ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Viral Video: ಹರಿಹರ ಕೋಟೆಯ ಕಿರಿದಾದ ಮೆಟ್ಟಿಲ ಮೇಲೆ ಜನಸಾಗರ; ಮೊಘಲ್ ಸೈನಿಕರೂ ಇಷ್ಟೊಂದು ಸಂಖ್ಯೆಯಲ್ಲಿ ದಾಳಿ ಮಾಡಿರಲಿಲ್ಲ ಎಂದ ನೆಟ್ಟಿಗರು

Viral Video: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿರುವ ಪ್ರಸಿದ್ಧ ಹರಿಹರ ಕೋಟೆಯಲ್ಲಿ ಜನ ಸಾಗರವೇ ಸೇರಿರುವ ದೃಶ್ಯವೊಂದು ವೈರಲ್ ಆಗಿದೆ. ಕಡಿದಾದ ಬಂಡೆಗಳಲ್ಲಿ ಕೆತ್ತಲಾದ ಕಿರಿದಾದ ಮೆಟ್ಟಿಲುಗಳ ಮೇಲೆ ನೂರಾರು ಪ್ರವಾಸಿಗರು ಸೇರಿದ್ದು, ಸುರಕ್ಷತೆ ಬಗ್ಗೆ ಕಳವಳವೂ ವ್ಯಕ್ತವಾಗುತ್ತಿದೆ.‌ ಸದ್ಯ ಈ ಅಘಾತಕಾರಿ ವಿಡಿಯೊ ವೈರಲ್ ಆಗುತ್ತಿದೆ.

ಹರಿಹರ ಕೋಟೆಯಲ್ಲಿ ಪ್ರವಾಸಿಗರ ದಂಡು! ಆಡಳಿತದ ನಿರ್ಲಕ್ಷ್ಯಕ್ಕೆ ಕಿಡಿ

ಹರಿಹರ ಕೋಟೆಯಲ್ಲಿ ಕಿರಿದಾದ ಮೆಟ್ಟಿಲುಗಳ ಮೇಲೆ ನಿಂತ ಜನಸಾಗರ -

Profile
Pushpa Kumari Aug 17, 2026 10:47 PM

ಮುಂಬೈ, ಆ. 17: ಮಹಾರಾಷ್ಟ್ರದ ಹರಿಹರ ಕೋಟೆಗೆ ಚಾರಣ ಮಾಡಲು ಅನೇಕ ಪ್ರವಾಸಿಗರು ಭೇಟಿ ನೀಡುತ್ತಲೇ ಇರುತ್ತಾರೆ. ಇಲ್ಲಿನ ಸುಂದರ ಸಹ್ಯಾದ್ರಿ ನೋಟಗಳು, ಸುತ್ತಲಿನ ಭೂಪ್ರದೇಶ, ಬೃಹತ್ ಬಂಡೆಗಳಲ್ಲಿ ಮಾಡಿರುವ ಮೆಟ್ಟಿಲುಗಳನ್ನು ಹತ್ತುವ ರೋಮಾಂಚನ ದೃಶ್ಯ ಪ್ರವಾಸಿಗರಿಗೆ ವಿಸ್ಮಯಕಾರಿ ಅನುಭವ ನೀಡುತ್ತದೆ. ಇದೀಗ ನಾಸಿಕ್ ಜಿಲ್ಲೆಯಲ್ಲಿರುವ ಪ್ರಸಿದ್ಧ ಹರಿಹರ ಕೋಟೆಯಲ್ಲಿ ಜನ ಸಾಗರವೇ ಸೇರಿದ್ದ ದೃಶ್ಯವೊಂದು ವೈರಲ್ ಆಗಿದೆ. ಕಡಿದಾದ ಬಂಡೆಗಳಲ್ಲಿ ಕೆತ್ತಲಾದ ಕಿರಿದಾದ ಮೆಟ್ಟಿಲುಗಳ ಮೇಲೆ ನೂರಾರು ಪ್ರವಾಸಿಗರು ಸೇರಿದ್ದು ಸುರಕ್ಷತೆ ಬಗ್ಗೆ ಕಳವಳವೂ ವ್ಯಕ್ತವಾಗುತ್ತಿದೆ.‌ ಸದ್ಯ ಈ ಅಘಾತಕಾರಿ ವಿಡಿಯೊ ಬಹಳಷ್ಟು ವೈರಲ್ (Viral News) ಆಗುತ್ತಿದೆ.

ತ್ರಿಕೋನಾಕಾರದ ಬಂಡೆಯ ಮೇಲೆ ನಿರ್ಮಿತವಾಗಿರುವ ಈ ಕೋಟೆಯೊಳಗೆ ತೆರಳಲು ಬಂಡೆಯಲ್ಲೇ ಕೆತ್ತಲಾದ ಸುಮಾರು 117 ಕಡಿದಾದ ಮೆಟ್ಟಿಲುಗಳಿವೆ. ಇದೀಗ ಈ ಕಡಿದಾದ ಬಂಡೆಗಳ ಹತ್ತಿರ ನಿಲ್ಲಲ್ಲು ಸಾಧ್ಯವಾಗದಷ್ಟು ಜನ ಸೇರಿದ್ದಾರೆ. ಒಬ್ಬರ ಹಿಂದೆ ಒಬ್ಬರು ಸಾಲಾಗಿ ನಿಂತಿರುವುದು ಕಂಡು ಬಂದಿದೆ. ಇದು ಅತ್ಯಂತ ಅಪಾಯಕಾರಿಯಾಗಿದ್ದು ದುರಂತಕ್ಕೆ ಕಾರಣವಾಗಬಹುದು ಎಂದು ಅನೇಕರು ಕಿಡಿಕಾರಿದ್ದಾರೆ.

ವಿಡಿಯೊ ನೋಡಿ:



ಈ ವಿಡಿಯೊವನ್ನು ಸೋಷಿಯಲ್ ಮೀಡಿಯಾ ಬಳಕೆದಾರೊಬ್ಬರು ಹಂಚಿಕೊಂಡಿದ್ದಾರೆ. ಕ್ಲಿಪ್ ಕಡಿದಾದ ಮೆಟ್ಟಿಲುಗಳ ಉದ್ದಕ್ಕೂ ಚಾರಣಿಗರು ತುಂಬಿರುವುದನ್ನು ತೋರಿಸುತ್ತದೆ. ಕೆಲವರು ನಿಲ್ಲಲು ಸಾಧ್ಯವಾಗದೆ ದಣಿದಿರುವ ದೃಶ್ಯ ಕಾಣಬಹುದು. ಅನೇಕರು ಇದಕ್ಕೆ ತಮಾಷೆಯಾಗಿ ಈ ಕೋಟೆಯ ಮೇಲೆ ದಾಳಿ ಮಾಡಲು ಮೊಘಲ್ ಸೈನಿಕರೂ ಇಷ್ಟು ಸಂಖ್ಯೆಯಲ್ಲಿ ಬಂದಿರಲಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಯುವಕರಿಗೆ ಕಿರುಕುಳ ನೀಡಿ ತಾವೇ ಬಟ್ಟೆ ಹರಿದುಕೊಂಡ ಕಿʼಲೇಡಿʼಗಳು

ಇಲ್ಲಿರುವ ಮೆಟ್ಟಿಲುಗಳನ್ನು ಹತ್ತಲು ಕಲ್ಲಿನಲ್ಲೇ ಮಾಡಿದ ಸಪೋರ್ಟ್‌ ಕೂಡ ಇದೆ. ಹೀಗಾಗಿ ಇದು ಅತ್ಯಂತ ಅಪಾಯಕಾರಿ ಪ್ರದೇಶ ಎನಿಸಿಕೊಂಡಿದೆ. ಮಹಾರಾಷ್ಟ್ರವು ಆಂಧ್ರಬನ್ ಚಾರಣಕ್ಕೆ ಮಾಡಿರುವಂತೆ ಇಲ್ಲೂ ನೋಂದಣಿ ವ್ಯವಸ್ಥೆಯನ್ನು ಹೊಂದಿರಬೇಕು ಮತ್ತು ನಿರ್ದಿಷ್ಟ ಸಂಖ್ಯೆಯ ಜನರರಿಗೆ ಮಾತ್ರ ಅನುಮತಿ ನೀಡಬೇಕು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಒಬ್ಬರು, ʼʼಸಣ್ಣದೊಂದು ತಪ್ಪೂ ದೊಡ್ಡ ದುರಂತಕ್ಕೆ ಕಾರಣವಾಗಬಹುದು. ಕಾಲು ಜಾರಿ ಕೆಳಗೆ ಬೀಳುವ ಅಪಾಯವಿದೆ" ಎಂದು ಆತಂಕ ಹೊರಹಾಕಿದ್ದಾರೆ.