ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ ಭಾರಿ ಮಳೆಗೆ ಸಂಚಾರ ಅಸ್ತವ್ಯಸ್ತ: ಇದು ಗೋವಾ ಬೀಚ್ ಅಲ್ಲ!'ಮಹಾದೇವಪುರ ಬೀಚ್'ಎಂದು ನೆಟ್ಟಿಗರು ವ್ಯಂಗ್ಯ!

Viral News: ತೀವ್ರ ಬಿಸಿಲಿನ ತಾಪಮಾನದ ನಡುವೆ ನಿನ್ನೆ ಸಿಲಿಕಾನ್ ಸಿಟಿಯಲ್ಲಿ ಸುರಿದ ಭಾರೀ ಮಳೆಗೆ ಹಲವು ಭಾಗಗಳು ಜಲವೃತಗೊಂಡಿದೆ. ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದು ಪ್ರಯಾಣಿಕರು, ಉದ್ಯೋಗಿಗಳು ಸೇರಿದಂತೆ ತೀವ್ರ ಪರದಾಟ ನಡೆಸಿದ್ದಾರೆ. ಈ ಮಳೆಯ ವಾಸ್ತವ ಪರಿಸ್ಥಿತಿಯನ್ನು ತೋರಿಸುವ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

ಬೆಂಗಳೂರಿನಲ್ಲಿ ಭಾರಿ ಮಳೆಗೆ ಸಂಚಾರ ಅಸ್ತವ್ಯಸ್ತ

ಬೆಂಗಳೂರು,ಅ.1: ತೀವ್ರ ಬಿಸಿಲಿನ ತಾಪಮಾನದ ನಡುವೆ ನಿನ್ನೆ ಸಿಲಿಕಾನ್ ಸಿಟಿಯಲ್ಲಿ ಸುರಿದ ಭಾರೀ ಮಳೆಗೆ ಹಲವು ಭಾಗಗಳು ಜಲವೃತಗೊಂಡಿದೆ. ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದು ಪ್ರಯಾಣಿಕರು, ಉದ್ಯೋಗಿಗಳು ಸೇರಿದಂತೆ ತೀವ್ರ ಪರದಾಟ ನಡೆಸಿದ್ದಾರೆ. ಈ ಮಳೆಯು ವಾಸ್ತವ ಪರಿಸ್ಥಿತಿಯನ್ನು ತೋರಿಸುವ ವಿಡಿಯೋ ಭಾರೀ ವೈರಲ್ (Viral News) ಆಗುತ್ತಿದೆ. ನೀರು ತುಂಬಿದ ರಸ್ತೆಗಳು, ಕಷ್ಟಕರ ಪರಿಸ್ಥಿತಿಯಲ್ಲಿ ಚಲಿಸುತ್ತಿರುವ ವಾಹನಗಳ ವಿಡಿಯೋ ತುಣುಕುಗಳನ್ನು ಜನರು ಶೇರ್ ಮಾಡಿಕೊಂಡಿದ್ದಾರೆ.

ಸೆಪ್ಟೆಂಬರ್ 30 ರಂದು ಸುರಿದ ಭಾರಿ ಮಳೆಗೆ ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳು ತುಂಬಿ ಹೋಗಿವೆ‌. ಜಲಸಾಗರಗೊಂಡಿದ್ದ ಮಹಾದೇವಪುರ ರಸ್ತೆಗಳ ವೀಡಿಯೊ ಹಂಚಿಕೊಂಡ ಸವಾರರೊಬ್ಬರು ಈ ದೃಶ್ಯಕ್ಕೆ  "ಗೋವಾ ಬೀಚ್"ಗೆ ಹೋಲಿಸಿ ಇದು"ಮಹಾದೇವಪುರ ಬೀಚ್" ಎಂದು ವ್ಯಂಗ್ಯವಾಡಿದ್ದಾರೆ.

ವಿಡಿಯೋ ನೋಡಿ:



ಬಳಕೆದಾರರೊಬ್ಬರು ಮಾನ್ಯತಾ ಟೆಕ್ ಪಾರ್ಕ್ ಬಳಿಯ ವಿಡಿಯೋ ತುಣುಕನ್ನು ಶೇರ್ ಮಾಡಿದ್ದು ನೀರು ತುಂಬಿದ ರಸ್ತೆಗಳಲ್ಲಿ ವಾಹನಗಳು ನಿಧಾನವಾಗಿ ಚಲಿಸುತ್ತಿರುವುದು ಕಂಡುಬಂದಿದೆ. "ಮಾನ್ಯತಾ ಟೆಕ್ ಪಾರ್ಕ್ ಇಂದು ವಾಟರ್ ಪಾರ್ಕ್ ಆಗಿದೆ" ಎಂದು ಬರೆದಿದ್ದಾರೆ. ಅದೇ ಸಮಯದಲ್ಲಿ, ಮಳೆಯಲ್ಲೇ ನಿಂತು ಸಂಚಾರ ದಟ್ಟಣೆ ನಿಯಂತ್ರಿಸುತ್ತಿದ್ದ ಸಂಚಾರ ಪೋಲಿಸರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Viral Video: ಮರೆಯಾದ ಮಾನವೀಯತೆ; ನೇಪಾಳ ಪ್ರವಾಹದಲ್ಲಿ ಮೃತಪಟ್ಟ ಮಹಿಳೆಯ ಚಿನ್ನದ ಓಲೆ ಕದ್ದ ಕಿಡೀಗೆಡಿಗಳು!

​ಸಂಚಾರ ದಟ್ಟಣೆಯ ಭೀಕರತೆ ಎಷ್ಟಿತ್ತೆಂದರೆ, ಕೇವಲ 4.2 ಕಿಲೋಮೀಟರ್ ದೂರವನ್ನು ತಲುಪಲು ವಾಹನ ಸವಾರರಿಗೆ ಬರೋಬ್ಬರಿ 48 ನಿಮಿಷ ಬೇಕಾಗಿದೆ. ಶ್ರೀನಿವಾಗಿಲು, ಬಾಳಗೆರೆ ವೃತ್ತ-ಕಾಡುಬೀಸನಹಳ್ಳಿ, ವಡ್ಡರಪಾಳ್ಯ ಜಂಕ್ಷನ್ ರಸ್ತೆಗಳಲ್ಲಿ ಭಾರಿ ನೀರು ನಿಂತು ಸಂಚಾರ ಸ್ಥಗಿತಗೊಂಡಿತ್ತು. ಈ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದು ಬೆಂಗಳೂರಿನ ಸಂಚಾರ ದಟ್ಟಣೆಯೇ ಈಗಾಗಲೇ ಸುಸ್ತಾಗಿಸುವಂತಿದೆ. ಅದರಲ್ಲೂ ಮಳೆ ಬಂದಾಗ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.