ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Viral Video: ʼʼನಂಗೂ ಅಡ್ಮಿಷನ್‌ ಕೊಡಿʼʼ; ಬಾಯ್ಸ್ ಹಾಸ್ಟೆಲ್ ಮೆಸ್‌ಗೆ ನುಗ್ಗಿದ ಮೊಸಳೆ

Viral Video: ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಮೊಸಳೆ ದಾಳಿ ಎಲ್ಲರನ್ನೂ ಆತಂಕಕ್ಕೆ ದೂಡಿತ್ತು. ಬಾಲಕನೊಬ್ಬನ ಮೇಲೆ ದಾಳಿ ಮಾಡಿ ಕ್ರೂರವಾಗಿ ಕೊಂದು ಸಾಯಿಸಿತ್ತು. ಇದರ ಬೆನ್ನಲೇ ರಾಜಸ್ಥಾನದ ಕೋಟಾದ ಬಾಯ್ಸ್ ಹಾಸ್ಟೆಲ್‌ನ ಅಡುಗೆ ಕೋಣೆಯೊಳಗೆ ಮೊಸಳೆಯೊಂದು ಎಂಟ್ರಿ ನೀಡಿದೆ. ಹಾಸ್ಟೆಲ್‌ನಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.

ರಾಜಸ್ಥಾನದಲ್ಲಿ ಬಾಲಕರ ಹಾಸ್ಟೆಲ್‌ಗೆ ನುಗ್ಗಿದ ದೈತ್ಯ ಮೊಸಳೆ

ಜೈಪುರ, ಜು. 20: ನದಿ, ಸರೋವರದಲ್ಲಿರುವ ಮೊಸಳೆ ಏಕಾಏಕಿ ಬಾಯ್ಸ್ ಹಾಸ್ಟೆಲ್ ಮೆಸ್‌ಗೆ ನುಗ್ಗಿ ಕೋಲಾಹಲ ಸೃಷ್ಟಿಸಿದೆ. ರಾಜಸ್ಥಾನದ ಪ್ರಸಿದ್ಧ ಕೋಚಿಂಗ್ ಹಬ್ ಆಗಿರುವ ಕೋಟಾದ ಬಾಯ್ಸ್ ಹಾಸ್ಟೆಲ್‌ ಒಂದರಲ್ಲಿ ಈ ಅಘಾತಕಾರಿ ದೃಶ್ಯ ಕಂಡುಬಂದಿದೆ. ಇದು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಸ್ಪಲ್ಪ ಹೊತ್ತು ಆತಂಕಕ್ಕೆ ಮೂಡಿಸಿತ್ತು. ಅರಣ್ಯ ಅಧಿಕಾರಿಗಳು ತಕ್ಷಣಕ್ಕೆ ಎಚ್ಚೆತ್ತುಕೊಂಡು ಕೂಡಲೇ ಸ್ಥಳಾಂತಿಸಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಇದರ ಸಿಸಿಟಿವಿ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral Video) ಆಗಿದೆ.

ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಮೊಸಳೆ ದಾಳಿ ಎಲ್ಲರನ್ನೂ ಆತಂಕಕ್ಕೆ ದೂಡಿತ್ತು. ಬಾಲಕನೊಬ್ಬನ ಮೇಲೆ ದಾಳಿ ಮಾಡಿದ ಮೊಸಳೆ ಕ್ರೂರವಾಗಿ ಕೊಂದು ಸಾಯಿಸಿತ್ತು. ಇದರ ಬೆನ್ನಲೇ ಕೋಟಾದ ಬಾಯ್ಸ್ ಹಾಸ್ಟೆಲ್‌ಗೆ ಮೊಸಳೆ ಏಕಾಏಕಿ ಎಂಟ್ರಿ ನೀಡಿದೆ.

ವಿಡಿಯೊ ನೋಡಿ:



ಹಾಸ್ಟೆಲ್‌ನಲ್ಲಿ ಅಳವಡಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಮೊಸಳೆಯು ಮೆಟ್ಟಿಲುಗಳನ್ನು ಇಳಿಯುತ್ತಾ ಹಾಸ್ಟೆಲ್‌ನ ಅಡುಗೆ ಕೋಣೆ ಬಳಿ ಧಾವಿಸಿದೆ. ಈ ಅನಿರೀಕ್ಷಿತ ದೃಶ್ಯವನ್ನು ಅಡುಗೆ ಸಿಬ್ಬಂದಿ ಗಮನಿಸಿದ್ದಾರೆ. ಮೊಸಳೆಯನ್ನು ಗಮನಿಸಿದ ತಕ್ಷಣ ಸಿಬ್ಬಂದಿ, ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಲ್ಲಿಂದ ಹೊರ ನಡೆದಿದ್ದಾರೆ.

"ಭಾರತದಲ್ಲಿ ಮಾತ್ರ ಇದು ಸಾಧ್ಯ"; ಮನೆ ಬಾಗಿಲಿನ ಉಚಿತ ರಕ್ತ ಪರೀಕ್ಷೆ ಸೇವೆಗೆ ಅಮೆರಿಕದ ಮಹಿಳೆ ಮೆಚ್ಚುಗೆ

ಕಟ್ಟಡದಲ್ಲಿ ಉಳಿದುಕೊಂಡಿದ್ದ ವಿದ್ಯಾರ್ಥಿಗಳು ಹೊರಗೆ ಧಾವಿಸಿದ್ದು ಸ್ವಲ್ಪ ಸಮಯದೊಳಗೆ, ಆವರಣದ ಹೊರಗೆ ದೊಡ್ಡ ಜನಸಮೂಹ ನೆರೆದಿತ್ತು. ​ಅರಣ್ಯ ಇಲಾಖೆಯ ರಕ್ಷಣಾ ತಂಡ ಬರುವ ಮುನ್ನ ಕೆಲವು ವಿದ್ಯಾರ್ಥಿಗಳು ತಾವೇ ಮೊಸಳೆಯನ್ನು ಹಿಡಿಯಲು ಯತ್ನಿಸಿದರು. ಆದರೆ ಈ ಪ್ರಯತ್ನದಿಂದ ಹೆದರಿದ ಮೊಸಳೆ ಮತ್ತಷ್ಟು ಉಗ್ರ ರೂಪ ತಾಳಿತು.

ಮಳೆಗಾಲದಲ್ಲಿ ನದಿಗಳ ನೀರಿನ ಮಟ್ಟ ಏರುವುದರಿಂದ ಮೊಸಳೆಗಳು ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿವೆ. ಹೀಗಾಗಿ ದೊಡ್ಡ ಚರಂಡಿಯ ಮೂಲಕ ಮೊಸಳೆ ಹಾಸ್ಟೆಲ್ ಆವರಣವನ್ನು ಪ್ರವೇಶಿಸಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಹಾಸ್ಟೆಲ್ ಆಡಳಿತದಿಂದ ಮಾಹಿತಿ ಪಡೆದ ನಂತರ, ಅರಣ್ಯ ಇಲಾಖೆಯು ರಕ್ಷಣಾ ತಂಡವನ್ನು ಸ್ಥಳಕ್ಕೆ ಕಳುಹಿಸಿದೆ. ಅಧಿಕಾರಿಗಳು ಮೊಸಳೆಯನ್ನು ಎಚ್ಚರಿಕೆ ಯಿಂದ ಯಾರಿಗೂ ಹಾನಿಯಾಗದಂತೆ ಮೊಸಳೆಯನ್ನು ರಕ್ಷಿಸಿದ್ದಾರೆ.