ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Viral Video: 20 ಅಡಿ ಎತ್ತರದ ಫ್ಲೈಓವರ್ ನಡುವೆ ಸಿಲುಕಿದ ಕಾರ್‌! ಚಾಲಕ ಪವಾಡ ಸದೃಶ ಪಾರು

Viral News: ಅಮೆರಿಕದ ಅಟ್ಲಾಂಟಾದಲ್ಲಿ ಭೀಕರ ಅಪಘಾತವೊಂದು ನಡೆದಿದೆ‌. ಚಾಲಕನ ನಿಯಂತ್ರಣ ತಪ್ಪಿ ಕಾರು ಸುಮಾರು 20 ಅಡಿ ಎತ್ತರದ ಫ್ಲೈಓವರ್‌ನಲ್ಲಿ ಸಿಲುಕಿಕೊಂಡಿದ್ದು, ಚಾಲಕನ ಕಾಲುಗಳು ಗಾಳಿಯಲ್ಲಿ ನೇತಾಡುತ್ತಿರುವ ದೃಶ್ಯ ಕಂಡು ಬಂದಿದೆ. ಅದೃಷ್ಟವಶಾತ್ ಚಾಲಕ ಪವಾಡಸದೃಶವಾಗಿ ಪಾರಾಗಿದ್ದಾನೆ.

ಅಟ್ಲಾಂಟಾದಲ್ಲಿ ಫ್ಲೈಓವರ್ ನಡುವೆ ಸಿಲುಕಿದ ಕಾರ್‌

ವಾಷಿಂಗ್ಟನ್‌, ಸೆ. 11: ಇತ್ತೀಚೆಗೆ ರಸ್ತೆ ಅಪಘಾತಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಸಾರಿಗೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಕೆಲವು ಚಾಲಕರ ನಿರ್ಲಕ್ಷ್ಯವು ಪ್ರಾಣ ಹಾನಿಗೆ ಕಾರಣವಾಗುತ್ತಿದೆ‌‌. ಇದೀಗ ಅಮೆರಿಕದ ಅಟ್ಲಾಂಟಾದಲ್ಲಿ ಭೀಕರ ಅಪಘಾತವೊಂದು ನಡೆದಿದೆ‌. ಚಾಲಕನ ನಿಯಂತ್ರಣ ತಪ್ಪಿ ಕಾರ್‌ ಸುಮಾರು 20 ಅಡಿ ಎತ್ತರದಲ್ಲಿ ಪ್ರಪಾತಕ್ಕೆ ಬಿದ್ದಂತೆ ಸಿಲುಕಿಕೊಂಡಿದ್ದು ಚಾಲಕನ ಕಾಲುಗಳು ಗಾಳಿಯಲ್ಲಿ ನೇತಾಡುತ್ತಿರುವ ದೃಶ್ಯವೊಂದು ಕಂಡು (Viral News) ಬಂದಿದೆ. ಅದೃಷ್ಟವಶಾತ್ ಚಾಲಕ ಪವಾಡಸದೃಶವಾಗಿ ಪಾರಾಗಿದ್ದಾರೆ.

ಚಾಲಕನು ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ವೇಗವಾಗಿ ಚಲಿಸುತ್ತಿದ್ದ. ಇಳಿಜಾರಿನ ಬಳಿ ಕಾರ್‌ನ ನಿಯಂತ್ರಣ ಕಳೆದುಕೊಂಡಿದ್ದಾನೆ. ಕಾರ್‌ ತಕ್ಷಣವೇ ರಸ್ತೆಯ ಮಧ್ಯದಲ್ಲಿದ್ದ ಕಾಂಕ್ರೀಟ್ ಡಿವೈಡರ್‌ಗೆ ರಭಸವಾಗಿ ಡಿಕ್ಕಿ ಹೊಡೆದು, ಗಾಳಿಯಲ್ಲಿ ತೇಲಿ ಮೇಲ್ಸೇತುವೆಯ ಕೆಳಗಿನ ಕಾಂಕ್ರೀಟ್ ಕಂಬಗಳ ನಡುವೆ ಸಿಲುಕಿಕೊಂಡಿದೆ.

ವಿಡಿಯೊ ನೋಡಿ:



ಈ ಅಸಾಮಾನ್ಯ ದೃಶ್ಯವು ನೋಡುಗರನ್ನು ದಿಗ್ಭ್ರಮೆಗೊಳಿಸಿದೆ. ಕಾರ್‌ ಸುಮಾರು 20 ಅಡಿ ಎತ್ತರದಲ್ಲಿ ಪ್ರಪಾತಕ್ಕೆ ಬಿದ್ದಂತೆ ಸಿಲುಕಿಕೊಂಡಿದ್ದು, ಚಾಲಕನ ಕಾಲುಗಳು ಗಾಳಿಯಲ್ಲಿ ನೇತಾಡುತ್ತಿರುವುದು ಕಂಡು ಬಂತು. ರಸ್ತೆಯಲ್ಲಿ ಸಾಗುತ್ತಿದ್ದ ವಾಹನ ಸವಾರರು ದೃಶ್ಯವನ್ನು ಕಂಡು ಕ್ಷಣಕಾಲ ದಿಗ್ಭ್ರಮೆಗೊಂಡರು. ಆರಂಭದಲ್ಲಿ ಕೇವಲ ಟ್ರಾಫಿಕ್ ಜಾಮ್ ಆಗಿದೆ, ಏನೋ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಅಂದುಕೊಂಡಿದ್ದರು. ಆದರೆ ಚಾಲಕ ಸಿಲುಕೊಂಡಿರುವುದನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.

ಚಾಲಕನ ನಿರ್ಲಕ್ಷ್ಯ ತಂದ ಆಪತ್ತು; ಪೆಟ್ರೋಲ್‌ ಬಂಕ್‌ ಸಿಬ್ಬಂದಿಯನ್ನು ಎಳೆದೊಯ್ದ ಕಾರ್‌

​ಅಪಘಾತ ಸಂಭವಿಸಿದರೂ ಚಾಲಕ ಪ್ರಜ್ಞಾಪೂರ್ವಕವಾಗಿದ್ದು ಕೆಳಗೆ ನಿಂತಿದ್ದ ಜನರು ಆತನಿಗೆ ಯಾವುದೇ ಕಾರಣಕ್ಕೂ ಅಲುಗಾಡದಂತೆ ಧೈರ್ಯ ತುಂಬಿದರು. ​ಘಟನಾ ಸ್ಥಳಕ್ಕೆ ಬಂದ ಅಟ್ಲಾಂಟಾ ಅಗ್ನಿಶಾಮಕ ಮತ್ತು ರಕ್ಷಣಾ ಪಡೆ ಹಾಗೂ ಪೊಲೀಸರು ಸಾಹಸಪೂರ್ವಕವಾಗಿ ಕಾರ್ಯಾಚರಣೆ ಮಾಡಿದ್ದಾರೆ. ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದ್ದ ಕಾರನ್ನು ಮೊದಲು ಹಗ್ಗ ಮತ್ತು ಉಪಕರಣ ಗಳ ಮೂಲಕಚಾಲಕನನ್ನು ಸುರಕ್ಷಿತವಾಗಿ ಹೊರತೆಗೆದರು. ಅದೃಷ್ಟವಶಾತ್ ಚಾಲಕನಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಹಾಗೂ ಗಂಭೀರ ಗಾಯಗಳಾಗಿಲ್ಲ. ಆತನನ್ನು ತಕ್ಷಣವೇ ಗ್ರೇಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿದೆ