ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಸ್ತೆ ಬದಿ ಕಸ ಎಸೆದ ವ್ಯಕ್ತಿಗೆ ಜೀವನದಲ್ಲೇ ಮರೆಯಾಗದ ಪಾಠ: ಸಿಸಿಟಿವಿ ಕ್ಯಾಮರಾ ವೀಕ್ಷಿಸಿ ಲೌಡ್‌ಸ್ಪೀಕರ್ ಮೂಲಕ ಎಚ್ಚರಿಕೆ ನೀಡಿದ ಅಧಿಕಾರಿ

Viral Video: ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಕಿ ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುತ್ತಿದ್ದ ವ್ಯಕ್ತಿಯೊಬ್ಬ ಸಿಸಿಟಿವಿ ಕ್ಯಾಮರಾ ಕಣ್ನಿಗೆ ಸಿಕ್ಕಿಬಿದ್ದಿದ್ದಾನೆ. ಕೂಡಲೇ ಆತನಿಗೆ ಆಧಿಕಾರಿಯೊಬ್ಬರು ಧ್ವನಿವರ್ಧಕದಲ್ಲಿ ಸಾರ್ವಜನಿಕ ಎಚ್ಚರಿಕೆ ನೀಡಿದ್ದಾರೆ. ಅಕ್ಟೋಬರ್ 9ರಂದು ನಡೆದ ಈ ಘಟನೆಯು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಗ್ರೇಟರ್‌ ನೋಯ್ಡಾದಲ್ಲಿ ರಸ್ತೆ ಕಸ ಬದಿ ಕಸ ಎಸೆದ ವ್ಯಕ್ತಿ

ಲಖನೌ, ಅ. 11: ಭಾರತೀಯರಲ್ಲಿ ನಾಗರಿಕ ಪ್ರಜ್ಞೆ ಅನ್ನೋದು ಮರೆಯಾಗಿದೆ ಅನ್ನುವ ದೂರುಗಳು ದಿನ ನಿತ್ಯ ಕೇಳಿ ಬರುತ್ತಲೇ ಇದೆ. ಅದರಲ್ಲೂ ಎಲ್ಲೆಂದರಲ್ಲಿ ಕಸ- ತ್ಯಾಜ್ಯ ಎಸೆಯಬಾರದು ಎಂದು ಎಷ್ಟೇ ಅರಿವು ಮೂಡಿಸಿದರೂ ಜನ ಪ್ರಜ್ಞಾವಂತರಂತೆ ವರ್ತಿಸುತ್ತಿಲ್ಲ. ಇದಕ್ಕೆ ಸಾಕ್ಷಿಯಾಗಿ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಕಿ ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುತ್ತಿದ್ದ ವ್ಯಕ್ತಿಯೊಬ್ಬ ಸಿಸಿಟಿವಿ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾನೆ. ಕೂಡಲೇ ಆತನಿಗೆ ಆಧಿಕಾರಿಯೊಬ್ಬರು ಧ್ವನಿವರ್ಧಕದಲ್ಲಿ ಸಾರ್ವಜನಿಕ ಎಚ್ಚರಿಕೆ (Viral News) ನೀಡಿದ್ದಾರೆ.

ಗ್ರೇಟರ್ ನೋಯ್ಡಾದಲ್ಲಿ ವ್ಯಕ್ತಿಯೊಬ್ಬ ಸೆಕ್ಟರ್ ಬೀಟಾ 1ರಲ್ಲಿ ಗೋಡೆಯ ಪಕ್ಕದಲ್ಲಿ ಕಸ ಸುರಿಯುತ್ತಿರುವುದು ಕಂಡು ಬಂದಿದೆ. ಅದಾಗ್ಯೂ, ಆತ ಕಸ ಎಸೆದು ಹೊರಡುವ ವೇಳೆಗೆ ಸಾರ್ವಜನಿಕ ಪ್ರಕಟಣೆ ಹೊರಡಿಸಿ ತ್ಯಾಜ್ಯವನ್ನು ಎತ್ತುವಂತೆ ಎಚ್ಚರಿಕೆ ನೀಡಲಾಗಿದೆ.

ವಿಡಿಯೊ ನೋಡಿ:



ಅಕ್ಟೋಬರ್ 9ರಂದು ರಾತ್ರಿ 10:15ರ ಸುಮಾರಿಗೆ ನಡೆದ ಈ ಘಟನೆಯು ವಸತಿ ವಲಯದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಕೈಯಲ್ಲಿ ಮಗುವನ್ನು ಎತ್ತಿಕೊಂಡು ಬಂದಿದ್ದ ಆತ ಗೋಡೆಯ ಪಕ್ಕದಲ್ಲಿ ಕಸವನ್ನು ಎಸೆಯಲು ಪ್ರಯತ್ನಿಸಿದ್ದಾನೆ. ಸಿಸಿಟಿವಿ ದೃಶ್ಯಾವಳಿಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದ ಅಧಿಕಾರಿ ತಕ್ಷಣವೇ ಸಾರ್ವಜನಿಕ ಘೋಷಣೆ ವ್ಯವಸ್ಥೆಯನ್ನು ಬಳಸಿಕೊಂಡು ಅವನನ್ನು ಪ್ರಶ್ನಿಸಿ  ಕಸವನ್ನು ಎತ್ತುವಂತೆ ಆದೇಶಿಸಿದ್ದಾರೆ.

ಇಂಗ್ಲೆಂಡ್‌ನ ದುಬಾರಿ ಶಸ್ತ್ರಚಿಕಿತ್ಸೆಯಿಂದ ಬೇಸತ್ತು ಭಾರತಕ್ಕೆ ಬಂದ ವ್ಯಕ್ತಿ

ಧ್ವನಿವರ್ಧಕ (ಲೌಡ್‌ ಸ್ಪೀಕರ್)  ಬಳಸಿ  ಕಸ ಯಾಕೆ ಹಾಕಿದ್ದೀರಿ? ಕೂಡಲೇ ತೆಗೆಯಿರಿ. ನಿಮಗೆ ದಂಡ ವಿಧಿಸಲಾಗುವುದು ಎಂದು ಗದರಿಸಿದ್ದಾರೆ. ಇದರಿಂದ ಎಚ್ಚೆತ್ತ ಆ ವ್ಯಕ್ತಿ ಕೊನೆಗೆ ಕಸವನ್ನು ವಾಪಸ್ ತೆಗೆದುಕೊಂಡು ಹೋಗಿದ್ದಾನೆ.​ ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯನ್ನು ಕಾಪಾಡಲು ಇದು ಸರಿಯಾದ ವ್ಯವಸ್ಥೆ ಎಂದು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.