ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಜಸ್ಟ್‌ 20 ನಿಮಿಷಕ್ಕೆ ಮುರಿದು ಬಿತ್ತು ಮದುವೆ! ಗಂಡನ ಮನೆ ಸೇರುತ್ತಿದ್ದಂತೆ ದಾಂಪತ್ಯ ಜೀವನ ನಿರಾಕರಿಸಿದ್ದೇಕೆ ನವ ವಧು?

ಇಲ್ಲೊಬ್ಬಳು ನವವಿವಾಹಿತೆ ಮದುವೆಯಾದ ದಿನವೇ ಪತಿಯೊಂದಿಗೆ ಜೀವನ ನಡೆಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ತನ್ನ ತವರು ಮನೆಗೆ ವಾಪಾಸಾದ ಘಟನೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದಿದೆ. ವಧುವಿನ ಒಪ್ಪಿಗೆಯಿಂದಲೇ ಈ ಮದುವೆ ಮಾಡಿಸಲಾಗಿದ್ದರೂ ಆಕೆ ಮಾತ್ರ ಗಂಡನ ಮನೆಗೆ ತಲುಪುತ್ತಿದ್ದಂತೆ ಉಲ್ಟಾ ಹೊಡೆದಿದ್ದಾಳೆ.ಮದುವೆಯಾದ ಕೇವಲ 20ನಿಮಿಷಕ್ಕೆ ಸಂಬಂಧ ಮುರಿದುಕೊಂಡಿರುವ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಮದುವೆಯಾದ ಜಸ್ಟ್‌ 20 ನಿಮಿಷಕ್ಕೆ ಸಂಬಂಧ ಕಡಿದುಕೊಂಡ ವಧು

ವಿಶಾಲ್ ಮಧೇಸಿಯಾ-ಪೂಜಾ -

Profile
Pushpa Kumari Dec 2, 2025 5:27 PM

ಲಖನೌ, ಡಿ. 2: ಇತ್ತೀಚಿನ ದಿನದಲ್ಲಿ ಸಣ್ಣ-ಪುಟ್ಟ ವಿಚಾರಕ್ಕೆಲ್ಲ ದಂಪತಿ ದೂರಾಗುವ ಪ್ರಮಾಣ ಹೆಚ್ಚಾಗುತ್ತಿದೆ. ಮದುವೆಯಾದ ಬಳಿಕ ದಂಪತಿ ನಡುವೆ ವೈಮನಸ್ಸು ಬಂದು ದೂರಾಗುವುದನ್ನು ನಾವು ಕೇಳಿದ್ದೇವೆ. ಆದರೆ ಇಲ್ಲೊಬ್ಬಳು ನವವಿವಾಹಿತೆ ಮದುವೆಯಾದ ದಿನವೇ ಪತಿಯೊಂದಿಗೆ ಜೀವನ ನಡೆಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ತನ್ನ ತವರು ಮನೆಗೆ ವಾಪಾಸಾದ ಘಟನೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿ (Uttar Pradesh’s Deoria district) ನಡೆದಿದೆ. ವಧುವಿನ ಒಪ್ಪಿಗೆಯಿಂದಲೇ ಈ ಮದುವೆ ಮಾಡಿಸಲಾಗಿದ್ದರೂ ಆಕೆ ಮಾತ್ರ ಗಂಡನ ಮನೆಗೆ ತಲುಪುತ್ತಿದ್ದಂತೆ ಉಲ್ಟಾ ಹೊಡೆದಿದ್ದಾಳೆ. ಮದುವೆಯಾಗಿ ಗಂಡನ ಮನೆ ತಲುಪಿ ಕೇವಲ 20ನಿಮಿಷಕ್ಕೆ ಮದುವೆ ಸಂಬಂಧ ಮುರಿದು ಬಿದ್ದಿದ್ದು, ಸದ್ಯ ಈ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral News) ಆಗುತ್ತಿದೆ.

ಭಾಲುವಾನಿ ಮೂಲದ ವಿಶಾಲ್ ಮಧೇಸಿಯಾ ಅವರಿಗೆ ಸಲೆಂಪುರದ ಪೂಜಾ ಜತೆ ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ವಿವಾಹ ನಿಶ್ಚಯವಾಗಿತ್ತು. ವರ ವಿಶಾಲ್ ತನ್ನ ತಂದೆಯ ಜನರಲ್ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೆಲ್ಲ ತಿಳಿದೇ ಪೂಜೆ ಮದುವೆ ಒಪ್ಪಿಕೊಂಡಿದ್ದಾಳೆ. ಹೀಗೆ ಆಕೆಯ ಸಮ್ಮತಿ ಮೇರೆಗೆ ಮದುವೆ ನೆರವೇರಿದೆ. ನವೆಂಬರ್ 25 ವಿವಾಹವಾಗಿದ್ದು, ವಧು ವರನ ಮನೆಗೆ ತಲುಪುತ್ತಿದ್ದಂತೆ ಕೆಲವು ಶಾಸ್ತ್ರ ಕೂಡ ಮಾಡಲಾಗಿದೆ. ಬಳಿಕ ಅವಳನ್ನು ವರನ ರೂಮ್‌ಗೆ ಕಳುಹಿಸಲಾಗಿದ್ದು ಬರೀ 20ನಿಮಿಷಕ್ಕೆ ಅವಳು ಕೋಣೆಯಿಂದ ಹೊರಬಂದು ತನ್ನ ಪತಿಯೊಂದಿಗೆ ವಾಸಿಸುವುದಿಲ್ಲ ಎಂದು ಹೇಳಿದ್ದಾಳೆ. ಇದನ್ನು ಕೇಳಿ ಅಲ್ಲಿದ್ದವರು ಶಾಕ್‌ ಆಗಿದ್ದಾರೆ.



ಮೊದಲಿಗೆ ವಧು ಹೇಳಿದ್ದನ್ನು ಕೇಳಿ ಅಲ್ಲಿದ್ದವರು ತಮಾಷೆ ಮಾಡುತ್ತಿದ್ದಾಳೆಂದು ಭಾವಿಸಿದ್ದರು. ಆದರೆ ಆಕೆ ಈ ಬಗ್ಗೆ ತನ್ನ ಸ್ಪಷ್ಟ ನಿರಾಕರಣೆ ವ್ಯಕ್ತ ಪಡಿಸಿದಂತೆ ವರನ ಕಡೆಯವರು ಏನಾಯಿತು? ಅವಳು ಇದ್ದಕ್ಕಿದ್ದಂತೆ ತನ್ನ ಮನಸ್ಸನ್ನು ಬದಲಾಯಿಸಿಕೊಂಡಿದ್ಯಾಕೆ? ಎಂದು ಪ್ರಶ್ನಿಸಿದ್ದಾರೆ. ಆದರೆ ವಧು ಪೂಜಾ ಈ ಬಗ್ಗೆ ಯಾವುದೇ ಕಾರಣ ನೀಡಿಲ್ಲ. ವರನ ಕುಟುಂಬವು ಮನವೊಲಿಸಲು ಪ್ರಯತ್ನಿಸಿದ್ದರು ಪೂಜಾ ಮಾತ್ರ ಇಲ್ಲಿ ವಾಸಿಸುವುದಿಲ್ಲ, ತವರು ಮನೆಗೆ ಹೋಗುವುದಾಗಿ ಪಟ್ಟು ಹಿಡಿದಳು.

ನಂತರ ವಿಶಾಲ್ ಅವರ ಕುಟುಂಬವು ಪೂಜಾ ಮನೆಯವರಿಗೆ ಈ ವಿಚಾರ ತಿಳಿಸಿದ್ದಾರೆ. ಅವರು ಫೋನ್‌ನಲ್ಲೇ ಆಕೆಗೆ ಬುದ್ಧಿ ಹೇಳಿ ಎಲ್ಲ ವಿಚಾರ ಸರಿಪಡಿಸಲು ನಿರ್ಧರಿಸಿದ್ದಾರೆ. ಆದರೆ ಆಕೆ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಇದಕ್ಕಾಗಿ ಎರಡು ಕುಟುಂಬದವರು ಜತೆ ಸೇರಿಕೊಂಡು ಪಂಚಾಯ್ತಿ ನಡೆಸಿದ್ದಾರೆ. ಆಗಲೂ ಆಕೆ ಪತಿಯೊಂದಿಗೆ ಜೀವನ ಸಾಗಿಸಲು ನಿರಾಕರಿಸಿದ್ದಾರೆ. ಪರಸ್ಪರ ಒಪ್ಪಿಗೆಯಿಂದ ಈ ಮದುವೆಯನ್ನು ಎರಡು ಕುಟುಂಬದವರು ಮುರಿದುಕೊಂಡು ಲಿಖಿತ ಒಪ್ಪಂದವನ್ನು ಸಿದ್ಧಪಡಿಸಿ ವಧುವನ್ನು ತವರು ಮನೆಗೆ ವಾಪಾಸು ಕಳುಹಿಸಲಾಗಿದೆ.

ಮದುವೆ ಆಗಲು 2 ವರ್ಷ ಕಾಯುವಂತೆ ಹೇಳಿದ ಮನೆಯವರು; 19 ವರ್ಷದ ಯುವಕ ಆತ್ಮಹತ್ಯೆ

ಮದುವೆಯ ಸಮಯದಲ್ಲಿ ವಿನಿಮಯ ಮಾಡಿಕೊಂಡ ಎಲ್ಲ ಉಡುಗೊರೆಗಳು ಮತ್ತು ಹಣವನ್ನು ಎರಡೂ ಕಡೆಯವರು ಹಿಂದಿರುಗಿಸುವಂತೆ ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಲಿಲ್ಲ ಎಂದು ತಿಳಿದು ಬಂದಿದೆ. ಮದುವೆಗೆ ಮುನ್ನವೇ ತನ್ನೊಂದಿಗೆ ಬಹಳ ಖುಷಿಯಿಂದ ಮಾತನಾಡಿದ್ದಾಳೆ, ಮದುವೆಗೂ ಮುನ್ನ ಯಾವುದೇ ಸಮಸ್ಯೆ ಬಗ್ಗೆ ಆಕೆ ಹೇಳಲಿಲ್ಲ ಎಂದು ವರನು ಈ ಬಗ್ಗೆ ಮಾಧ್ಯಮ ಒಂದಕ್ಕೆ ಹೇಳಿಕೆ ನೀಡಿದ್ದಾರೆ. ಸದ್ಯ ಈ ಸುದ್ದಿ ಸೋಶಿಯಲ್ ‌ಮಿಡಿಯಾದಲ್ಲಿ ವೈರಲ್ ಆಗಿ ನಾನಾ ರೀತಿತ ಪ್ರತಿಕ್ರಿಯೆ ಪಡೆದುಕೊಂಡಿದೆ. ಕೆಲವು ವರ್ಷಗಳ ಕಾಲ ಹೊಂದಾಣಿಕೆ ಮಾಡಿ ನಂತರ ಇಬ್ಬರು ವೈಮನಸ್ಸು ಮೂಡಿ ಜೀವನಗಳನ್ನು ಹಾಳು ಮಾಡುವುದಕ್ಕಿಂತ ಇದು ಉತ್ತಮ ನಿರ್ಧಾರ ಎಂದು ನೆಟ್ಟಿಗರೊಬ್ಬರು ಕಮೆಂಟ್ ಹಾಕಿದ್ದಾರೆ.