ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಫುಟ್‌ಪಾತ್ ಮೇಲೆ ಸ್ಕೂಟರ್ ಓಡಿಸಿದ ಯುವಕನಿಗೆ ಅಜ್ಜಿಯ 'ಖಡಕ್' ವಾರ್ನಿಂಗ್: ವಿಡಿಯೋ ನೋಡಿ!

Viral Video: ಪಾದಚಾರಿ ಮಾರ್ಗದಲ್ಲಿ ಸ್ಕೂಟರ್ ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬನಿಗೆ ವೃದ್ಧೆಯೊಬ್ಬರು ತಕ್ಕ ಪಾಠ ಕಲಿಸಿದ ಘಟನೆವೊಂದು ನಡೆದಿದೆ. ರಸ್ತೆಯಲ್ಲಿ ಟ್ರಾಫಿಕ್ ಇದ್ದ ಕಾರಣ, ಸಮಯ ಉಳಿಸಲು ಸ್ಕೂಟರ್ ಸವಾರನೊಬ್ಬ ಫುಟ್‌ಪಾತ್ ಮೇಲೆ ಸ್ಕೂಟರ್ ಚಲಾಯಿಸಿದ್ದನು. ಆದರೆ ಅದೇ ದಾರಿಯಲ್ಲಿ ಬಂದ ವೃದ್ಧೆಯೂ ಯುವಕನಿಗೆ ದಾರಿ ಬಿಡದೆ ಅಡ್ಡವಾಗಿ ನಿಂತು ಸರಿಯಾದ ಬುದ್ದಿಮಾತನ್ನು ಹೇಳಿ ರುವ ವಿಡಿಯೊ ವೈರಲ್ ಆಗಿದೆ. ಈ ಘಟನೆಯೂ ಕೇರಳದ ಕೋಝಿಕೋಡ್‌ ಎಂಬಲ್ಲಿ ನಡೆದಿದೆ.

ಸ್ಕೂಟರ್ ಸವಾರನಿಗೆ ಎಚ್ಚರಿಕೆ ನೀಡಿದ ಅಜ್ಜಿ

ಕೋಝಿಕೋಡ್,ಫೆ.13: ಇತ್ತೀಚೆಗೆ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ರಸ್ತೆ ಸುರಕ್ಷಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರೂ ಗಾಳಿಗೆ ತೂರಿ ನಿಯಮ ಉಲ್ಲಂಘನೆ ಮಾಡು ವವರು ಅನೇಕರು ಇದ್ದಾರೆ. ಅಂತೆಯೇ ಪಾದಚಾರಿ ಮಾರ್ಗದಲ್ಲಿ ಸ್ಕೂಟರ್ ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬನಿಗೆ ವೃದ್ಧೆಯೊಬ್ಬರು ತಕ್ಕ ಪಾಠ ಕಲಿಸಿದ ಘಟನೆವೊಂದು ನಡೆದಿದೆ. ರಸ್ತೆಯಲ್ಲಿ ಟ್ರಾಫಿಕ್ ಇದ್ದ ಕಾರಣ, ಸಮಯ ಉಳಿಸಲು ಸ್ಕೂಟರ್ ಸವಾರನೊಬ್ಬ ಫುಟ್‌ಪಾತ್ ಮೇಲೆ ಸ್ಕೂಟರ್ ಚಲಾಯಿಸಿದ್ದನು.ಆದರೆ ಅದೇ ದಾರಿಯಲ್ಲಿ ಬಂದ ವೃದ್ಧೆಯೂ ಯುವಕನಿಗೆ ದಾರಿ ಬಿಡದೆ ಅಡ್ಡವಾಗಿ ನಿಂತು ಸರಿಯಾದ ಬುದ್ದಿಮಾತನ್ನು ಹೇಳಿರುವ ವಿಡಿಯೊ ವೈರಲ್ (Viral Video) ಆಗಿದೆ. ಈ ಘಟನೆಯೂ ಕೇರಳದ ಕೋಝಿಕೋಡ್‌ ಎಂಬಲ್ಲಿ ನಡೆದಿದೆ.

ವಿಡಿಯೋ ನೋಡಿ:



ಇತ್ತೀಚೆಗೆ ಫುಟ್‌ಪಾತ್ ನಲ್ಲಿ ಕ್ಯಾರೇ ಎನ್ನದೇ ಪ್ರಯಾಣ ಮಾಡುವವರು ಅನೇಕರು ಇದ್ದಾರೆ. ಇದೀಗ ಕೋಝಿಕೋಡ್‌ ನಲ್ಲಿ ಪಾದಚಾರಿ ಮಾರ್ಗದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ವ್ಯಕ್ತಿಯನ್ನು ವೃದ್ಧ ಮಹಿಳೆ ಎದುರಿಸುತ್ತಿರುವುದನ್ನು ಕಂಡು ಬಂದಿದೆ. ಕ್ಲಿಪ್‌ನಲ್ಲಿ, ಮಹಿಳೆಯೂ ಸವಾರನಿಗೆ ಪಾದಚಾರಿ ರಸ್ತೆಯನ್ನು ಬಳಸದಂತೆ ಮತ್ತು ರಸ್ತೆಯಲ್ಲಿ ಸವಾರಿ ಮಾಡುವಂತೆ ದೃಢವಾಗಿ ಬುದ್ದಿವಾದ ಹೇಳುವುದನ್ನು ಕಾಣಬಹುದು.

Viral News: ಮನ ಕಲಕುವ ದೃಶ್ಯ! ವಿಕಲಚೇತನ ಮಗನನ್ನು 66 ಕಿ.ಮೀ ನಡೆದು ಹೆಗಲ ಮೇಲೆ ಕೂರಿಸಿ ಕರೆದೊಯ್ದ ತಂದೆ

ರಸ್ತೆಯಲ್ಲಿ ಹೆಚ್ಚು ಟ್ರಾಫಿಕ್ ಜಾಮ್ ಇದ್ದ ಕಾರಣ, ಸಮಯ ಉಳಿಸಲು ಸ್ಕೂಟರ್ ಸವಾರನು ಫುಟ್‌ಪಾತ್ ಮೇಲೆ ವಾಹನವನ್ನು ಏರಿಸಿದ್ದಾನೆ. ಅದೇ ಸಮಯದಲ್ಲಿ ಅಲ್ಲಿ ನಡೆದು ಬರುತ್ತಿದ್ದ ವೃದ್ಧೆಯೊಬ್ಬರು ಸವಾರನ ದಾರಿಗೆ ಅಡ್ಡವಾಗಿ ನಿಂತರು. ಸವಾರ ಎಷ್ಟೇ ಪ್ರಯತ್ನಿಸಿದರೂ ಅಜ್ಜಿ ಮಾತ್ರ ದಾರಿ ಬಿಟ್ಟು ಕೊಟ್ಟಿಲ್ಲ. ಇದರ ಬದಲಾಗಿ ಸವಾರನಿಗೆ ಪಾದಚಾರಿ ಮಾರ್ಗವನ್ನು ಬಳಸ ದಂತೆ ಎಚ್ಚರಿಕೆಯನ್ನು ನೀಡಿದ್ದಾರೆ

ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾದ ಈ ವೀಡಿಯೊ ಆನ್‌ಲೈನ್‌ನಲ್ಲಿ ಶೀಘ್ರವಾಗಿ ಗಮನ ಸೆಳೆಯಿತು, ಸಂಚಾರ ಉಲ್ಲಂಘನೆಗಳ ವಿರುದ್ಧ ಎದ್ದುನಿಂತು ಧೈರ್ಯವನ್ನು ತೋರಿಸಿದ್ದಕ್ಕಾಗಿ ವೀಕ್ಷಕರು ಮಹಿಳೆಯನ್ನು ಶ್ಲಾಘಿಸಿದ್ದಾರೆ. ಅನೇಕರು ಅಜ್ಜಿಯ ಧೈರ್ಯವನ್ನು ಕೊಂಡಾಡಿದ್ದಾರೆ. ಬಳಕೆ ದಾರರೊಬ್ಬರು ಅವಳ ಅರ್ಧದಷ್ಟು ಧೈರ್ಯವಿರುವ 5-10 ಜನರು ಇನ್ನೂ ಇರಬೇಕೆಂದು ನಾನು ಬಯಸುತ್ತೇನೆ., ಅವರು ತೋರಿದ ದಿಟ್ಟತನ ಎಲ್ಲರಿಗೂ ಮಾದರಿ ಎಂದಿದ್ದಾರೆ.