ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತಕ್ಕೂ ಜಾಂಬಿ ಡ್ರಗ್ ಎಂಟ್ರಿ? ಅರೆ ಪ್ರಜ್ಞಾವಸ್ಥೆಯಲ್ಲಿ ಕಂಡುಬಂದ ಯುವಕ

Viral Video: ಚಂಡೀಗಢದ ವ್ಯಕ್ತಿಯೊಬ್ಬ ವಸತಿ ಪ್ರದೇಶದಲ್ಲಿ ಸುಮಾರು ಎರಡು ಗಂಟೆಗಳ ಕಾಲ ನಿಂತೇ ಇದ್ದ. ಅರೇ ಪ್ರಜ್ಞಾವಸ್ಥೆಯಲ್ಲಿ ಯಾವುದೇ ಚಲನೆ ಇಲ್ಲದೆಯೇ ಆತ ನಿಂತಿದ್ದ. ಸದ್ಯ ಈ ಭಯಾನಕ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜತೆಗೆ ಭಾರತಕ್ಕೂ ಜಾಂಬಿ ಡ್ರಗ್ ಎಂಟ್ರಿ ಕೊಟ್ಟಿತಾ ಎನ್ನುವ ಆತಂಕ ಮೂಡಿಸಿದೆ.

ಅರೆ ಪ್ರಜ್ಞಾವಸ್ಥೆಯಲ್ಲಿ ಕಂಡು ಬಂದ ಯುವಕ

ಚಂಡೀಗಢ, ಮಾ. 26: ಚಂಡೀಗಢದಲ್ಲಿಆಘಾತಕಾರಿ ಘಟನೆಯೊಂದು ಕಂಡು ಬಂದಿದೆ. ಮಾದಕ ವ್ಯಸನಿಯಂತೆ ಕಾಣುತ್ತಿದ್ದ ಚಂಡೀಗಢದ ವ್ಯಕ್ತಿಯೊಬ್ಬ ವಸತಿ ಪ್ರದೇಶದಲ್ಲಿ ಸುಮಾರು ಎರಡು ಗಂಟೆಗಳ ಕಾಲ ನಿಂತೇ ಇದ್ದ. ಅರೆ ಪ್ರಜ್ಞಾವಸ್ಥೆಯಲ್ಲಿ ಯಾವುದೇ ಚಲನೆ ಇಲ್ಲದೆಯೇ ಆತ ನಿಂತುಕೊಂಡಿದ್ದ. ಸದ್ಯ ಈ ಭಯಾನಕ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದೆ. ಜತೆಗೆ ಯುವ ಜನತೆ ಎತ್ತ ಸಾಗುತ್ತಿದೆ ಎನ್ನುವ ಚರ್ಚೆ ಹುಟ್ಟು ಹಾಕಿದೆ.

ಬೆನ್ನಿನ ಮೇಲೆ ಡೆಲಿವರಿ ಬ್ಯಾಗ್ ಹಿಡಿದುಕೊಂಡು, ಒಂದು ದಿಕ್ಕಿಗೆ ನೋಡುತ್ತಿದ್ದ ಆತನಿಗೆ ಸುತ್ತಮುತ್ತಲಿನ ಬಗ್ಗೆ ಯಾವುದೇ ಅರಿವಿರಲಿಲ್ಲ ಎಂದು ವರದಿಯಾಗಿದೆ. ಈ ವಿಲಕ್ಷಣ ವರ್ತನೆಯ ದೃಶ್ಯ ನೋಡಿದ ಜನರು ಭಯಭೀತರಾಗಿದ್ದರು.

ವಿಡಿಯೊ ನೋಡಿ:



ಯುವಕನು ಸುಮಾರು 2-2.5 ಗಂಟೆಗಳ ಕಾಲ ಚಲನರಹಿತನಾಗಿ ನಿಂತಿದ್ದ. ಅವನ ಬಾಯಿಯಲ್ಲಿ ಬೀಡಿಯಂತಹ ವಸ್ತು ಕಂಡು ಬಂದಿದ್ದು ಕಣ್ಣುಗಳು ಸ್ಥಿರವಾಗಿದ್ದವು. ಸದ್ಯ ವಿದೇಶದಲ್ಲಿ ತಲ್ಲಣ ಮೂಡಿಸಿರುವ ಜಾಂಬಿ ಡ್ರಗ್ ಭಾರತಕ್ಕೂ ಕಾಲಿಟ್ಟಿದೆ ಎನ್ನುವ ಭಯ ಕಾಡಿದೆ. ಆತ ಡ್ರಗ್‌ ಸೇವಿಸಿ ಈ ಸ್ಥಿಗೆ ತಲುಪಿದ್ದಾನೆ ಎನ್ನುವ ಸಂದೇಹವೂ ಕಾಡುತ್ತಿದೆ. ಆತನ ಬೆನ್ನಿನ ಮೇಲೆ ಡೆಲಿವರಿ ಬ್ಯಾಗ್ ಇತ್ತು.

ಪ್ರಿಯಕರನಿಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ ಯುವತಿ

ಇದನ್ನು ಗಮನಿಸಿದ ಸ್ಥಳೀಯರು ಮೊದಲು ಭಯಗೊಂಡರೂ ನಂತರ ಆತನ ಸ್ಥಿತಿಯನ್ನು ಪೊಲೀಸರಿಗೆ ತಿಳಿಸಿದರು. ʼʼಚಂಡೀಗಢದಲ್ಲಿ ಆತಂಕ ಮನೆ ಮಾಡಿದೆ…ನಮ್ಮ ನಗರದಲ್ಲಿ ನಿಜವಾಗಿಯೂ ಏನಾಗುತ್ತಿದೆ?” ಎಂಬ ಶೀರ್ಷಿಕೆ ಯೊಂದಿಗೆ ವಿಡಿಯೊ ಹಂಚಿಕೊಳ್ಳಲಾಗಿದೆ. ನೆಟ್ರುಟಿಗರೊಬ್ಬರು ʼʼಯುವಕ ಮಾರಕ ಡ್ರಗ್‌ ಸೇವಿಸಿರುವಂತೆ ಕಾಣುತ್ತಿದೆʼʼ ಎಂದಿದ್ದಾರೆ. ಮತ್ತೊಬ್ಬರು ʼʼಅಮೆರಿಕವನ್ನು ಹಾಳು ಮಾಡಿದ ಈ ಜಾಂಬಿ ಡ್ರಗ್‌ ಭಾರತಕ್ಕೂ ಬಂದಿದೆʼʼ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಏನಿದು ‘ಜಾಂಬಿ ಡ್ರಗ್’?

ಮೂಲತಃ ಪ್ರಾಣಿಗಳಿಗೆ ಬಳಸುವ 'ಕ್ಸೈಲಜಿನ್'‌ ಎಂಬ ಟ್ರ್ಯಾಂಕ್ವಿಲೈಜರ್ ಅನ್ನು 'ಜಾಂಬಿ ಡ್ರಗ್' ಎಂದು ಹೇಳಲಾಗುತ್ತದೆ. ಪ್ರಾಣಿಗಳ ನೋವು ಶಮನಗೊಳಿಸಲು ತಯಾರಿಸಲಾದ ಈ ಔಷಧವು ಫೆಂಟನಿಲ್, ಹೆರಾಯಿನ್ ಮತ್ತು ಮಾರ್ಫಿನ್‌ನಂತಹ ಒಪಿಯಾಯ್ಡ್‌ಗಳೊಂದಿಗೆ ಬೆರೆಸಲ್ಪಟ್ಟಿರುತ್ತದೆ. ಇದನ್ನು ಸೇವಿಸಿದವರು ಯಾವುದೇ ಪ್ರಜ್ಞೆಯಿಲ್ಲದ ವರ್ತಿಸುವುದರಿಂದ ಇದಕ್ಕೆ ಈ ಹೆಸರು ಬಂದಿದೆ.