Viral News: ಮಗುವಿನ ತೂಕಕ್ಕಿಂತ ಶಾಲಾ ಬ್ಯಾಗ್ ತೂಕವೇ ಹೆಚ್ಚಾಯಿತೇ? ತಂದೆಯ ಭಾವುಕ ಪೋಸ್ಟ್ ವೈರಲ್!
ಒಂದನೇ ತರಗತಿಯಲ್ಲಿ ವ್ಯಾಸಾಂಗ ಮಾಡುವ ಮಗು ಒಂದು ಬರೋಬ್ಬರಿ 4.5 ಕೆಜಿ ತೂಕದ ಶಾಲಾ ಚೀಲವನ್ನು ಹೊತ್ತೊಯ್ಯಬೇಕಾಗಿದೆ ಎಂದು ಪೋಷಕರೊಬ್ಬರು ತಮ್ಮ ಅಳಲನ್ನು ತೋಡಿಕೊಂಡ ಘಟನೆ ಮಹಾರಾಷ್ಟ್ರದ ಸಂಭಾಜಿನಗರದಲ್ಲಿ ನಡೆದಿದೆ. ತಮ್ಮ ಮಗ 4.5 ಕೆಜಿ ತೂಕದ ಶಾಲಾ ಚೀಲ ಮತ್ತು ಟಿಫಿನ್ ಅನ್ನು ಹೊತ್ತೊಯ್ಯುತ್ತಾನೆ ಎಂದು ಮಗುವಿನ ತಂದೆಯೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು ಸದ್ಯ ವೈರಲ್ ಆಗುತ್ತಿದೆ.
ಸಾಂದರ್ಭಿಕ ಚಿತ್ರ -
ಮಹಾರಾಷ್ಟ್ರ,ಜ. 8: ಹಿಂದಿನ ಕಾಲದಲ್ಲಿ ಮಕ್ಕಳು ಶಾಲೆಗೆ ಹೋಗುವಾಗ ಕಲಿಕೆಯ ಉದ್ದೇಶಕ್ಕಾಗಿ ಮಕ್ಕಳಿಗೆ ಸ್ಲೇಟು ಬಳಪ ನೀಡಲಾಗುತ್ತಿತ್ತು. ಕಾಲ ಕ್ರಮೇಣ ಪುಸ್ತಕಗಳಾಗಿ ಮಾರ್ಪಟ್ಟು ಈಗ ಮೊದಲ ಹಂತದ ಕಲಿಕೆಗೂ ಕಾಪಿ ಬುಕ್ ಗಳಿವೆ, ರಿವಿಶನ್ ಮಾಡುವ ಹೋಂ ವರ್ಕ್ ಪುಸ್ತಕಗಳು ಇವೆ. ಇತ್ತೀಚಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ಅಧಿಕ ಪ್ರಾಮುಖ್ಯತೆ ನೀಡಲಾಗುತ್ತಿದ್ದು ಪ್ರತಿ ಕಲಿಕೆಯ ವಿಷಯಕ್ಕೂ ಎರಡು ಮೂರು ಪುಸ್ತಕಗಳಿವೆ. ಇವೆಲ್ಲ ಪುಸ್ತಕವನ್ನು ಮಕ್ಕಳು ನಿತ್ಯ ಬ್ಯಾಗ್ ನಲ್ಲಿ ಕೊಂಡೊಯ್ಯುವಾಗ ಮಕ್ಕಳಿಗೆ ತುಂಬಾ ಹೊರೆಯಾಗುತ್ತದೆ ಎಂಬ ದೂರುಗಳು ಪೋಷಕರಿಂದ ಕೇಳಿಬರುತ್ತಲೇ ಇದೆ. ಇದೀಗ ಅದರ ಬೆನ್ನಲ್ಲೆ ಒಂದನೇ ತರಗತಿಯಲ್ಲಿ ವ್ಯಾಸಾಂಗ ಮಾಡುವ ಮಗು ಒಂದು ಬರೋಬ್ಬರಿ 4.5 ಕೆಜಿ ತೂಕದ ಶಾಲಾ ಚೀಲವನ್ನು ಹೊತ್ತೊಯ್ಯ ಬೇಕಾಗಿದೆ ಎಂದು ಪೋಷಕರೊಬ್ಬರು ತಮ್ಮ ಅಳಲನ್ನು ತೋಡಿಕೊಂಡ ಘಟನೆ ಮಹಾರಾಷ್ಟ್ರದ ಸಂಭಾಜಿನಗರದಲ್ಲಿ ನಡೆದಿದೆ. ತಮ್ಮ ಮಗ 4.5 ಕೆಜಿ ತೂಕದ ಶಾಲಾ ಚೀಲ ಮತ್ತು ಟಿಫಿನ್ ಅನ್ನು ಹೊತ್ತೊಯ್ಯುತ್ತಾನೆ ಎಂದು ಮಗುವಿನ ತಂದೆಯೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು ಸದ್ಯ ವೈರಲ್ (Viral News) ಆಗುತ್ತಿದೆ.
ಇತ್ತೀಚಿನ ಕೆಲ ವರ್ಷದಿಂದ ಮಕ್ಕಳ ಆರೋಗ್ಯ ಮತ್ತು ಶಾಲಾ ಶಿಕ್ಷಣದ ಲೋಪದೋಷಗಳ ಬಗ್ಗೆ ಈಗಾಗಾಲೇ ಪೋಷಕರಿಂದ ಕಳವಳಗಳು, ಆರೋಪಗಳು ದಿನನಿತ್ಯ ಕೇಳಿ ಬರುತ್ತಿದೆ. ಅಂತೆಯೇ ತನ್ನ ಮಗನ ಶಾಲಾ ಚೀಲದ ಬಾರದ ಬಗ್ಗೆ ತಂದೆಯೊಬ್ಬರು ಪೋಸ್ಟ್ ಮಾಡಿದ್ದು ಚಿಕ್ಕ ವಯಸ್ಸಿ ನಲ್ಲಿಯೇ ಮಕ್ಕಳು ದೈಹಿಕವಾಗಿ ಹೊರೆ ಹೊರಬೇಕಾದ ಪರಿಸ್ಥಿತಿ ಎದುರಾಗಿದೆ ಎಂಬುದರ ಮೂಲಕ ಇವರ ಪೋಸ್ಟ್ ಆನ್ಲೈನ್ ನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
Yes. And this is a real issue.
— Uday Sharma (@udaysharmatech) January 6, 2026
4.5 kg on a 21 kg child is way too much, rules exist for a reason.
Many schools quietly ignore this because it’s inconvenient to fix timetables, lockers, or homework policies. The long-term cost is on the child’s spine, posture, and fatigue.…
ಮಹಾರಾಷ್ಟ್ರದ ಸಂಭಾಜಿನಗರದ ಬಾಲು ಗೊರಾಡೆ ಎನ್ನುವವರು ತಮ್ಮ ಆರು ವರ್ಷದ ಮಗನ ಶಾಲಾ ಚೀಲವನ್ನು ಪರಿಶೀಲಿಸಿದ್ದಾರೆ. ಶಾಲಾ ಬ್ಯಾಗಿನ ತೂಕವು ಅದು ಮಗುವಿನ ದೈಹಿಕ ಸಾಮರ್ಥ್ಯವನ್ನು ಮೀರುವಂತಿದ್ದು ಅದರ ತೂಕವನ್ನು ಪತ್ತೆ ಹಚ್ಚಲು ಅಂಗಡಿಯ ಸ್ಕೇಲ್ ಗೆ ಹಾಕಿದ್ದಾರೆ. ಟಿಫನ್ ಬಾಕ್ಸ್, ಪುಸ್ತಕ ಇತರ ಕಲಿಕೆ ಸಾಮಗ್ರಿ ಹೊತ್ತಿದ್ದ ಆ ಶಾಲಾ ಬ್ಯಾಗ್ 4.5 ಕೆ.ಜಿ. ತೂಕ ಹೊಂದಿದ್ದು ತಿಳಿದುಬಂದಿದೆ. ಇದನ್ನು ಅವರು ಫೋಟೊ ತೆಗೆದು ಕೊಂಡು ಬಳಿಕ ತಮ್ಮ ಟ್ವಿಟ್ಟರ್ ಎಕ್ಸ್ ಖಾತೆಯಲ್ಲಿ ಇದನ್ನು ಪೋಸ್ಟ್ ಮಾಡಿದ್ದಾರೆ.
ವೈರಲ್ ಆದ ಪೋಸ್ಟ್ ನಲ್ಲಿ, ನನ್ನ ಮಗ 1ನೇ ತರಗತಿಯಲ್ಲಿ ಓದುತ್ತಿದ್ದಾನೆ. ಅವನ ದೇಹದ ತೂಕ 21 ಕೆಜಿ ಇದೆ. ಆದರೆ ಆತನ ಬ್ಯಾಗದ ತೂಕ 4.5 ಕೆಜಿ ಇದೆ. ಶಾಲಾ ಚೀಲದಲ್ಲಿ ಟಿಫಿನ್ ಬಾಕ್ಸ್ , ಕಂಪಾಸ್ ಬಾಕ್ಸ್, ಕಾಪಿ ಬುಕ್ , ನೋಟ್ಸ್ ಬುಕ್ ಇತರ ಪರಿಕರ ಇದೆ. ಇದು ಮಗುವಿನ ದೇಹದ ತೂಕಕ್ಕೆ ಹೊರೆ ಯಾಗುವ ಮಟ್ಟದ್ದಾಗಿದೆ. ನಾನು ಈ ವಿಷಯವನ್ನು ಶಾಲೆಯ ಆಡಳಿತ ಮಂಡಳಿ ಗಮನಕ್ಕೆ ಹಲವು ಬಾರಿ ತಂದಿದ್ದೇವೆ. ನೀವು ನಿಮ್ಮ ಮಗುವಿನ ಶಾಲಾ ಚೀಲವನ್ನು ಪರಿಶೀಲಿಸಿ, ಆಗ ನಿಮಗೂ ಹೀಗೆ ಅಚ್ಚರಿಯಾಗಬಹುದು ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಬಳಕೆದಾರರೊಬ್ಬರು ಈ ಬಗ್ಗೆ ಕಾಮೆಂಟ್ ಮಾಡಿ, ಈ ನಿಯಮ ಬದಲಾಗಬೇಕಿದೆ. ನಮ್ಮ ಶಾಲಾ ದಿನಗಳಲ್ಲಿಯೂ ಈ ನಿಯಮ ಇತ್ತು. ವಿದೇಶಗಳಲ್ಲಿ ಈ ನಿಯಮ ಕಟ್ಟು ನಿಟ್ಟಾಗಿ ಜಾರಿಯಲ್ಲಿದೆ. ಎಲ್ಲಾ ಪುಸ್ತಕಗಳನ್ನು ಪ್ರತಿದಿನ ಒಯ್ಯುವ ಅವಶ್ಯಕತೆ ಇಲ್ಲ ಅದರ ಬದಲು ಶಾಲೆಗಳಲ್ಲಿ ಲಾಕರ್‌ಗಳನ್ನು ಮಾಡಬಹುದು. ಡಿಜಿಟಲ್ ಪಠ್ಯಪುಸ್ತಕಗಳನ್ನು ಮಾಡಬಹುದು ಎಂದು ಸಲಹೆ ನೀಡಿದ್ದಾರೆ.
ನಿಯಮ ಏನಿದೆ?
ಎನ್ ಸಿ ಇಆರ್ ಟಿ, ಸಿಬಿಎಸ್ ಇ, (NCERT, CBSE) ಕೇಂದ್ರೀಯ ವಿದ್ಯಾಲಯಗಳು ಮತ್ತು ನವೋದಯ ವಿದ್ಯಾಲಯಗಳು ಇತರ ಸಂಸ್ಥೆಗಳಿಗೆ ಈ ಬಗ್ಗೆ ಸ್ಕೂಲ್ ಬ್ಯಾಗ್ ನಿಯಮ ರೂಪಿಸ ಲಾಗಿದೆ. ಶಿಕ್ಷಣ ಸಚಿವಾಲಯದ ಶಾಲಾ ಚೀಲ ನೀತಿ (2020) ಪ್ರಕಾರ, ವಿದ್ಯಾರ್ಥಿಯ ಶಾಲಾ ಚೀಲವು ಅವರ ದೇಹದ ತೂಕದ ಶೇಕಡಾ 10 ಕ್ಕಿಂತ ಹೆಚ್ಚು ತೂಕವಿರಬಾರದು ಎಂಬುದನ್ನು ತಿಳಿಸಿದೆ. ಅಂತೆಯೇ 1-2ನೇ ತರಗತಿ ಮಕ್ಕಳಿಗೆ 1.6 ರಿಂದ 2.2 ಕೆಜಿ ಒಳಗೆ ಶಾಲಾ ಬ್ಯಾಗ್ ತೂಕ ಇರಬೇಕು, 3-5ರ ತರಗತಿಯ ಮಕ್ಕಳಿಗೆ 1.7 ರಿಂದ 2.5 ಕೆಜಿ,6-7,ನೇ ತರಗತಿ ಮಕ್ಕಳಿಗೆ 2 ರಿಂದ 3 ಕೆಜಿ, 8ನೇ ತರಗತಿಗೆ 2.5 ರಿಂದ 4 ಕೆಜಿ, 9-10 ತರಗತಿ ಮಕ್ಕಳಿಗೆ 2.5 ರಿಂದ 4.5 ಕೆಜಿ, 11-12 ತರಗತಿ( ಪಿಯುಸಿ) ಮಕ್ಕಳಿಗೆ 3.5 ರಿಂದ 5 ಕೆಜಿ ಒಳಗೆ ಇರಬೇಕು ಎಂಬ ನಿಯಮ ಇದೆ.