ಸ್ಯಾಕ್ರಮೆಂಟೊ: ಹೈ ಹೀಲ್ಸ್ ಚಪ್ಪಲಿ ಎಂದರೆ ಮಹಿಳೆಯರ ಕಣ್ಣು ಇಷ್ಟಗಲವಾಗುತ್ತದೆ. ಎತ್ತರವಾಗಿರಲಿ, ಕುಳ್ಳಗಾಗಿರಲಿ ಈ ಹೈ ಹೀಲ್ಸ್ ಮೇಲಿನ ವ್ಯಾಮೋಹ ಮಾತ್ರ ಕಡಿಮೆಯಾಗಲ್ಲ! ಸೀರೆ ಉಟ್ಟರೂ, ಚೂಡಿ ಹಾಕಿದ್ರೂ ಕಾಲಿಗೆ ತುಸು ಎತ್ತರದ ಹೈ ಹೀಲ್ಸ್ ಹಾಕಿಕೊಂಡು ಹೋಗುವುದು ಫ್ಯಾಷನ್ ಆಗಿದೆ. ಮಾರುಕಟ್ಟೆಯಲ್ಲಿ ಕೂಡ ನಾನಾ ತರಹದ ಹೈ ಹೀಲ್ಸ್ ಚಪ್ಪಲಿಗಳು ಕಣ್ಣು ಕುಕ್ಕುತ್ತದೆ. ಆದರೆ ಇಲ್ಲೊಂದು ನಗರದಲ್ಲಿ ಈ ಹೈ ಹೀಲ್ಸ್ ಚಪ್ಪಲಿ ಧರಿಸಲು ಅನುಮತಿ ಕೇಳಬೇಕಂತೆ!ಅರೆ... ಚಪ್ಪಲಿ ಹಾಕಿಕೊಳ್ಳೊದಕ್ಕೂ ಫರ್ಮಿಶನ್ ಬೇಕಾ ಎಂದು ಶಾಕ್ ಆಯ್ತಾ ನಿಮಗೆ...? ಹೌದು ಕ್ಯಾಲಿಫೋರ್ನಿಯಾದ ಸಣ್ಣ ನಗರ ಕಾರ್ಮೆಲ್-ಬೈ-ದಿ-ಸೀಯಲ್ಲಿ ಎರಡು ಇಂಚುಗಳಿಗಿಂತ ಎತ್ತರದ ಹಿಮ್ಮಡಿಗಳನ್ನು ಧರಿಸಲು, ಅಲ್ಲಿನ ಮಹಿಳೆಯರು ನಗರಸಭೆಯಿಂದ ಪರವಾನಗಿ ಪಡೆಯಬೇಕಂತೆ. ಆದರೆ ಈ ವಿಶಿಷ್ಟ ನಿಯಮದ ಹಿಂದೆ ಒಂದು ನಿರ್ದಿಷ್ಟ ಕಾರಣವಿದೆಯಂತೆ. ಆದರೆ ಆ ನಿಯಮ ಫ್ಯಾಷನ್‍ಗೆ ಸಂಬಂಧಿಸಿದ್ದಲ್ಲ. ಬದಲಾಗಿ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಾಗಿದೆಯಂತೆ. ಈ ಸುದ್ದಿ ಈಗ ವೈರಲ್(Viral News) ಆಗಿದೆ.
ವರದಿಯ ಪ್ರಕಾರ, ಈ ಕಾನೂನನ್ನು 1963ರಲ್ಲಿ ಜಾರಿಗೆ ತರಲಾಯಿತು. ಆ ಸಮಯದಲ್ಲಿ, ನಗರದ ರಸ್ತೆ ಮತ್ತು ಫುಟ್‍ಪಾತ್ ಸ್ಥಿತಿ ಸ್ವಲ್ಪ ಭಿನ್ನವಾಗಿತ್ತು. ಫುಟ್‍ಪಾತ್ ವ್ಯವಸ್ಥೆ ಅಷ್ಟೊಂದು ಸರಿಯಾಗಿರಲಿಲ್ಲವಂತೆ. ಹೈ ಹೀಲ್ಸ್ ಧರಿಸುವವರು ನಡೆಯುವಾಗ ಬೀಳುವ ಅಪಾಯವಿರುತ್ತದೆ. ಅದಕ್ಕಾಗಿಯೇ ಆಡಳಿತವು ಜನರು ಸುರಕ್ಷಿತವಾಗಿರಲು ಈ ನಿಯಮವನ್ನು ಜಾರಿಗೆ ತಂದಿದೆಯಂತೆ. ಮತ್ತು ಒಂದು ವೇಳೆ ನಿಯಮ ಉಲ್ಲಂಘಿಸಿ ಹೈಹೀಲ್ಸ್ ಧರಿಸಿ ಯಾರಾದರೂ ಗಾಯಗೊಂಡರೆ, ನಗರದ ಯಾವುದೇ ಕಾನೂನು ಅದಕ್ಕೆ ಜವಾಬ್ದಾರಿ ಅಲ್ಲ ಎಂಬುದಾಗಿ ತಿಳಿಸಲಾಗಿತ್ತು. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ಈ ಕಾನೂನನ್ನು ಬಹಳ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿಲ್ಲ. ಆದರೆ ಅದು ಇನ್ನೂ ಶಾಸನ ಪುಸ್ತಕಗಳಲ್ಲಿ ಅಸ್ತಿತ್ವದಲ್ಲಿದೆಯಂತೆ.
ವಿಡಿಯೊ ನೋಡಿ
ಟ್ರಾವೆಲ್ ವ್ಲಾಗರ್ @Zorymory ಈ ಬಗ್ಗೆ ವಿಡಿಯೊವನ್ನು ಹಂಚಿಕೊಂಡಿದ್ದಾನೆ. ಅದರಲ್ಲಿ ಅವನು ಈ ಕಾನೂನಿನ ಬಗ್ಗೆ ಮಾಹಿತಿ ನೀಡಿದ್ದಾನೆ.ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, 9 ಲಕ್ಷ ವ್ಯೂವ್ಸ್ ಗಳಿಸಿದೆ. ಈ ವಿಡಿಯೊಗೆ ನೆಟ್ಟಿಗರು ಕಾಮೆಂಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು ಕಾಮೆಂಟ್ ಮಾಡಿ, "ಅದು ಹುಚ್ಚುತನ, ನನಗೆ ಇದುವರೆಗೆ ಈ ಬಗ್ಗೆ ತಿಳಿದಿಲ್ಲ!!" ಎಂದಿದ್ದಾರೆ. ಇನ್ನೊಬ್ಬರು, ನಗರಕ್ಕೆ ಬರುವ ಒಬ್ಬ ಪ್ರವಾಸಿ, “ಅಲ್ಲಿ ಕಾಲುಗಳಿಗೆ ಚಪ್ಪಲಿ ಧರಿಸಲು ನಿಷೇಧವಿದೆ ಎಂದು ನನಗೆ ತಿಳಿದಿರಲಿಲ್ಲ!! ನಾನು ಕೇವಲ ಕಾರ್ಮೆಲ್‌ನಲ್ಲಿ ಫ್ಲಾಟ್ ಶೂಗಳನ್ನು ಮಾತ್ರ ಧರಿಸಿದೆ, ಆದ್ದರಿಂದ ಇದು ಒಳ್ಳೆಯ ವಿಷಯ.” ಎಂದು ಕಾಮೆಂಟ್ ಮಾಡಿದ್ದಾರೆ. ಈ ಮಧ್ಯೆ, ಮತ್ತೊಬ್ಬರು, “ನಾನು ಅಲ್ಲಿ ಹೈಹೀಲ್ಸ್ ಧರಿಸಿದ್ದೇನೆ ಮತ್ತು ಯಾರೂ ಏನೂ ಹೇಳಲಿಲ್ಲ. ಇದು ತುಂಬಾ ಹುಚ್ಚುತನವಾಗಿದೆ” ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಇದು ಅಂತಿಂಥಾ ಮೆಹಂದಿ ಅಲ್ಲ... ಈ ಹೊಸ ವಿಧದ ಮದರಂಗಿ ಬಗ್ಗೆ ನಿಮಗೆಷ್ಟು ಗೊತ್ತು? ವಿಡಿಯೊ ನೋಡಿ
ಕಾರ್ಮೆಲ್-ಬೈ-ದಿ-ಸೀ ಬಗ್ಗೆ
ಕಾರ್ಮೆಲ್-ಬೈ-ದಿ-ಸೀ ಕ್ಯಾಲಿಫೋರ್ನಿಯಾದ ಕೇಂದ್ರ ಕರಾವಳಿಯಲ್ಲಿರುವ ಹರಿಪಾಲಿಯ ಶ್ರೇಣಿಯಲ್ಲಿರುವ ಒಂದು ಸಣ್ಣ ನಗರ. ಇದು ಸುಮಾರು ಒಂದೇ ಚದರ ಮೈಲಿನ ವ್ಯಾಪ್ತಿಯಲ್ಲಿದೆ. ವಾಲ್ ಸ್ಟ್ರೀಟ್ ಜರ್ನಲ್ ಪ್ರಕಾರ, ಕಾರ್ಮೆಲ್‍ನಲ್ಲಿ ಸುಮಾರು 60 ರೆಸ್ಟೊರೆಂಟ್‌ಗಳು, 40 ಹೋಟಲ್‌ಗಳು, 100 ಆರ್ಟ್ ಗ್ಯಾಲರಿಗಳು ಮತ್ತು ಆ್ಯಂಟಿಕ್ ಅಂಗಡಿಗಳು ಮತ್ತು 20 ವೈನ್ ಟೇಸ್ಟಿಂಗ್ ರೂಂಗಳಿವೆ.