ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಅವಧಿ ಮೀರಿದ ಎದೆ ಹಾಲನ್ನು ಈಕೆ ಮಾಡಿದ್ದೇನು ನೋಡಿ! ವಿಡಿಯೊ ಫುಲ್‌ ವೈರಲ್

ಅಮೆರಿಕದ ಒಹಾಯೊದ ಜಾಕ್ಸನ್‍ನಲ್ಲಿರುವ ಲಿಯೋ ಜೂಡ್ ಸೋಪ್ ಕಂಪನಿ ಮಾಲೀಕಳಾದ ಟೇಲರ್ ರಾಬಿನ್ಸನ್ ಅವಧಿ ಮೀರಿದ ಎದೆ ಹಾಲನ್ನು ಬಳಸಿ ಸಾಬೂನುಗಳನ್ನು ತಯಾರಿಸಿ ಮಾರಾಟ ಮಾಡಿದ್ದು, ತನ್ನ ಉತ್ಪನ್ನಗಳು ಚರ್ಮದ ಆರೈಕೆಯ ಸಮಸ್ಯೆಗಳನ್ನು ನಿವಾರಿಸಲು ಜನರಿಗೆ ಸಹಾಯ ಮಾಡಿದೆ ಎಂದು ಹೇಳಿದ್ದಾಳೆ. ಈ ವಿಡಿಯೊ ವೈರಲ್ ಆಗಿದೆ.

ಅವಧಿ ಮೀರಿದ ಎದೆ ಹಾಲನ್ನು ಬಳಸಿ ಸಾಬೂನು ತಯಾರಿಸಿದ ಮಹಿಳೆ

Profile pavithra Apr 5, 2025 6:32 PM

ವಾಷಿಂಗ್ಟನ್: ಅವಧಿ ಮೀರಿದ ವಸ್ತುಗಳನ್ನು ಎಸೆಯುವ ಬದಲು ಅದನ್ನು ಬೇರೆ ಕೆಲಸಗಳಿಗೆ ಬಳಸಿಕೊಳ್ಳುವುದು ಹೇಗೆ ಎಂಬ ಹಲವು ಟಿಪ್ಸ್‌ಗಳ ವಿಡಿಯೊಗಳನ್ನು ನಾವು ಸೋಶಿಯಲ್ ಮೀಡಿಯಾದಲ್ಲಿ ನೋಡಿರುತ್ತೇವೆ. ಇದೀಗ ಅಂತಹದ್ದೇ ವಿಡಿಯೊವೊಂದು ಸೋಶಿಯಲ್ ಮೀಡಿಯಾದ ವೈರಲ್‌ ಆಗಿದೆ. ಒಹಾಯೊ ಉದ್ಯಮಿಯೊಬ್ಬಳು ವಿಶಿಷ್ಟ ಉತ್ಪನ್ನವೊಂದನ್ನು ಮರುಬಳಕೆ ಮಾಡುವುದನ್ನು ಹಂಚಿಕೊಂಡಿದ್ದಾಳೆ. ಈ ವಿಡಿಯೊ ವೈರಲ್ (Viral Video) ಆಗಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಇದರಲ್ಲಿ ಅವಳು ಅವಧಿ ಮೀರಿದ ಎದೆಹಾಲನ್ನು ಬಳಸಿ ತಯಾರಿಸಿದ ಸಾಬೂನುಗಳನ್ನು ಮಾರಾಟ ಮಾಡಿದ್ದು, ತನ್ನ ಉತ್ಪನ್ನಗಳು ಚರ್ಮದ ಆರೈಕೆಯ ಸಮಸ್ಯೆಗಳನ್ನು ನಿವಾರಿಸಲು ಜನರಿಗೆ ಸಹಾಯ ಮಾಡಿದೆ ಎಂದು ಹೇಳಿದ್ದಾಳೆ.

ಒಹಾಯೊದ ಜಾಕ್ಸನ್‍ನಲ್ಲಿರುವ ಲಿಯೋ ಜೂಡ್ ಸೋಪ್ ಕಂಪನಿ ಮಾಲೀಕಳಾದ ಟೇಲರ್ ರಾಬಿನ್ಸನ್ ಅವಧಿ ಮೀರಿದ ಎದೆಹಾಲನ್ನು ಸಾಬೂನು ತಯಾರಿಕೆಯಲ್ಲಿ ಮರುಬಳಕೆ ಮಾಡಿದ್ದಾಳೆ. ಅವಳು ಬಳಸುವ ಹೆಚ್ಚಿನ ಎದೆಹಾಲು ನೇರವಾಗಿ ಸ್ಥಳೀಯ ದಾನಿಗಳಿಂದ ಬರುತ್ತದೆ. ಎಸ್ಜಿಮಾ, ಸೋರಿಯಾಸಿಸ್ ಮತ್ತು ಕ್ರೇಡಲ್ ಕ್ಯಾಪ್‍ನಂತಹ ಚರ್ಮದ ಸಮಸ್ಯೆಗಳಿಗೆ ಗ್ರಾಹಕರು ಅವಳ ಸಾಬೂನನ್ನು ಬಳಸುತ್ತಾರೆ. ಇದು ಉತ್ತಮ ಫಲಿತಾಂಶವನ್ನು ನೀಡುತ್ತದೆ ಎಂದು ಆಕೆ ತನ್ನ ಸೋಶಿಯಲ್ ಮಿಡಿಯಾ ಪೇಜ್‍ನಲ್ಲಿ ತಿಳಿಸಿದ್ದಾಳೆ.

ಇದರ ವಿಡಿಯೊ ಇಲ್ಲಿದೆ ನೋಡಿ...

ವೈರಲ್ ವಿಡಿಯೊದಲ್ಲಿ, ರಾಬಿನ್ಸನ್, ಜನರು ತಮ್ಮ ಎದೆಹಾಲನ್ನು ನಮಗೆ ಕಳುಹಿಸುತ್ತಾರೆ. ಹಾಲು ಸಾಮಾನ್ಯವಾಗಿ ಅವಧಿ ಮೀರಿರುತ್ತದೆ ಮತ್ತು ನಾವು ಅದನ್ನು ಸಾಬೂನಾಗಿ ತಯಾರಿಸುತ್ತೇವೆ. ಆದ್ದರಿಂದ ಹಾಲು ವ್ಯರ್ಥವಾಗುವುದಿಲ್ಲ. ನಂತರ ಅವರು ಎದೆ ಹಾಲನ್ನು ಬಳಸಿಕೊಂಡು ಸ್ನಾನದ ಸೋಪ್‌ ಹೇಗೆ ಮಾಡುತ್ತಾರೆ ಎಂಬುದನ್ನು ವಿವರಿಸಿ ಹೇಳಿದ್ದಾಳೆ.

ಅವಳ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕೆಲವರು ಉತ್ಪನ್ನಗಳಿಂದ ಆಶ್ಚರ್ಯಚಕಿತರಾದರೆ, ಇತರರು ಅದನ್ನು ಅಸಹ್ಯಕರವೆಂದು ಭಾವಿಸಿದ್ದಾರೆ. ಇನ್ನು ಕೆಲವರು ಅವಳ ಕಾರ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಒಬ್ಬರು "ಜನರು ಎದೆ ಹಾಲಿನ ಬಗ್ಗೆ ಏಕೆ ಅಸಹ್ಯ ಪಡುತ್ತಾರೆ? ಇದು ನಮ್ಮ ಶಿಶುಗಳ ಆಹಾರ. ಅದರಲ್ಲಿ ಯಾವುದೇ ತಪ್ಪಿಲ್ಲ ಮತ್ತು ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ. ನಾನು ನನ್ನ ಮಕ್ಕಳಿಗೆ ಎದೆಹಾಲನ್ನು ನೀರಿಗೆ ಸೇರಿಸಿ ಸ್ನಾನ ಮಾಡಿಸುತ್ತಿದ್ದೆ. ಇದು ಅವರ ಚರ್ಮಕ್ಕೆ ತುಂಬಾ ಒಳ್ಳೆಯದು” ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಕಾಳಿಂಗ ಸರ್ಪವೇ ಈತನ ಬೆಸ್ಟ್‌ ಫ್ರೆಂಡ್‌; ಇವರಿಬ್ಬರ ಈ ನಂಟು ಸೋಶಿಯಲ್‌ ಮೀಡಿಯಾದಲ್ಲಿ ಫುಲ್‌ ವೈರಲ್‌

ಇನ್ನೊಬ್ಬರು ಕಾಮೆಂಟ್ ಮಾಡಿ, "ನಾನು ನನ್ನ ಎದೆಹಾಲನ್ನು ಇಸ್ತಾಂಬುಲ್‍ನ ಬೀದಿ ಬೆಕ್ಕುಗಳಿಗೆ ನೀಡಿದ್ದೇನೆ” ಎಂದಿದ್ದಾರೆ. ಮೂರನೆಯವರು, "ಇದು ವಾಸ್ತವವಾಗಿ ಮೇಕೆ ಹಾಲಿನ ಸಾಬೂನಿಗಿಂತ ಕಡಿಮೆ ಕೊಬ್ಬಿನಾಂಶವನ್ನು ಹೊಂದಿದೆ." ಎಂದಿದ್ದಾರೆ. ಮತ್ತೊಬ್ಬರು,” ಚರ್ಮದ ಆರೈಕೆಗೆ ರಾಸಾಯನಿಕಯುಕ್ತ ವಸ್ತುಗಳನ್ನು ಬಳಸುವ ಬದಲು ಈ ನೈಸರ್ಗಿಕ ವಸ್ತುವನ್ನು ಬಳಸಬಹುದು” ಎಂದಿದ್ದಾರೆ.