ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮದುವೆಗೆ ಸಿಗರೇಟ್ ಸೇದುತ್ತಾ ಬುಲ್ಡೋಜರ್ ಏರಿ ಬಂದ ವರ: ವಿಡಿಯೊ ವೈರಲ್ ಆಗುತ್ತಿದ್ದಂತೆ ಪೊಲೀಸರರಿಂದ ಬಿತ್ತು ಭಾರೀ ದಂಡ!

Viral Video: ವಧು ಅಥವಾ ವರ ಐಷಾರಾಮಿ ಕಾರಿನಲ್ಲಿ ಬರುವುದು, ಕುದುರೆ ಏರಿ ಬರುವುದು ಹೀಗೆ ನಾನಾ ದೃಶ್ಯಗಳು ವೈರಲ್ ಆಗುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಉತ್ತರ ಪ್ರದೇಶದ ಮೊರಾದಾಬಾದ್ ನ ಮದುವೆಯಲ್ಲಿ ವರನೊಬ್ಬ ಜೆಸಿಬಿ ಏರಿ, ಕೈಯಲ್ಲಿ ಸಿಗರೇಟ್ ಸೇದುತ್ತಾ ಎಂಟ್ರಿ ನೀಡಿದ್ದಾನೆ‌. ಸದ್ಯ ಇದರ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮದುವೆ ಸಮಾರಂಭದಲ್ಲಿ ಇಂತಹ ನಡವಳಿಕೆ ಬೇಕೆ? ಎಂದು ಕಿಡಿಕಾರಿದ್ದಾರೆ.

ಬುಲ್ಡೋಜರ್ ಏರಿ ಮದುವೆ ಮಂಟಪಕ್ಕೆ ಬಂದ ವರ

ಮೊರಾದಾಬಾದ್,ಜೂ.12: ಇತ್ತೀಚೆಗೆ ಮದುವೆ ಸಮಾರಂಭವನ್ನು ಅದ್ದೂರಿಯಾಗಿ ಆಚರಣೆ ಮಾಡಿಕೊಳ್ಳುವುದು ಒಂದು ಟ್ರೆಂಡ್ ಆಗಿ ಬಿಟ್ಟಿದೆ. ವಧು ಅಥವಾ ವರ ಐಷಾರಾಮಿ ಕಾರಿನಲ್ಲಿ ಬರುವುದು, ಕುದುರೆ ಏರಿ ಬರುವುದು ಹೀಗೆ ನಾನಾ ದೃಶ್ಯಗಳು ವೈರಲ್ (Viral News) ಆಗುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಉತ್ತರ ಪ್ರದೇಶದ ಮೊರಾದಾಬಾದ್ ನ ಮದುವೆಯಲ್ಲಿ ವರನೊಬ್ಬ ಜೆಸಿಬಿ ಏರಿ, ಕೈಯಲ್ಲಿ ಸಿಗರೇಟ್ ಸೇದುತ್ತಾ ಎಂಟ್ರಿ ನೀಡಿದ್ದಾನೆ‌. ಸದ್ಯ ಇದರ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮದುವೆ ಸಮಾರಂಭದಲ್ಲಿ ಇಂತಹ ನಡವಳಿಕೆ ಬೇಕೆ? ಎಂದು ಕಿಡಿಕಾರಿದ್ದಾರೆ.

ಈ ಘಟನೆಯೂ ಉಮ್ರಿ ಕಲಾ ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ವರ ಉಸ್ಮಾನ್ ಎಂಬವರು ಜೆಸಿಬಿ ಯಂತ್ರ ಏರಿ ಮದುವೆ ಹಾಲ್ ಗೆ ಎಂಟ್ರಿ ನೀಡಿದ್ದಾನೆ. ಅದರಲ್ಲೂ ಮತ್ತಷ್ಟು ಶೋಕಿ ಮಾಡಲು ಸಿಗರೇಟ್ ಸೇದುತ್ತಾ ಎಂಟ್ರಿ ನೀಡಿದ್ದಾನೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಪೊಲೀಸರು ಕ್ರಮ ಕೈಗೊಂಡಿದ್ದು ಭಾರೀ ದಂಡವನ್ನು ವಿಧಿಸಿದ್ದಾರೆ. ಇಂತಹ ಆಚರಣೆಗಳು ಮದುವೆ ಸಮಾರಂಭದಲ್ಲಿ ಯಾಕೆ ಬೇಕು? ಎಂದು ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.

ವಿಡಿಯೋ ನೋಡಿ:



ವರ ಉಸ್ಮಾನ್ ಜೆಸಿಬಿ ಯಂತ್ರದ ಮುಂಭಾಗದ ಬಕೆಟ್ ಮೇಲೆ ಆಸನದ ವ್ಯವಸ್ಥೆ ಮಾಡಿ, ಅದರ ಮೇಲೆ ರಾಜನಂತೆ ಕೂತು ಎಂಟ್ರಿ ನೀಡಿದ್ದಾನೆ‌. ಅಷ್ಟೇ ಅಲ್ಲದೆ, ಸಾರ್ವಜನಿಕ ರಸ್ತೆಯಲ್ಲೇ ಕೈಯಲ್ಲಿ ಸಿಗರೇಟ್ ಹಿಡಿದು ಹೊಗೆ ಯೂದುತ್ತಾ ಪೋಸ್ ಕೂಡ ನೀಡಿದ್ದಾನೆ. ಆತನ ಸಂಬಂಧಿಕರು ಕೂಡ ಚಲಿಸುವ ಬುಲ್ಡೋಜ ರ್ ಮೇಲೆಯೇ ನಿಂತು ಡ್ಯಾನ್ಸ್ ಮಾಡಿದ್ದಾರೆ. ಇದನ್ನು ನೋಡಲೆಂದೆ ಬೀದಿಗಳಲ್ಲಿ ಜನರು ಜಮಾಯಿಸಿದ್ದರು.

Viral News: ಜಸ್ಟ್‌ 20 ನಿಮಿಷಕ್ಕೆ ಮುರಿದು ಬಿತ್ತು ಮದುವೆ! ಗಂಡನ ಮನೆ ಸೇರುತ್ತಿದ್ದಂತೆ ದಾಂಪತ್ಯ ಜೀವನ ನಿರಾಕರಿಸಿದ್ದೇಕೆ ನವ ವಧು?

ಈ ಇಡೀ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು ಅಧಿ ಕಾರಿಗಳ ಗಮನಕ್ಕೆ ಬಂದಿದೆ. ನಂತರ ಸ್ಥಳೀಯ ಪೊಲೀಸರು ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಮೆರವಣಿಗೆಯ ಸಮಯದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಅಧಿಕಾರಿಗಳು ವರನ ವಿರುದ್ಧ ದೂರು ದಾಖಲು ಮಾಡಿದ್ದಾರೆ.