ಜೈಪುರ,ಫೆ.11: ಇತ್ತೀಚಿಗೆ ಆಹಾರ ಸುರಕ್ಷಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿದರೂ ನಿಯಮ ಉಲ್ಲಂಘನೆಯ ಘಟನೆಗಳು ಹೆಚ್ಚಾಗಿವೆ. ಪ್ರತಿಷ್ಠಿತ ಹೋಟೆಲ್, ಮಾರಾಟ ಮಳಿಗೆ ಯಲ್ಲಿಯೇ ಉಲ್ಲಂಘನೆಯ ಆರೋಪಗಳು ಕೇಳಿ ಬಂದಿವೆ. ಅಂತೆಯೇ ಜೈಪುರದ ಗೌರವ್ ಟವರ್ ನಲ್ಲಿರುವ ಮೆಕ್‌ಡೊನಾಲ್ಡ್ಸ್ ಔಟ್‌ಲೆಟ್‌ನಲ್ಲಿ ಸುರಕ್ಷಿತ ಮಾನದಂಡಗಳನ್ನು ಪಾಲಿಸದೆ ಇರುವುದು ಕಂಡು ಬಂದಿದೆ. ಆಹಾರವನ್ನು ಹುರಿಯಲು ಬಳಸುವ ಅಡುಗೆ ಎಣ್ಣೆ ಸುರಕ್ಷಿತ ಬಳಕೆಯ ಮಿತಿ ಗಳನ್ನು ಮೀರಿದೆ ಎಂದು ತಪಾಸಣೆಯಲ್ಲಿ ತಿಳಿದುಬಂದಿದೆ. ಇದು ಜನರ ಆರೋಗ್ಯದ ಬಗ್ಗೆ ಕಳವಳವನ್ನು ಉಂಟು ಮಾಡಿದೆ.
ರಾಜಸ್ಥಾನದ ಪ್ರಸಿದ್ಧ ಪ್ರವಾಸಿ ತಾಣ ಜೈಪುರದ ಗೌರವ್ ಟವರ್'ನಲ್ಲಿರುವ ಮ್ಯಾಕ್‌ಡೊನಾಲ್ಡ್ಸ್ (McDonald’s) ಮಳಿಗೆಯ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಿಢೀರ್ ಆಗಿ ದಾಳಿ ನಡೆಸಿ ದ್ದಾರೆ. ತಪಾಸಣೆಯ ಸಮಯದಲ್ಲಿ, ಫ್ರೆಂಚ್ ಫ್ರೈಸ್ ಮತ್ತು ಇತರ ಕರಿದ ಆಹಾರಗಳಂತಹ ವಸ್ತುಗಳನ್ನು ತಯಾರಿಸಲು ಬಳಸುವ ಸಂಸ್ಕರಿಸಿದ ಪಾಮ್ ಎಣ್ಣೆಯನ್ನು ಅಧಿಕಾರಿಗಳು ಪರೀಕ್ಷಿಸಿದ್ದಾರೆ.
ವಿಡಿಯೋ ನೋಡಿ:
ಅಡುಗೆ ಎಣ್ಣೆಯನ್ನು ಪದೇ ಪದೇ ಬಳಸುವುದರಿಂದ ಅದರಲ್ಲಿ ವಿಷಕಾರಿ ಅಂಶ ಹೆಚ್ಚಾಗುತ್ತದೆ. ನಿಯಮದ ಪ್ರಕಾರ ಇದು 25% ಮೀರುವಂತಿಲ್ಲ. ಆದರೆ ಇಲ್ಲಿ ಸಸ್ಯಾಹಾರಿ ಪದಾರ್ಥಗಳ ಎಣ್ಣೆ ಯಲ್ಲಿ 31% ಟಿಪಿಸಿ ಕಂಡುಬಂದಿದೆ. ಹೆಚ್ಚಿನ ಟಿಪಿಸಿ ಮಟ್ಟವನ್ನು ಹೊಂದಿರುವ ಎಣ್ಣೆ ವಿಷಕಾರಿ ಯಾಗುತ್ತದೆ, ಕ್ಯಾನ್ಸರ್ ಜನಕ ಸಂಯುಕ್ತಗಳು ಮತ್ತು ಟ್ರಾನ್ಸ್ ಕೊಬ್ಬುಗಳು ಸೇರಿದಂತೆ ಹಾನಿಕಾರಕ ಪದಾರ್ಥಗಳ್ನು ಹೆಚ್ಚಿಸುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
Viral Video: ಹಿಂದೂ ದೇವಾಲಯದಲ್ಲಿ ಮುಸ್ಲಿಂ ಯುವಕನ ರೀಲ್ಸ್; ಕಲ್ಯಾಣಿಗೆ ನೀರು ಉಗಿದ ಯೂಟ್ಯೂಬರ್!
ಎಣ್ಣೆ ಗುಣಮಟ್ಟದ ಸಮಸ್ಯೆಗಳ ಜೊತೆಗೆ, ತನಿಖಾಧಿಕಾರಿಗಳು ಅನೈರ್ಮಲ್ಯ ಶೇಖರಣಾ ಪದ್ಧತಿ ಗಳನ್ನು ಸಹ ಪತ್ತೆಹಚ್ಚಿದ್ದಾರೆ. ರೆಸ್ಟೋರೆಂಟ್‌ನ ಕೋಲ್ಡ್ ಸ್ಟೋರೇಜ್‌ನಲ್ಲಿ ಅಸಹ್ಯಕರ ರೀತಿಯಲ್ಲಿ ಸಂಗ್ರಹಿಸಿಡಲಾಗಿದ್ದ ಸುಮಾರು 40 ಕೆಜಿ ಕೊಳೆತ ಟೊಮೆಟೊಗಳನ್ನು ಅಧಿಕಾರಿಗಳು ಕಂಡು ಹಿಡಿದಿದ್ದಾರೆ. ಫ್ರೆಂಚ್ ಫ್ರೈಸ್ ತಯಾರಿಸಲು ಬಳಸುತ್ತಿದ್ದ ಎಣ್ಣೆ ಅತಿಯಾದ ಬಳಕೆಯಿಂದ ಕಪ್ಪಾಗಿದ್ದು ತಪಾಸಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಸದ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರ ಅಡಿಯಲ್ಲಿ ನೋಟಿಸ್ ನೀಡಲಾಗಿದ್ದು, ವರದಿ ಬಂದ ನಂತರ ಪರವಾನಗಿ ರದ್ದುಗೊಳಿಸುವ ಸಾಧ್ಯತೆ ಇದೆ.