ತಮಿಳುನಾಡು,ಅ. 25: ಪ್ರಸಿದ್ಧ ಗಿರಿಧಾಮ ಕೊಡೈಕೆನಾಲ್ ನಲ್ಲಿ ಮಳೆಯ ಅಬ್ಬರ ಜೋರಾಗಿದ್ದು ದಿಢೀರ್ ಪ್ರವಾಹ ಉಂಟಾಗಿದೆ. ಇದರಿಂದಾಗಿ ರಸ್ತೆ ಸಂಚಾರಕ್ಕೂ ತೀವ್ರ ಅಡಚಣೆಯಾಗಿದೆ. ಕಾರುಗಳು ಮತ್ತು ಬಸ್ಗಳು ಸುಮಾರು ಎರಡು ಗಂಟೆಗಳ ಕಾಲ ರಸ್ತೆಯಲ್ಲೇ ಸಿಲುಕಿಕೊಂಡಿತ್ತು. ಪ್ರವಾಹದಿಂದಾಗಿ ಸಂಚಾರ ದಟ್ಟಣೆ ಉಂಟಾಗಿದ್ದು, ಪ್ರವಾಸಿಗರು ಮತ್ತು ಇತರ ಪ್ರಯಾಣಿ ಕರು ನಿಗದಿತ ಸ್ಥಳ ತಲುಪಲು ಕಷ್ಟಪಡು ವಂತಾಯಿತು. ಈ ಆತಂಕಕಾರಿ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral Video) ಆಗುತ್ತಿದೆ.
ಈಶಾನ್ಯ ಮಾನ್ಸೂನ್ನ ಪ್ರಭಾವದಿಂದ ತಮಿಳುನಾಡಿನ ಹಲವು ಭಾಗಗಳಲ್ಲಿ ಭಾರಿ ಮಳೆ ಸುರಿಯುತ್ತಿರುವಾಗಲೇ ಈ ಘಟನೆ ನಡೆದಿದೆ. ಮುಂದಿನ ದಿನದಲ್ಲಿ ಭೀಕರ ಮಳೆಯಾಗುವ ಸಾಧ್ಯತೆ ಇದ್ದು ಈ ಪ್ರದೇಶಗಳತ್ತ ಪ್ರಯಾಣ ಮಾಡೋರು ಹವಾಮಾನ ಮುನ್ಸೂಚನೆಗಳು ಮತ್ತು ರಸ್ತೆ ಪರಿಸ್ಥಿತಿಗಳನ್ನು ಪರಿಶೀಲನೆ ಮಾಡುವಂತೆ ಸೂಚನೆ ನೀಡಲಾಗಿದೆ.
ವಿಡಿಯೋ ನೋಡಿ:
ಸಿಲ್ವರ್ ಕ್ಯಾಸ್ಕೇಡ್ ಜಲಪಾತದ ಬಳಿ, ಬೆಟ್ಟದ ಮೇಲಿಂದ ಕೆಸರು ಮಿಶ್ರಿತ ನೀರು ರಸ್ತೆಯ ಮೇಲೆ ಹರಿದುಬರುತ್ತಿರುವ ದೃಶ್ಯ ಕಾಣಬಹುದು. ರಸ್ತೆಯುದ್ದಕ್ಕೂ ನೀರು ಹರಿಯುತ್ತಿದ್ದು, ವಾಹನಗಳು ರಸ್ತೆ ಬದಿಯ ಅಂಗಡಿಗಳು ಮತ್ತು ಸ್ಟಾಲ್ಗಳ ಬಳಿ ಸ್ಥಗಿತಕೊಂಡಿವೆ. ಈ ದಿಢೀರ್ ಪ್ರವಾಹ ದಿಂದಾಗಿ ಗಿರಿಧಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸಂಚಾರಕ್ಕೆ ಅಡಚಣೆಯುಂಟಾಗಿದೆ.
"ಬೆಳ್ಳಿ ಜಲಪಾತ ಇಷ್ಟೊಂದು ರೌಧ್ರವಾಗಿ ಹರಿಯುವುದನ್ನು ನಾವೆಂದೂ ನೋಡಿರಲಿಲ್ಲ" ನೀರು ಅಷ್ಟು ರಭಷವಾಗಿ ಬರುತ್ತಿತ್ತು ಎಂದು ಪ್ರವಾಸಿಗರು ಹಾಗೂ ಸ್ಥಳೀಯರು ಸೋಷಿಯಲ್ ಮೀಡಿಯಾದಲ್ಲಿ ವೀಡಿಯೊ ಹಂಚಿಕೊಂಡು ಆತಂಕ ವ್ಯಕ್ತಪಡಿಸಿದ್ದಾರೆ. ಹವಾಮಾನ ಇಲಾಖೆ ಹಲವು ಜಿಲ್ಲೆಗಳಿಗೆ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಘೋಷಿಸಿದ್ದು, ಭಾರಿ ಮಳೆ ಮುಂದುವರಿಯುವ ಸಾಧ್ಯತೆಯಿದೆ.