ಹೊಸದಿಲ್ಲಿ: ಇತ್ತೀಚೆಗಷ್ಟೇ ಚಾಟ್ ಜಿಪಿಟಿ ಬಿಡುಗಡೆ ಮಾಡಿರುವ ಘಿಬ್ಲಿ ಆರ್ಟ್ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಉಂಟು ಮಾಡುತ್ತಿವೆ. ರಾಜಕೀಯ ನಾಯಕರು, ಸಿನಿಮಾ ತಾರೆಯರು, ಸೋಶಿಯಲ್ ಮೀಡಿಯಾ ಬಳಕೆದಾರರೆಲ್ಲ ತಮ್ಮ ಫೋಟೊವನ್ನು ಘಿಬ್ಲಿ ಸ್ಟೈಲ್ ನಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ. ಇದರಲ್ಲಿ ಕೆಲ ಘಿಬ್ಲಿ ಫೋಟೊ ವಾವ್ಹ್ ಅನಿಸಿದ್ರೆ ಇನ್ನು ಕೆಲ ಫೋಟೊ ಸಖತ್ ನಗು ತರಿಸುವಂತಿದೆ. ಸೋಶಿಯಲ್ ಮಿಡಿಯಾ ಸಿಂಗರ್ ಧನಶ್ರೀ ಪಾಟೀಲ್ ಇದೇ ಘಿಬ್ಲಿ ಟ್ರೆಂಡ್ ಮೂಲಕ ಎಡವಟ್ಟಾದ ಫೋಟೊವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನೋಡಗರು ನಕ್ಕು ನಕ್ಕು ಸುಸ್ತಾಗಿದ್ದಾರೆ. ಈ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ (Viral Video) ಆಗುತ್ತಿದೆ.
ವೈರಲ್ ಆದ ವಿಡಿಯೊದಲ್ಲಿ ಗಾಯಕಿ ಧನಶ್ರೀ ಸ್ಟೈಲಿಶ್ ಭಂಗಿಯಲ್ಲಿ ಕುಳಿತು ಪೋಸ್ ನೀಡಿದ್ದಾರೆ. ಹಸಿರು ಗೌನ್, ಬಿಳಿ ಜಾಕೆಟ್‌ನಲ್ಲಿ ಮಿಂಚಿದ್ದ ಗಾಯಕಿಯ ಫೋಟೊಕ್ಕೆ ಹೆಚ್ಚುವರಿಯಾಗಿ ಮೂರನೇ ಕಾಲು ಉದ್ಬವವಾಗಿದ್ದು, ಘಿಬ್ಲಿಯ ಈ ಎಡವಟ್ಟು ಅಪಹಾಸ್ಯವಾಗಿಬಿಟ್ಟಿದೆ. ಎಐ ಚಾಟ್ ಜಿಪಿಟಿ ಯಿಂದ ಈ ಫೋಟೋಗೆ ಮೂರು ಕಾಲು ಬಂದಿದ್ದು ಈ ಮೂರನೇ ಕಾಲು ಎಲ್ಲಿಂದ ಬಂತು ಎನ್ನುವುದೆ ತಮಾಷೆಯ ವಿಚಾರ. ಈ ಮೂಲಕ ಘಿಬ್ಲಿ ಟ್ರೆಂಡ್‌ನಲ್ಲಿ ಇರುವ ಲೋಪದೋಷಗಳನ್ನು ಕೂಡ ಜನರು ಶೇರ್ ಮಾಡಿಕೊಳ್ಳುವ ಮೂಲಕ ಹೊಸ ಟ್ರೆಂಡ್ ಸೃಷ್ಟಿಯಾಗಿದೆ.
ಚಾಟ್ ಜಿಪಿಟಿ ಎಐ ಇಮೇಜ್ ಜನರೇಟ್ ಸಹಾಯದಿಂದ ಜಪಾನೀಸ್ ಆ್ಯನಿಮೇಶನ್ ಸ್ಟುಡಿಯೋದಲ್ಲಿ ಸೃಷ್ಟಿಯಾದ ಘಿಬ್ಲಿಗಳು ಮೊದ ಮೊದಲು ಆಕರ್ಷಕವಾಗಿ ಕಾಣುತ್ತಿದ್ದವು. ಆದರೆ ಕಾಲಕ್ರಮೇಣ ಅದರ ಕೆಲ ನ್ಯೂನತೆ ಹೈಲೈಟ್ ಆಗುತ್ತಿದೆ. ಧನಶ್ರೀ ಅವರ ಫೋಟೊಗೆ ಮೂರು ಕಾಲು ಬಂದಿದ್ದು ಒಂದು ಉದಾಜರಣೆಯಾದರೆ, ಇಂತಹದ್ದೇ ಸಾಕಷ್ಟು ಎಡವಟ್ಟು ಗಮನ ಸೆಳೆಯುತ್ತಿದೆ.
ಇದನ್ನು ಓದಿ: Viral Video: ಅವಧಿ ಮೀರಿದ ಎದೆ ಹಾಲನ್ನು ಈಕೆ ಮಾಡಿದ್ದೇನು ನೋಡಿ! ವಿಡಿಯೊ ಫುಲ್ ವೈರಲ್
70,000ಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ಧನಶ್ರೀ ಅವರ ಘಿಬ್ಲಿ ಫೋಟೊ ಸಾಕಷ್ಟು ವೈರಲ್ ಆಗುತ್ತಿದೆ. ಚಾಟ್ ಜಿಪಿಟಿಗೆ ನಿಮ್ಮ ನಿಲುವಿನ ಭಂಗಿ ಅರ್ಥವಾಗಿಲ್ಲ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು ರಿಯಲ್ ಫೋಟೊಗಿಂತಲೂ ಈ ಫೋಟೊ ಸುಂದರವಾಗಿದೆ ಎಂದು ಹಾಸ್ಯವಾಗಿ ಟ್ವೀಟ್ ಮಾಡಿದ್ದಾರೆ. ಈ ವಿಡಿಯೊ ಬರೋಬ್ಬರಿ 10.7 ಮಿಲಿಯನ್ ವೀಕ್ಷಣೆ ಪಡೆದಿದೆ.
ಘಿಬ್ಲಿ ಟ್ರೆಂಡ್ಸ್ ರಾಂಗ್
ಘಿಬ್ಲಿ ಫೋಟೊ ಟ್ರೆಂಡ್ ಆಗುವ ಜತೆಗೆ ಟ್ರೋಲಿಗರಿಗೂ ಆಹಾರವಾಗುತ್ತಿದೆ. ಈ ಆ್ಯನಿಮೇಶನ್‌ನಿಂದ ಉಂಟಾದ ಎಡವಟ್ಟು ವೈರಲ್ ಆಗುತ್ತಿದೆ. ದಂಪತಿ ನಡುವೆ ಮಗುವೊಂದು ಬರುವ ದೃಶ್ಯ, ನಿಂತಿರುವ ಭಂಗಿಯ ಬದಲು ಇನ್ಯಾಯಾವುದೇ ರೀತಿ, ನಾಲ್ವರ ಫೋಟೊದ ಬದಲು ಐವರು ಹೀಗೆ ಬಹಳಷ್ಟು ಎಡವಟ್ಟು ಕಂಟು ಬರುತ್ತಿದೆ. ಘಿಬ್ಲಿ ಟ್ರೆಂಡ್ ವೆಂಟ್ ರಾಂಗ್ ಹೆಸರಿನಲ್ಲಿ ಹಲವು ಪೋಸ್ಟ್ ಮಾಡುತ್ತಿದ್ದಾರೆ.