ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

"ಭಾರತ ತನ್ನ ಜೀವನವನ್ನೇ ಬದಲಾಯಿಸಿದೆ": ಇಲ್ಲಿನ ಕೈಗೆಟುಕುವ ಸೇವೆಗಳಿಗೆ ಫಿದಾ ಆದ ಝಿಂಬಾಬ್ವೆ ಯುವಕ!

Viral News: ಇಲ್ಲಿನ ಕೈಗೆಟುಕುವ ಕೆಲವು ಸೌಲಭ್ಯ ವಿದೇಶಿಗರನ್ನು ಮತ್ತೆ ಮತ್ತೆ ಕೈ ಬೀಸಿ ಕರೆಯುತ್ತಿದೆ ಡಿಜಿಟಲ್ ಪಾವತಿ, ದಿನಸಿ ಸೇವೆ, ಪ್ರಯಾಣ ಸೌಲಭ್ಯಕ್ಕೆ ಝಿಂಬಾಬ್ವೆಯ ಕಂಟೆಂಟ್ ಕ್ರಿಯೇಟರ್ ವೊಬ್ಬರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಕೇವಲ ಫೋನ್‌ನಿಂದ ಬಹುತೇಕ ಎಲ್ಲದಕ್ಕೂ ಹಣ ಪಾವತಿಸುವುದರಿಂದ ಹಿಡಿದು ಆಹಾರ, ದಿನಸಿ ಮತ್ತು ಔಷಧಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ವರೆಗೆ, ಭಾರತ ತನ್ನ ಜೀವನವನ್ನೇ ಬದಲಾಯಿಸಿದೆ ಎಂದು ಬರೆದುಕೊಂಡಿದ್ದಾರೆ.

ಭಾರತದ ಸೇವೆಗಳಿಗೆ ಮನಸೋತ ವಿದೇಶಿ ಪ್ರವಾಸಿ

ನವದೆಹಲಿ,ಆ.24: ಭಾರತದ ಸಂಸ್ಕೃತಿ, ಆಚಾರ -ವಿಚಾರಗಳಿಗೆ ಮನಸೋತ ಅನೇಕ ವಿದೇಶಿಗರು ಇದ್ದಾರೆ. ಅದರಲ್ಲೂ ಇಲ್ಲಿನ ಕೈಗೆಟುಕುವ ಕೆಲವು ಸೌಲಭ್ಯ ವಿದೇಶಿಗರನ್ನು ಮತ್ತೆ ಮತ್ತೆ ಕೈ ಬೀಸಿ ಕರೆಯುತ್ತಿದ್ದೆ. ಇದೀಗ ಇಲ್ಲಿನ ಡಿಜಿಟಲ್ ಪಾವತಿ, ದಿನಸಿ ಸೇವೆ, ಪ್ರಯಾಣ ಸೌಲಭ್ಯಕ್ಕೆ ಝಿಂಬಾಬ್ವೆಯ ಕಂಟೆಂಟ್ ಕ್ರಿಯೇಟರ್‌ವೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇವಲ ಫೋನ್‌ನಿಂದ ಬಹುತೇಕ ಎಲ್ಲದಕ್ಕೂ ಹಣ ಪಾವತಿಸುವುದರಿಂದ ಹಿಡಿದು ಆಹಾರ, ದಿನಸಿ ಮತ್ತು ಔಷಧಿಗಳನ್ನು ಮನೆ ಬಾಗಿಲಿಗೆ ತಲುಪಿಸುವವರೆಗೆ, ಭಾರತ ತನ್ನ ಜೀವನವನ್ನೇ ಬದಲಾಯಿಸಿದೆ ಎಂದು (Viral News) ಬರೆದುಕೊಂಡಿದ್ದಾರೆ.

"ಭಾರತ ನನ್ನ ಜೀವನವನ್ನು 7 ರೀತಿಯಲ್ಲಿ ಬದಲಾಯಿಸಿತು" ಎಂಬ ಶೀರ್ಷಿಕೆಯೊಂದಿಗೆ ವಿಡಿಯೊ ಶೇರ್ ಮಾಡಿದ್ದಾರೆ. ಅವರ ಪಟ್ಟಿಯಲ್ಲಿ ಮೊದಲನೆಯದಾಗಿ ಡಿಜಿಟಲ್ ಪಾವತಿ ಸೌಲಭ್ಯಕ್ಕೆ ಮನಸೋತಿದ್ದಾರೆ. "ನಾನು ನನ್ನ ಪರ್ಸ್ ಮನೆಯಲ್ಲಿಯೇ ಇಡಬಹುದು, ನನ್ನ ಫೋನ್ ಅನ್ನು ಮಾತ್ರ ಕೊಂಡೊಯ್ಯಬಹುದು" ಎಲ್ಲದಕ್ಕೂ ಡಿಜಿಟಲ್ ಪಾವತಿ ಅತ್ಯಂತ ಸುಲಭ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಭಾರತದಲ್ಲಿ ಪ್ರಯಾಣ ಸೌಲಭ್ಯವು ಕೈಗುಟುಕುವ ದರದಲ್ಲಿ ಲಭ್ಯವಿದೆ. ಸ್ವಂತ ಕಾರು ಇಲ್ಲದೆಯೇ ಸುಲಭವಾಗಿ ಪ್ರಯಾಣ ಮಾಡಬಹುದು ಅಂದರು.

ವಿಡಿಯೋ ನೋಡಿ:



ಮನೆ ಬಾಗಿಲಿಗೆ ತಲುಪುವ ಆಹಾರಗಳು, ದಿನಸಿ ಸಾಮಗ್ರಿಗಳು ಔಷಧಗಳ ತ್ವರಿತ ಸೇವೆ, ಅದೇ ವಿದೇಶದಲ್ಲಿ ಗಂಟೆ- ಘಟ್ಟಲ್ಲೇ ಕಾಯಬೇಕು. ವಿಧವಿಧದ ಸಸ್ಯಾಹಾರಿ ಅಡುಗೆಗಳು, ಸುಲಭವಾಗಿ ಸಿಗುವ ಕಾರ್ಮಿಕರು ಝಿಂಬಾಬ್ವೆಯಿಂದ ಭೇಟಿಕೊಟ್ಟ ನನಗೆ ಭಾರತದ ಈ ಸಣ್ಣ ಸಣ್ಣ ವಿಷಯಗಳು ಬಹಳಷ್ಟು ಅದ್ಬುತ ಎಂದೆನಿಸಿದೆ ಅಂದರು.

Viral Video: ಯೋಧ ಯಾವತ್ತಿದ್ದರೂ ಯೋಧನೇ; ಚಾರ್ಜ್‌ ಖಾಲಿಯಾದ ಮಹಿಳೆಯ ಎಲೆಕ್ಟ್ರಿಕ್‌ ಕಾರ್‌ ತಳ್ಳಿದ ಸೈನಿಕ

ನಾನು ಇನ್ನೂ ಪ್ರತಿದಿನ ಹೊಸ ವಿಷಯಗಳನ್ನು ಕಂಡು ಕೊಳ್ಳುತ್ತಿದ್ದೇನೆ, ಆದ್ದರಿಂದ ನೀವು ಪ್ರಯಾಣವನ್ನು ಆನಂದಿಸುತ್ತಿದ್ದರೆ, ನನ್ನೊಂದಿಗೆ ಇರಿ ಮತ್ತು ಭಾರತವನ್ನು ಅನುಭವಿಸಿ.‌ ಎಂದು ವಿಡಿಯೊ ಕೊನೆಗೊಳಿಸಿದ್ದಾರೆ. ಈ ಪೋಸ್ಟ್ ಗೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತ ವಾಗಿದ್ದು "ಈ ವ್ಯಕ್ತಿಗೆ ಆಧಾರ್ ಕಾರ್ಡ್ ಕೊಡುವುದು ಒಳ್ಳೆಯದು " ಎಂದು ಕೆಲವರು ತಮಾಷೆ ಮಾಡಿದರು. ಮತ್ತೊಬ್ಬರು ವಿದೇಶದಲ್ಲಿ ಇದ್ದವರಿಗೆ ಮಾತ್ರ ಭಾರತದ ಮೌಲ್ಯ ತಿಳಿಯುತ್ತದೆ ಎಂದರು.