ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮರೆಯಾದ ಮಾನವೀಯತೆ! ರಸ್ತೆಬದಿಯಲ್ಲಿ ಬಿದ್ದಿದ್ದ ವ್ಯಕ್ತಿಯ ಶೂ ಕದ್ದ ಕಸ ಆಯುವ ವ್ಯಕ್ತಿ

ದೆಹಲಿಯಲ್ಲಿ ನಡೆದ ಈ ಘಟನೆಯೊಂದು ಮನುಷ್ಯತ್ವ ಮರೆಯಾಗಿದೆ ಎಂಬುದಕ್ಕೆ ಜ್ವಲಂತ ಸಾಕ್ಷಿಯಂತಿದೆ. ರಸ್ತೆ ಬದಿಯಲ್ಲಿ ಬಿದ್ದಿದ್ದ ಪ್ರಜ್ಞಾಹೀನ ವ್ಯಕ್ತಿಯೊಬ್ಬನಿಗೆ ಸಹಾಯ ಮಾಡುವ ಬದಲು ಆತನ ಶೂಗಳನ್ನು ಕದಿಯಲಾಗಿದೆ. ಸದ್ಯ ಈ ಘಟನೆಯ ವಿಡಿಯೊ ವೈರಲ್‌ ಆಗಿದೆ.

ಸಾಂದರ್ಭಿಕ ಚಿತ್ರ.

ನವದೆಹಲಿ, ಜ. 3: ಸಾಮಾನ್ಯವಾಗಿ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಮಾನವೀಯತೆ ಮೆರೆಯುತ್ತೇವೆ. ಆದರೆ ದೆಹಲಿಯಲ್ಲಿ ನಡೆದ ಈ ಘಟನೆ ಮನುಷ್ಯತ್ವ ಎಷ್ಟು ಮರೆಯಾಗಿದೆ ಎಂಬುದಕ್ಕೆ ಸಾಕ್ಷಿ ಎಂಬಂತಿದೆ. ರಸ್ತೆ ಬದಿಯಲ್ಲಿ ಬಿದ್ದಿದ್ದ ಪ್ರಜ್ಞಾಹೀನ ವ್ಯಕ್ತಿಯೊಬ್ಬನಿಗೆ ಸಹಾಯ ಮಾಡುವ ಬದಲು ಆತನ ಶೂಗಳನ್ನು ಕದಿಯಲಾಗಿದೆ. ಸದ್ಯ ಈ ಅಮಾನವೀಯ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನೆಟ್ಟಿಗರು ಕಿಡಿಕಾರಿದ್ದಾರೆ. ಪ್ರಜ್ಞಾಹೀನನಾಗಿದ್ದ ವ್ಯಕ್ತಿಯ ಅಸಹಾಯಕತೆಯನ್ನು ಬಳಸಿ‌ಕೊಂಡ , ಆತನ ಕಾಲಿನಿಂದ ಶೂಗಳನ್ನು ಎಳೆದು ತೆಗೆದಿದ್ದಾನೆ. ಈ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಕುಡಿತದ ಅಮಲಿನಲ್ಲಿ ವ್ಯಕ್ತಿಯೊಬ್ಬ ರಸ್ತೆಯ ಬದಿಯ ಚರಂಡಿ ಪಕ್ಕದಲ್ಲಿ ಪ್ರಜ್ಞೆಯಿಲ್ಲದ ಸ್ಥಿತಿಯಲ್ಲಿ ಬಿದ್ದಿದ್ದಾನೆ. ಆತ ಎದ್ದು ನಿಲ್ಲಲು ಕಷ್ಟಪಡುತ್ತಿದ್ದರೂ ಅಲ್ಲಿಗೆ ಬಂದ ಕಸ ಆಯುವವನೊಬ್ಬ ಆತನಿಗೆ ಸಹಾಯ ಮಾಡುವ ಬದಲು ಶೂ ಕದಿಯಲು ಮುಂದಾಗಿದ್ದಾನೆ. ಈ ಸಂದರ್ಭ ಮತ್ತೊಬ್ಬ ವ್ಯಕ್ತಿ ಅಲ್ಲಿಗೆ ಬಂದು ಶೂಗಾಗಿ ಜಗಳವಾಡಿದ್ದಾನೆ. ಅಂದರೆ ರಸ್ತೆಯಲ್ಲಿ ಬಿದ್ದ ವ್ಯಕ್ತಿಯ ಜೀವಕ್ಕಿಂತ ಅಲ್ಲಿ ಆತನ ಶೂಗಳ ಅಗತ್ಯವೇ ಹೆಚ್ಚಿತ್ತು ಎಂದು ವಿಡಿಯೊದಲ್ಲಿ ಸ್ಪಷ್ಟವಾಗುತ್ತದೆ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.

ವಿಡಿಯೊ ನೋಡಿ:



ವೈರಲ್ ಆದ ವಿಡಿಯೊದಲ್ಲಿ ಕಸ ಸಂಗ್ರಹಿಸುವವನು ಆತನ ಪಾದಗಳಿಂದ ಬೂಟುಗಳನ್ನು ಎಳೆಯುವುದನ್ನು ಕಾಣಬಹುದು. ಶೀಘ್ರದಲ್ಲೇ, ಈ ನಡುವೆ ಶೂಗಾಗಿ ಇಬ್ಬರ ನಡುವೆ ಜಗಳ ಉಂಟಾಗಿದೆ. ವಿಡಿಯೊವನ್ನು ಶೇರ್ ಮಾಡಿದ ಬಳಕೆದಾರರು "ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ನೆಲದ ಮೇಲೆ ಉರುಳುತ್ತಿದ್ದರೆ, ಕಳ್ಳರು ಅವನ ಪಾದರಕ್ಷೆಗಳನ್ನು ಕದಿಯಲು ಹೊಂಚುಹಾಕುತ್ತಿ ದ್ದಾರೆ. ವ್ಯಕ್ತಿ ಬಿದ್ದು ಹೊರಳಾಡುತ್ತಿದ್ದರೂ ಆತನ ಪಾದರಕ್ಷೆಗಳನ್ನು ಕದಿಯುತ್ತಾರೆ ಎಂದರೆ ಜನರು ಎಷ್ಟು ನೀಚರಾಗಬಹುದುʼʼ ಎಂದು ಬರೆದುಕೊಂಡಿದ್ದಾರೆ.

ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ರಂಪಾಟ; ಮಾಡಿದ ಸಬ್ ಇನ್ಸ್‌ಪೆಕ್ಟರ್ ಬಂಧನ

ಈ ದೃಶ್ಯವನ್ನು ಜನರು ತಮ್ಮ ಮೊಬೈಲ್‌ಗಳಲ್ಲಿ ಚಿತ್ರೀಕರಿಸುತ್ತಿದ್ದು ದಾರಿಯಲ್ಲಿ ಹೋಗುವವರು ಸುಮ್ಮನೆ ನೋಡುತ್ತ ಸಾಗುತ್ತಿದ್ದರು. ಯಾರೊಬ್ಬರೂ ಕಳ್ಳತನವನ್ನು ತಡೆಯುವ ಸಾಹಸ ಮಾಡಲಿಲ್ಲ. ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಇದು ಅತ್ಯಂತ ಅಸಹ್ಯಕರ ವರ್ತನೆ ಎಂದು ಒಬ್ಬರು ಬರೆದು ಕೊಂಡಿದ್ದಾರೆ. ಮತ್ತೊಬ್ಬರು, ಜನರು ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಯುತ್ತಾರ? ಎಂದು ಪ್ರಶ್ನಿಸಿದ್ದಾರೆ.