ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮನೆಯ ಎದುರು ಹಾಕಿದ ರಂಗೋಲಿ ತುಳಿದು ವಿರೂಪಗೊಳಿಸಿದ ಶಾಲಾ ಬಾಲಕಿ: ಖಂಡಿಸದ ತಾಯಿಯ ನಡೆಗೆ ನೆಟ್ಟಿಗರು ಕಿಡಿಕಿಡಿ

Viral Video: ಶಾಲಾ ಸಮವಸ್ತ್ರ ಧರಿಸಿದ ಬಾಲಕಿಯೊಬ್ಬಳು ಮನೆಯ ಮುಂದೆ ಹಾಕಿದ ರಂಗೋಲಿಯನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡಿರುವ ವಿಡಿಯೊ ವೈರಲ್ ಆಗಿದೆ. ಆದರೆ ಈ ವೇಳೆ ಆಕೆಯ ಜತೆಗಿದ್ದ ತಾಯಿ ಮಗಳನ್ನು ತಡೆಯುವ ಬದಲು‌ ಬಾಲಕಿಯ ಕೃತ್ಯಕ್ಕೆ ಬೆಂಬಲ ನೀಡಿದ್ದಾಳೆ. ಬಾಲಕಿಗಿಂತ ತಾಯಿಯ ನಡೆಗೆ ಹೆಚ್ಚು ಆಕ್ರೋಶ ವ್ಯಕ್ತವಾಗುತ್ತಿದೆ.

ರಂಗೋಲಿ ತುಳಿದು ಹಾಳುಗೆಡವಿದ ಬಾಲಕಿ

ಬೆಂಗಳೂರು, ಜ. 18: ಹಬ್ಬದ ಸಂಭ್ರಮ ಅಂತ ಬಂದಾಗ ಮನೆಯ ಮುಂದೆ ರಂಗೋಲಿ ಹಾಕಿ ಸುಂದರವಾಗಿ ಕಾಣುವಂತೆ ಮಾಡುವುದು ಸಾಮಾನ್ಯ. ಇಲ್ಲೊಬ್ಬ ಶಾಲಾ ಸಮವಸ್ತ್ರ ಧರಿಸಿದ ಬಾಲಕಿಯೊಬ್ಬಳು ಮನೆಯ ಮುಂದೆ ಹಾಕಿದ ರಂಗೋಲಿಯನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡಿರುವ ವಿಡಿಯೊ ವೈರಲ್ (Viral Video) ಆಗಿದೆ. ಆದರೆ ಈ ವೇಳೆ ಜತೆಗಿದ್ದ ತಾಯಿ ಮಗಳನ್ನು ತಡೆಯುವ ಬದಲು‌ ಬಾಲಕಿಯ ಕೃತ್ಯಕ್ಕೆ ಬೆಂಬಲ ನೀಡಿದ್ದಾಳೆ. ಈ ವರ್ಣರಂಜಿತ ಕಲಾಕೃತಿಯನ್ನು ಬಾಲಕಿ ಉದ್ದೇಶ ಪೂರ್ವಕವಾಗಿ ಹಾಳುಗೆಡವಿದ ದೃಶ್ಯ ಕಂಡು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಲಾ ಸಮವಸ್ತ್ರ ಧರಿಸಿದ ಬಾಲಕಿ ಸುಂದರವಾದ ರಂಗೋಲಿಯನ್ನು ಹಾಳು ಗೆಡವಿದ ದೃಶ್ಯ ವಿಡಿಯೊದಲ್ಲಿ ಕಂಡು ಬಂದಿದೆ. ಉದ್ದೇಶಪೂರ್ವಕವಾಗಿ ತುಳಿದು ಹಾಳು ಮಾಡುತ್ತಿರುವ ಈ ಕೃತ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಕಿಚ್ಚು ಹಚ್ಚಿದೆ. ಈ ಕೃತ್ಯಕ್ಕಿಂತ ಹೆಚ್ಚಾಗಿ ಮಗಳು ತಪ್ಪು ಮಾಡುತ್ತಿದ್ದರೂ ಅದನ್ನು ತಡೆಯದೆ ತಾಯಿ ಮೂಕಪ್ರೇಕ್ಷಕಿಯಾಗಿ ಬೆಂಬಲ ಸೂಚಿಸಿ‌ದ್ದಾಳೆ. ಇದಕ್ಕೆ ನೆಟ್ಟಿಗರು ಕೂಡ ಕಿಡಿಕಾರಿದ್ದಾರೆ.

ವಿಡಿಯೊ ನೋಡಿ:



ವೈರಲ್ ಆಗಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ ವರ್ಣರಂಜಿತ ಕಲಾಕೃತಿಯನ್ನು ಹುಡುಗಿ ಉದ್ದೇಶ ಪೂರ್ವಕವಾಗಿ ಅಳಿಸಿ ಅದರ ಮೇಲೆ ಓಡಾಡುವುದನ್ನು‌ ಕಾಣಬಹುದು. ಆದರೆ ತಾಯಿ ಮಧ್ಯ ಪ್ರವೇಶಿಸಿ ತಡೆದಿಲ್ಲ. ಬದಲಾಗಿ ಯಾರು ನೋಡುತ್ತಿಲ್ಲ ಎಂದು ಸುತ್ತಮುತ್ತ ನೋಡುತ್ತ ಬಾಲಕಿಯ ಕೃತ್ಯಕ್ಕೆ ಸಾಥ್ ನೀಡಿದ್ದಾಳೆ. ಸದ್ಯ ಈ ವಿಡಿಯೊ ಹಂಚಿಕೊಂಡಿರುವ ಸಾವಿರಾರು ಜನರು ಶಿಕ್ಷಣ ಮತ್ತು ಶಿಸ್ತಿನ ಬಗ್ಗೆ ಗಂಭೀರವಾಗಿ ಪ್ರಶ್ನಿಸಿದ್ದಾರೆ. ಈ ಘಟನೆ ನಡೆದಿರುವುದು ಎಲ್ಲಿ ಎನ್ನುವುದು ತಿಳಿದು ಬಂದಿಲ್ಲ.

ಆಟೋ ರಿಕ್ಷಾವನ್ನೇ ಓಯೋ ರೂಮ್‌ ಮಾಡಿಕೊಂಡ ಜೋಡಿ

ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯಿಂದ ಕಮೆಂಟ್ ಮಾಡಿದ್ದಾರೆ. ಸಂಯಮ ಮತ್ತು ಗೌರವವನ್ನು ಕಲಿಸುವ ಬದಲು ಬಾಲಕಿಯ ತಾಯಿಯೇ ಯಾಕೆ ಇಂತಹ ನಡವಳಿಕೆಯನ್ನು ಹೊಂದಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ನೆಟ್ಟಿಗರೊಬ್ಬರು ಶಾಲೆಗಳು ಕೇವಲ ಅಂಕಗಳನ್ನು ನೀಡಬಹುದು, ಆದರೆ ಸಂಸ್ಕಾರವನ್ನು ಪೋಷಕರು ನೀಡಬೇಕು. ಇಲ್ಲಿ ತಾಯಿಯೇ ಮಗುವಿಗೆ ತಪ್ಪು ದಾರಿ ಹೇಳಿಕೊಡುತ್ತಿದ್ದಾಳೆ ಎಂದು ಬರೆದಿದ್ದಾರೆ. ಮತ್ತೊಬ್ಬರು ರಂಗೋಲಿ ಬಿಡಿಸಲು ಪಟ್ಟ ಶ್ರಮ ಮತ್ತು ಅದರ ಹಿಂದಿರುವ ಮನೋ ಭಾವನೆಯನ್ನು ಅರಿಯದ ಈ ಪ್ರವೃತ್ತಿ ಅಪಾಯಕಾರಿ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ.