ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸದ್ದಿಲ್ಲದೆ ನಡೆಯಿತು ಮತ್ತೊಂದು ಜೆನ್‌ ಝೀ ಕ್ರಾಂತಿ: ರಸ್ತೆ ದುರವಸ್ತೆ ತೋರಿಸಲು ನ್ಯೂಸ್ ರಿಪೋರ್ಟರ್ ಆದ ಬಾಲಕಿಯರು; ವಿಡಿಯೊ ವೈರಲ್ ಬೆನ್ನಲ್ಲೇ ರಾತ್ರೋರಾತ್ರಿ ಕಾಮಗಾರಿ

Viral Video: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮೂವರು ಶಾಲಾ ಬಾಲಕಿಯರು ರಸ್ತೆಯ ದುರವಸ್ಥೆಯನ್ನು ಎತ್ತಿ ತೋರಿಸಲು ವಿಭಿನ್ನ ಪ್ಲ್ಯಾನ್‌ ಮಾಡಿದ್ದಾರೆ. ಬಾಲಕಿಯರು ಮಡಚಿದ ಛತ್ರಿಯನ್ನೇ ಮೈಕ್ ರೀತಿಯಲ್ಲಿ ಹಿಡಿದು ‘ನ್ಯೂಸ್ ರಿಪೋರ್ಟರ್’ ಥರ ನಟಿಸಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು ರಾತ್ರೋರಾತ್ರಿ ರಸ್ತೆ ದುರಸ್ತಿ ಕಾಮಗಾರಿ ಆರಂಭಿಸಿದ್ದಾರೆ.

ರಸ್ತೆ ಗುಂಡಿ ಮುಚ್ಚಲು ವಿಡಿಯೊ ಮೂಲಕ ಜಾಗೃತಿ ಮೂಡಿಸಿದ ಬಾಲಕಿಯರು

ಮುಂಬೈ, ಆ. 12: ಗುಂಡಿ ಬಿದ್ದ ರಸ್ತೆಯ ಬಗ್ಗೆ ಜಾಗೃತಿ ಮೂಡಿಸಲು ಶಾಲಾ ಬಾಲಕಿಯರು ಮಾಡಿದ ಸೃಜನಶೀಲ ವಿಡಿಯೊವೊಂದು ಎಲ್ಲರ ಗಮನ ಸೆಳೆದಿದೆ (Viral Video). ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮೂವರು ಶಾಲಾ ಬಾಲಕಿಯರು ರಸ್ತೆಯ ದುರವಸ್ಥೆಯನ್ನು ಎತ್ತಿ ತೋರಿಸಲು ವಿಭಿನ್ನ ಪ್ಲ್ಯಾನ್‌ ಮಾಡಿದ್ದಾರೆ. ಬಾಲಕಿಯರು ಮಡಚಿದ ಛತ್ರಿಯನ್ನೇ ಮೈಕ್ ರೀತಿಯಲ್ಲಿ ಹಿಡಿದು ‘ನ್ಯೂಸ್ ರಿಪೋರ್ಟರ್’ ಥರ ನಟಿಸಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು ರಾತ್ರೋರಾತ್ರಿ ರಸ್ತೆ ದುರಸ್ತಿ ಕಾಮಗಾರಿ ಆರಂಭಿಸಿದ್ದಾರೆ.

ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮೂವರು ಶಾಲಾ ಬಾಲಕಿಯರು ಕರ್ಜತ್‌ನಲ್ಲಿರುವ ಗುಂಡಿಗಳಿಂದ ತುಂಬಿದ ಖಾಂಡ್ಪೆ-ಕೊಂಡಿವಾಡೆ ರಸ್ತೆಯನ್ನು ಹೈಲೈಟ್ ಮಾಡಲು ವಿಡಿಯೊ ಮಾಡಿದ್ದಾರೆ. ನೇಹಾ ಘಾರೆ ಎಂಬ ಬಾಲಕಿ ಛತ್ರಿಯನ್ನೇ ಮೈಕ್ ರೀತಿಯಲ್ಲಿ ಹಿಡಿದು ‘ನ್ಯೂಸ್ ರಿಪೋರ್ಟರ್’ ಥರವೇ ನಟಿಸಿದ್ದಾಳೆ. ಮತ್ತೊಬ್ಬ ಬಾಲಕಿ ಮಾನಸಿ ಪವಾರ್ ಮೊಬೈಲ್‌ನಲ್ಲಿ ಇಡೀ ಸಂಭಾಷಣೆಯನ್ನು ರೆಕಾರ್ಡ್ ಮಾಡಿದ್ದಾಳೆ.

ವಿಡಿಯೊ ನೋಡಿ:



"ರಸ್ತೆಯಲ್ಲಿ ಗುಂಡಿಗಳಿವೆಯೇ ಅಥವಾ ಗುಂಡಿಗಳಲ್ಲಿ ರಸ್ತೆ ಇದೆಯೇ?" ಎಂದು ವಿದ್ಯಾರ್ಥಿನಿಯೊಬ್ಬಳು ವಿಡಿಯೊದಲ್ಲಿ ಕೇಳಿದ್ದಾಳೆ. ಮೂವರು ರಸ್ತೆಯ ಮಧ್ಯದಲ್ಲಿ ನಿಂತು ಮಡಿಸಿದ ಛತ್ರಿಯನ್ನೇ ಮೈಕ್ ಆಗಿ ಬಳಸಿದ್ದಾರೆ. "ಇದು ವರದಿಗಾರ್ತಿ ನೇಹಾ ಘರೆ ಮತ್ತು ಕ್ಯಾಮರಾ ಪರ್ಸನ್‌ ಮಾನಸಿ ಪವಾರ್" ಎಂದು ವಿಡಿಯೊ ಕೊನೆಗೊಳ್ಳುತ್ತಿದ್ದಂತೆ ವಿದ್ಯಾರ್ಥಿನಿ ಹೇಳುವುದನ್ನು ಕೇಳಬಹುದು.

ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಕಾರ್‌ ನೋಡಿ ಮಾಲಕ ಭಾವುಕ

ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಸ್ಥಳೀಯ ಶಾಸಕ ಮಹೇಂದ್ರ ಥೋರ್ವ್ ಬಹುತೇಕ ರಾತ್ರಿಯಿಡೀ ಗುಂಡಿಗಳನ್ನು ಮುಚ್ಚಲು ತಾತ್ಕಾಲಿಕ ಕ್ರಮಗಳನ್ನು ಪ್ರಾರಂಭಿದರು. ಮಳೆಗಾಲ ಮುಗಿದ ತಕ್ಷಣ ರಸ್ತೆಯನ್ನು ಸಂಪೂರ್ಣವಾಗಿ ಹೊಸದಾಗಿ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪುಟ್ಟ ಮಕ್ಕಳ ಕ್ರಿಯಾಶೀಲತೆಗೆ ನೆಟ್ಟಿಗರು ಫಿದಾ ಆಗಿದ್ದು, ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.