದಾರೆ