Viral Video: ಇದು ಅಂತಿಂಥಾ ಮೆಹಂದಿ ಅಲ್ಲ... ಈ ಹೊಸ ವಿಧದ ಮದರಂಗಿ ಬಗ್ಗೆ ನಿಮಗೆಷ್ಟು ಗೊತ್ತು? ವಿಡಿಯೊ ನೋಡಿ
ಹಿಂದೆಲ್ಲ ಗೋರಂಟಿ ಸೊಪ್ಪು ಅರೆದು ಅದನ್ನು ಕೈಯ ಮೇಲೆ ಮೆತ್ತಿಕೊಳ್ಳುತ್ತಿದ್ದರು. ಕ್ರಮೇಣ ಮೆಹಂದಿ ಕೋನ್ ಗಳು ಬರಲಾ ರಂಭಿಸಿತ್ತು. ಈಗಂತೂ 5-10 ನಿಮಿಷಕ್ಕೆಲ್ಲ ಮೆಹಂದಿ ಬಣ್ಣ ಬರುವಂತಹ ಕೆಮಿಕಲ್ ಮಿಶ್ರಿತ ಮೆಹಂದಿ ಕೋನ್ ಬಂದಿವೆ. ಆದರೆ ಇವೆಲ್ಲ ಕ್ಕಿಂತ ಭಿನ್ನವಾಗಿ ಮೆಹಂದಿಯನ್ನು ಕಲ್ಲಿನಲ್ಲಿಯೇ ಪುಡಿ ಮಾಡಿ ತಯಾರಿಸಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಬರೀ ಕಲ್ಲಿನಿಂದ ಮೆಹಂದಿ ಪುಡಿ ಮಾಡಿ ಅದನ್ನು ಕೈ ಮೇಲೆ ಚಿತ್ತಾಕರ್ಷಕವಾಗಿ ಬಿಡಿಸಿಕೊಂಡ ಮಹಿಳೆಯ ಟ್ಯಾಲೆಂಟ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ.


ಹಿಮಾಚಲ ಪ್ರದೇಶ; ಹಬ್ಬ, ಮದುವೆ, ಇತರ ಕಾರ್ಯಕ್ರಮದಲ್ಲಿ ಕೈ ಮೇಲೆ ಚಿತ್ತಾಕರ್ಷಕವಾಗಿ ಮೂಡಿ ಬರುವ ಮೆಹಂದಿ ಯನ್ನು ಹಿಂದೂ ಸಂಪ್ರದಾಯದಲ್ಲಿ ಶುಭವೆಂದು ನಂಬಲಾಗುತ್ತದೆ. ಹಿಂದೆಲ್ಲ ಗೋರಂಟಿ ಸೊಪ್ಪು ಅರೆದು ಅದನ್ನು ಕೈಯ ಮೇಲೆ ಮೆತ್ತಿಕೊಳ್ಳುತ್ತಿದ್ದರು ಕ್ರಮೇಣ ಮೆಹಂದಿ ಕೋನ್ ಗಳು ಬರಲಾರಂಭಿಸಿತ್ತು. ಈಗಂತೂ 5-10 ನಿಮಿಷಕ್ಕೆಲ್ಲ ಮೆಹಂದಿ ಬಣ್ಣ ಬರುವಂತಹ ಕೆಮಿಕಲ್ ಮಿಶ್ರಿತ ಮೆಹಂದಿ ಕೋನ್ ಬಂದಿವೆ. ಆದರೆ ಇವೆಲ್ಲಕ್ಕಿಂತ ಭಿನ್ನವಾಗಿ ಮೆಹಂದಿಯನ್ನು ಕಲ್ಲಿನಲ್ಲಿಯೇ ಪುಡಿ ಮಾಡಿ ತಯಾರಿಸಿರುವ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ (Viral Video) ಆಗುತ್ತಿದೆ. ಬರೀ ಕಲ್ಲಿನಿಂದ ಮೆಹಂದಿ ಪುಡಿ ಮಾಡಿ ಅದನ್ನು ಕೈ ಮೇಲೆ ಚಿತ್ತಾಕರ್ಷಕವಾಗಿ ಬಿಡಿಸಿಕೊಂಡ ಮಹಿಳೆಯ ಟ್ಯಾಲೆಂಟ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಮೆಹಂದಿಯನ್ನು ಕಲ್ಲಿನ ಪುಡಿಯಿಂದಲೂ ತಯಾರಿಸಬಹುದು ಎಂದರೆ ನಿಮಗೂ ಅಚ್ಚರಿ ಎನಿಸಬಹುದು. ಹಿಮಾಚಲ ಪ್ರದೇಶದ ನಿವಾಸಿ ರೂಬಿ ಠಾಕೂರ್ ಎಂಬ ಮಹಿಳೆಯೊಬ್ಬರು ನ್ಯಾಚುರಲ್ ಮೆಹಂದಿ ಬಗ್ಗೆ ವಿಡಿಯೋ ಶೇರ್ ಮಾಡಿದ್ದಾರೆ. ಹಿಮಾಚಲ ಪ್ರದೇಶದ ಪಹಾಡಿ ಸಂಪ್ರದಾಯದಂತೆ ಮೆಹಂದಿ ತಯಾರಿಸುವ ವಿಶೇಷ ಕಲೆ ಬಗ್ಗೆ ತಿಳಿಸಿದ್ದಾರೆ. ಕಲ್ಲುಗಳಲ್ಲಿ ಅಂಟಿರುವ ಪಾಚಿಯಂತಹ ಕೆಲವು ವಸ್ತುವಿಗೆ ನೀರು ಬೆರೆಸಿ ಯಾವುದೇ ಕೆಮಿಕಲ್ ಮಿಶ್ರ ಮಾಡದೆ ನೈಸರ್ಗಿಕ ಮೆಹಂದಿಯನ್ನು ತಯಾರಿಸಿದ್ದಾರೆ.
ವೈರಲ್ ವಿಡಿಯೊ ಇಲ್ಲಿದೆ
ಕಲ್ಲುಗಳಲ್ಲಿ ಅಂಟಿರುವ ಪಾಚಿ ತೆಗೆದು ಅದಕ್ಕೆ ನೀರನ್ನು ಮಿಶ್ರಣ ಮಾಡಿ ಬಳಿಕ ಈ ಪೇಸ್ಟ್ ಅನ್ನು ಕೈಗೆ ಲೇಪಿಸಿಕೊಂಡಿದ್ದು ನೀವೆಂದಾದರೂ ಕಲ್ಲಿನಿಂದ ತೆಗೆದ ನ್ಯಾಚುರಲ್ ಮೆಹಂದಿಯನ್ನು ಹಚ್ಚಿಕೊಂಡಿದ್ದೀರಾ ಎಂಬ ಶೀರ್ಷಿಕೆ ಯನ್ನು ವಿಡಿಯೋ ಜೊತೆಗೆ ಪೋಸ್ಟ್ ಮಾಡಿದ್ದಾರೆ. ಇದು ಪಹಡಿ ಮೆಹೆಂದಿಯಾಗಿದ್ದು ಚಿಕ್ಕವಯಸ್ಸಿನಲ್ಲಿ ನಾವು ಮೆಹಂದಿ ಹಚ್ಚಿಕೊಂಡ ನೆನಪು ಮರುಕಳಿಸುವಂತಿದೆ. ಈ ಮೆಹಂದಿಯನ್ನು ಯಾವುದೆ ಕೆಮಿಕಲ್ ಇಲ್ಲದೆ ನ್ಯಾಚುರಲ್ ಆಗಿ ತಯಾರಿಸಲಾಗಿದೆ ಎಂದು ಮಹಿಳೆ ವಿಡಿಯೋದಲ್ಲಿ ತಿಳಿಸಿದ್ದಾರೆ.ಈ ವಿಡಿಯೋ ವನ್ನು ರೂಬಿ ಠಾಕೂರ್ ಅವರು ತಮ್ಮ ಇನ್ ಸ್ಟಾ ಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು ಇದುವರೆಗೆ 8 ಮಿಲಿಯನ್ ಗಿಂತ ಅಧಿಕ ವೀಕ್ಷಣೆ ಹಾಗೂ ಪ್ರತಿಕ್ರಿಯೆ ಪಡೆದುಕೊಂಡಿದೆ.
ಇದನ್ನು ಓದಿ: Video Viral: ಇವ್ರು ಮಾಡೋ ಪಕೋಡಕ್ಕೆ ಅಮೆರಿಕನ್ನರೇ ಫುಲ್ ಫಿದಾ! ಈ ದಂಪತಿ ಇದೀಗ ಫುಲ್ ವೈರಲ್
ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದು ಬಾಲ್ಯದಲ್ಲಿ ಈ ತರ ಮೆಹಂದಿಯನ್ನು ಹಾಕಿದ್ದೇವೆ ಈ ನೆನಪು ಮತ್ತೆ ಮರುಕಳಿಸುತ್ತೆ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬ ಬಳಕೆದಾರರು ಕಲ್ಲಿನಿಂದ ಮಸಾಲೆ ಅರೆ ಯುವುದು ತಿಳಿದಿತ್ತು ಮೆಹಂದಿ ಕೂಡ ತಯಾರಿಸಬಹುದಾ, ನಿಜಕ್ಕೂ ಅದ್ಭುತ ಎಂದು ಕಮೆಂಟ್ ಹಾಕಿದ್ದಾರೆ. ಇದು ಬಹಳ ನ್ಯಾಚುರಲ್ ಆಗಿದೆ ಎಂದು ಮತ್ತೊಬ್ಬ ಬಳಕೆದಾರರೊಬ್ಬರು ಕಾಮೆಂಟ್ ಮೂಲಕ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ.