ಹಳೆಯ ವಸ್ತುಗಳಿಂದ ಯುದ್ಧ ವಿಮಾನ ತಯಾರಿಸಿದ ಸರ್ಕಾರಿ ಶಾಲಾ ಮಕ್ಕಳು: ಕ್ರಿಯಾತ್ಮಕತೆಗೆ ನೆಟ್ಟಿಗರು ಫಿದಾ!
Viral Video: ಅಲಿಘರ್ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಹಾರುವ ಫೈಟರ್ ಜೆಟ್ ಮಾದರಿಯನ್ನು ನಿರ್ಮಿಸಿದ್ದು ಇವರ ಕ್ರಿಯೇಟಿವಿಟಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ವಿದ್ಯಾರ್ಥಿಗಳು ಕೇವಲ ಹಳೆಯ ತ್ಯಾಜ್ಯ ವಸ್ತುಗಳನ್ನು ಬಳಸಿ ಯುದ್ಧ ವಿಮಾನದ ಮಾದರಿಯನ್ನು ತಯಾರಿಸಿದ್ದಾರೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಂದ ಹಾರುವ ಫೈಟರ್ ಜೆಟ್ ನಿರ್ಮಾಣ -
ಅಲಿಗಢ,ಮಾ.16: ನಮ್ಮ ಬುದ್ದಿವಂತಿಕೆ ಚೆನ್ನಾಗಿದ್ದರೆ ಯಾವ ಕೆಲಸದಲ್ಲೂ ನಾವು ತೃಪ್ತಿ ಪಡೆಯಬಹುದು ಅನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಅಲಿಘರ್ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಹಾರುವ ಫೈಟರ್ ಜೆಟ್ ಮಾದರಿಯನ್ನು ನಿರ್ಮಿಸಿದ್ದು ಇವರ ಕ್ರಿಯೇಟಿವಿಟಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ವಿದ್ಯಾರ್ಥಿಗಳು ಕೇವಲ ಹಳೆಯ ತ್ಯಾಜ್ಯ ವಸ್ತುಗಳನ್ನು ಬಳಸಿ ಯುದ್ಧ ವಿಮಾನದ ಮಾದರಿಯನ್ನು ತಯಾರಿಸಿದ್ದಾರೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸರಿಯಾದ ಸಂಪನ್ಮೂಲಗಳ ಹೊರತಾಗಿಯೂ ಕ್ರಿಯಾತ್ಮಕತೆಯನ್ನು ತೋರಿಸಿದ್ದಾರೆ. F-22 ರಾಪ್ಟರ್ ಫೈಟರ್ ಜೆಟ್‌ನ ಹಾರುವ ಮಾದರಿಯನ್ನು ನಿರ್ಮಿಸಿದ್ದಾರೆ. ಈ ದೃಶ್ಯ ಸಾಮಾಜಿಕ ಮಾಧ್ಯಮ ದಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿಗಳ ಸಾಧನೆ ಗಮನ ಸೆಳೆದಿದೆ. ಮಾದರಿ ವಿಮಾನವನ್ನು ಕೇವಲ 6,000 ವೆಚ್ಚದಲ್ಲಿ ಥರ್ಮೋಕೋಲ್ ಮತ್ತು ಮೂಲ ಘಟಕಗಳಂತಹ ಹಗುರವಾದ ವಸ್ತುಗಳಿಂದ ರಚನೆ ಮಾಡಲಾಗಿದೆ.
ವಿಡಿಯೋ ನೋಡಿ:
नवाचार की उड़ान: परिषदीय विद्यालय के बच्चों ने बनाया उड़ने वाला फाइटर जेट
— Department Of Basic Education Uttar Pradesh (@basicshiksha_up) March 13, 2026
कंपोजिट विद्यालय भिलावली (अकराबाद-अलीगढ़) के विद्यार्थियों ने वेस्ट मटेरियल (फिश बॉक्स थर्माकोल) एवं Basic electronics की सहायता से F-22 Raptor Fighter jet का मॉडल तैयार कर उसे सफलतापूर्वक उड़ाने का अभिनव… pic.twitter.com/JIfWrFGzen
4 ರಿಂದ 8ನೇ ತರಗತಿಯ ಐವರು ವಿದ್ಯಾರ್ಥಿಗಳು ಪ್ರಾಂಶಿ ಕುಮಾರಿ, ಆಶಿ, ಹೃದೇಶ್ ಕುಮಾರ್, ರಂಜನಾ ಕುಮಾರಿ ಮತ್ತು ಕಾರ್ತಿಕ್ ಶರ್ಮಾ ಎಂಬ ವಿದ್ಯಾರ್ಥಿಗಳು ತಯಾರಿಸಿದ್ದು ತಮ್ಮ ಶಿಕ್ಷಕ ಆಶಿಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಯೋಜನೆಯನ್ನು ಪೂರ್ಣಗೊಳಿಸಿದರು. ವಿಮಾನ ವನ್ನು ದೂರದಿಂದಲೇ ನಿಯಂತ್ರಿಸಲು ಸಾಧ್ಯವಾಗಲಿದ್ದು 1-1.5 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದೆ.
Viral Video: ಛೇ ಎಂತಾ ಅಮಾನವೀಯ ಕೃತ್ಯ: ಭಾರಿ ತೂಕದ ಪಾರ್ಸೆಲ್ ಹೊತ್ತು ಹೈರಾಣಾದ ಡೆಲಿವರಿ ಬಾಯ್!
ಈ ಮಾದರಿಯನ್ನು ಅಲಿಗಢ ಉತ್ಸವದಲ್ಲಿ ಪ್ರದರ್ಶಿಸಲಾಯಿತು. ಅಲ್ಲಿ ನೆರೆದಿದ್ದ ಶಿಕ್ಷಕರು ಇದನ್ನು ಶ್ಲಾಘಿಸಿದರು. ಅಧಿಕಾರಿಗಳ ಪ್ರಕಾರ, ಈ ಪ್ರಾಯೋಗಿಕ ಪ್ರಯೋಗಗಳು ಮಕ್ಕಳ ಕುತೂಹಲ ಮತ್ತು ಆತ್ಮ ವಿಶ್ವಾಸವನ್ನು ಬೆಳೆಸಲು ಸಾಧ್ಯವಾಗುತ್ತದೆ.ಅದೆ ರೀತಿ ಚಿಕ್ಕ ವಯಸ್ಸಿನಲ್ಲಿಯೇ ಕ್ರಿಯಾತ್ಮಕ ತಂತ್ರಜ್ಞಾನಗಳಿಗೆ ಅವರನ್ನು ಒಡ್ಡಿಕೊಳ್ಳುತ್ತವೆ.
ಈ ಮಕ್ಕಳು ತಯಾರಿಸಿದ ವಿಮಾನವು ಆಕಾಶದಲ್ಲಿ ಹಾರುತ್ತಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.ಅನೇಕ ಬಳಕೆದಾರರು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಸೃಜನಶೀಲತೆಯ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ. ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಇಂತಹ ಪ್ರಾಯೋಗಿಕ ಪ್ರಯೋಗಗಳನ್ನು ಪ್ರೋತ್ಸಾಹಿಸಬೇಕು ಎಂದು ಹಲವಾರು ಕಾಮೆಂಟ್ ಮಾಡಿದ್ದಾರೆ.