ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಹಳದಿ ಶಾಸ್ತ್ರದ ವೇಳೆ ವರನ ತಲೆಮೇಲೆ ಮದ್ಯ ಸುರಿದ ಸ್ನೇಹಿತರು; ಇದೇನಾ ಸಂಸ್ಕೃತಿ ಎಂದ ನೆಟ್ಟಿಗರು

Viral Video: ಹಳದಿ ಸಮಾರಂಭವೊಂದರಲ್ಲಿ ವರನ ಮೈಮೇಲೆ ಆತನ ಸ್ನೇಹಿತರು ಹಾಲು, ಅರಿಶಿನ, ನೀರಿನ ಬದಲು ಮದ್ಯವನ್ನು ಸುರಿದಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಈ ಬಗ್ಗೆ ಚರ್ಚೆ ಆರಂಭವಾಗಿದೆ.

ವರನ ತಲೆ ಮೇಲೆ ಅರಿಶಿನದ ನೀರಿನ ಬದಲು ಮದ್ಯ ಸುರಿದ ಸ್ನೇಹಿತರು

Profile pavithra Mar 10, 2025 4:45 PM

ಹೊಸದಿಲ್ಲಿ: ಹಿಂದೂ ಸಂಪ್ರದಾಯದಲ್ಲಿ ಮದುವೆಯ ಆಚರಣೆಗೆ ಮಹತ್ವದ ಸ್ಥಾನವಿದೆ. ಮದುವೆಯ ಆಚರಣೆಯ ವೇಳೆ ಒಂದು ಸಣ್ಣ ಪ್ರಮಾದವಾದರೂ ಅದನ್ನು ಅಪಶಕುನವೆಂದು, ಮುಂದೆ ಬರುವ ಸಮಸ್ಯೆಗಳಿಗೆ ಸೂಚನೆ ಎಂದು ಪರಿಗಣಿಸುತ್ತಾರೆ. ಆದರೆ ಇದೀಗ ಅದನ್ನೆಲ್ಲ ಗಾಳಿಗೆ ತೂರಿ ಮದುವೆಗೆ ತಾಳಿ ಕಟ್ಟುವಾಗಲೂ ಕುಡಿದು ಬರುವುದು, ಕುಡಿದು ನೃತ್ಯ ಮಾಡುವುದು ಶೋಕಿ ಆಗಿಬಿಟ್ಟಿದೆ. ಇದೀಗ ಅಂತಹದೊಂದು ಘಟನೆ ಹಳದಿ ಸಮಾರಂಭದಲ್ಲಿ ನಡೆದಿದೆ. ಹಳದಿ ಶಾಸ್ತ್ರ ನಡೆಯುವ ಸಮಾರಂಭದಲ್ಲಿ ವಧು-ವರನ ಮೈಮೇಲೆ ಹಾಲು, ಅರಿಶಿನ, ನೀರಿನಂತಹ ಪವಿತ್ರ ವಸ್ತುಗಳನ್ನು ಸುರಿಯುತ್ತಾರೆ. ಆದರೆ ಇಲ್ಲೊಂದು ಹಳದಿ ಸಮಾರಂಭದಲ್ಲಿ ವರನ ಮೈಮೇಲೆ ಆತನ ಸ್ನೇಹಿತರು ಮದ್ಯವನ್ನು ಸುರಿದಿದ್ದಾರೆ (Viral Video). ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೈರಲ್‌ ವಿಡಿಯೊದಲ್ಲಿ ವಿಡಿಯೊದಲ್ಲಿ ಪುರುಷರ ಗುಂಪೊಂದು ಬಾಟಲಿಗಳನ್ನು ತೆರೆದು ಅದರಲ್ಲಿದ್ದ ಆಲ್ಕೋಹಾಲ್ ಅನ್ನು ವರನ ಮೇಲೆ ಸುರಿಯುವುದು ಸೆರೆಯಾಗಿದೆ. ಹಳದಿ ಸಮಾರಂಭದ ವೇಳೆ ನೆಲದ ಮೇಲೆ ಕೂತ ವರನ ಮೇಲೆ ಸ್ನೇಹಿತರು ಮದ್ಯವನ್ನು ಸುರಿದಿದ್ದಾರೆ. ಈ ವೇಳೆ ಅವನು ಈ ಕೃತ್ಯವನ್ನು ಪ್ರಶ್ನಿಸುವ ಬದಲು ಸಂಭ್ರಮಿಸಿದ್ದಾನೆ. ಬಿಯರ್ ಮತ್ತು ವೋಡ್ಕಾ ಅವನ ತಲೆಯ ಮೇಲೆ ಸುರಿಯುತ್ತಿದ್ದಂತೆ, ಅವನು ಅದನ್ನು ತನ್ನ ಅಂಗೈಗಳಲ್ಲಿ ಹಿಡಿದು ಕುಡಿಯಲು ಶುರು ಮಾಡಿದ್ದಾನೆ.



ಆದರೆ ಹಳದಿ ಸಮಾರಂಭದಲ್ಲಿ ವರನ ಸ್ನೇಹಿತರು ಮಾಡಿದ ಈ ಕೃತ್ಯಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ. ಈ ವಿಡಿಯೊಗೆ ಪ್ರತಿಕ್ರಿಯಿಸಿದ ನೆಟ್ಟಿಗರೊಬ್ಬರು, "ಭಾರತೀಯ ವಿವಾಹಗಳ ಧಾರ್ಮಿಕ ಆಚರಣೆಗಳು ಸಂಪೂರ್ಣ ನಾಶವಾಗುತ್ತಿವೆ" ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. "ಈ ಮೊದಲು ಮದುವೆಯ ಆಚರಣೆಗಳನ್ನು ಪವಿತ್ರ ಕಾರ್ಯಕ್ರಮಗಳು ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಇದು ಪವಿತ್ರವಲ್ಲದೆ ಎಲ್ಲವೂ ಆಗಿದೆ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಕೆಲವರು ಈ ಘಟನೆಗೆ ಬೆಂಬಲ ಸೂಚಿಸಿ "ಈಗ ಇದರಲ್ಲಿ ಏನು ಸಮಸ್ಯೆ? ಆಲ್ಕೋಹಾಲ್ ಹೇಗೆ "ಅಪವಿತ್ರ"ವಾಗಿದೆ? ಶಿವಾಜಿ ಮತ್ತು ಇತರ ದೇವರು ಸಹ ತಮ್ಮ "ಮದಿರಾ"ವನ್ನು ಸೇವಿಸುತ್ತಿದ್ದರು” ಬದುಕಿ ಮತ್ತು ಬದುಕಲು ಬಿಡಿʼʼ ಎಂದು ವಾದಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಹಳದಿ ಸಮಾರಂಭಕ್ಕೆ ನುಗ್ಗಿದ ಕೋತಿಯಿಂದ ಅವಾಂತರ; ಬಿದ್ದು ಬಿದ್ದು ನಕ್ಕ ನೆಟ್ಟಿಗರು

ಇತ್ತೀಚೆಗೆ ಕೋತಿಯೊಂದು ಹಳದಿ ಸಮಾರಂಭಕ್ಕೆ ಬಂದು ಲಡ್ಡುಗಳನ್ನು ಕದ್ದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಅಲ್ಲಿದ್ದ ಅತಿಥಿಗಳಿಗೆ ಆಶ್ಚರ್ಯದ ಜತೆ ಜತೆಗೆ ಮನರಂಜನೆಯನ್ನು ನೀಡಿದೆ. ವೈರಲ್ ಆಗಿರುವ ವಿಡಿಯೊದಲ್ಲಿ ವಧು ಮತ್ತು ವರರ ಕುಟುಂಬದವರು ಖುಷಿಯಿಂದ ಹಳದಿ ಸಮಾರಂಭದಲ್ಲಿರುವಾಗ ಕಣ್ಣು ಮಿಟುಕಿಸುವಷ್ಟರಲ್ಲಿ, ಕೋತಿ ಅತಿಥಿಯ ಕೈಯಲ್ಲಿದ್ದ ತಟ್ಟೆಯನ್ನು ಹಿಡಿದು, ಅದರಲ್ಲಿದ್ದ ಲಡ್ಡುಗಳನ್ನು ಕಸಿದುಕೊಂಡು ಎಸ್ಕೇಪ್‌ ಆಗಿರುವುದು ಕಂಡು ಬಂದಿದೆ.