ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ; ಮೊಮ್ಮಗನಿಗಾಗಿ ಕೈಯಲ್ಲೇ ಡ್ರಿಪ್ಸ್ ಬಾಟಲ್ ಹಿಡಿದು ನಿಂತ ಅಜ್ಜಿ

Grandmother Forced to Uphold Drip Bottle: ವೃದ್ಧೆಯೊಬ್ಬರು 30 ನಿಮಿಷಗಳ ಕಾಲ ಡ್ರಿಪ್ ಬಾಟಲಿಯನ್ನು ಹಿಡಿದುಕೊಂಡು ನಿಂತ ಅಮಾನವೀಯ ಘಟನೆ ಮಧ್ಯಪ್ರದೇಶದ ಸತ್ನಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆ ಸಿಬ್ಬಂದಿ ಸ್ಟ್ಯಾಂಡ್ ನೀಡದ ಕಾರಣ 72 ವರ್ಷದ ವೃದ್ಧೆ ಡ್ರಿಪ್ಸ್ ಬಾಟಲಿಯನ್ನು ಹಿಡಿದುಕೊಂಡೇ ನಿಲ್ಲುವಂತಾಯ್ತು.

ಭೋಪಾಲ್: ಆಸ್ಪತ್ರೆ ಸಿಬ್ಬಂದಿ ಸ್ಟ್ಯಾಂಡ್ ನೀಡಲು ವಿಫಲವಾದ ಕಾರಣ ವೃದ್ಧೆಯೊಬ್ಬರು 30 ನಿಮಿಷಗಳ ಕಾಲ ಡ್ರಿಪ್ ಬಾಟಲಿಯನ್ನು ಹಿಡಿದುಕೊಂಡ ಅಮಾನವೀಯ ಘಟನೆ ಮಧ್ಯಪ್ರದೇಶದ ಸತ್ನಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ 72 ವರ್ಷದ ವೃದ್ಧೆ, ಗಾಯಗೊಂಡಿರುವ (Viral Video) ತಮ್ಮ ಮೊಮ್ಮಗನಿಗಾಗಿ ಸುಮಾರು ಅರ್ಧ ಗಂಟೆಗಳ ಕಾಲ ಡ್ರಿಪ್ ಬಾಟಲಿಯನ್ನು ನಿಂತುಕೊಂಡೇ ಹಿಡಿದುಕೊಂಡಿದ್ದಾರೆ.

ಶುಕ್ರವಾರ ಈ ಘಟನೆ ನಡೆದಿದ್ದು, ಸಿಬ್ಬಂದಿ ಡ್ರಿಪ್ ಸ್ಟ್ಯಾಂಡ್ ಒದಗಿಸದ ಕಾರಣ ಸ್ವತಃ ವೃದ್ಧೆ ಕೈಯಲ್ಲಿ ಹಿಡಿದುಕೊಳ್ಳುವಂತಾಯಿತು. ಆದರೆ, ಈ ಆರೋಪವನ್ನು ನಿರಾಕರಿಸಿದ ಆಸ್ಪತ್ರೆ ಅಧಿಕಾರಿಗಳು, ತಮ್ಮಲ್ಲಿ ಸ್ಟ್ಯಾಂಡ್‌ಗಳ ಕೊರತೆಯಿಲ್ಲ ಎಂದು ಹೇಳಿದ್ದಾರೆ. ರೋಗಿಯನ್ನು ಆಂಬ್ಯುಲೆನ್ಸ್‌ನಲ್ಲಿ ಕರೆತರಲಾಯಿತು. 5 ರಿಂದ 7 ನಿಮಿಷಗಳಲ್ಲಿ ಚಿಕಿತ್ಸೆ ನೀಡಲಾಯಿತು. ವೃದ್ಧೆ ಸ್ವತಃ ಡ್ರಿಪ್ ಅನ್ನು ತೆಗೆದುಕೊಂಡು ಕೈಯಲ್ಲಿ ಹಿಡಿದುಕೊಂಡರು. ರೋಗಿಗೆ ಸರಿಯಾಗಿ ಚಿಕಿತ್ಸೆ ನೀಡಲಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ಹೇಳಿದ್ದಾರೆ.

ವಿಡಿಯೊ ವೀಕ್ಷಿಸಿ:



ನಿಜವಾಗಿಯೂ ಆಗಿದ್ದೇನು?

ಮೈಹಾರ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ 35 ವರ್ಷದ ಅಶ್ವನಿ ಮಿಶ್ರಾ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಸ್ಥಿತಿ ಗಂಭೀರವಾಗಿದ್ದರೂ, ಡ್ರಿಪ್ಸ್ ಹಾಕಲು ಯಾವುದೇ ಸ್ಟ್ಯಾಂಡ್ ವ್ಯವಸ್ಥೆ ಮಾಡಿರಲಿಲ್ಲ ಎನ್ನಲಾಗಿದೆ. ಇದರಿಂದಾಗಿ ರೋಗಿಯ ಅಜ್ಜಿ (ವೃದ್ಧೆ) ಗೆ ಡ್ರಿಪ್ಸ್ ಬಾಟಲಿಯನ್ನು ಹಿಡಿದುಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ.

ಇನ್ನು ಆಸ್ಪತ್ರೆಯಲ್ಲಿ ಡ್ರಿಪ್ ಸ್ಟ್ಯಾಂಡ್‌ಗಳ ಕೊರತೆಯಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆದರೆ ಈ ಸಂಕಷ್ಟಕ್ಕೆ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ. ಬಾಟಲಿಯನ್ನು ಹಿಡಿದಿದ್ದ ವೃದ್ಧ ಮಹಿಳೆಯ ಕೈ ನಡುಗುತ್ತಿತ್ತು. ಆದರೂ ಅರ್ಧ ಗಂಟೆ ಕಾಲ ಹಿಡಿದುಕೊಂಡಿದ್ದಾರೆ. ಇದು ಪ್ರತ್ಯಕ್ಷದರ್ಶಿಗಳಿಗೆ ಬೇಸರ ತಂದಿದೆ.

ಇದನ್ನೂ ಓದಿ: Viral Video: ಮೇಕೆ ನುಂಗಿದ ದೈತ್ಯ ಹೆಬ್ಬಾವನ್ನು ಕೊಡಲಿಯಿಂದ ಹೊಡೆದು ಕೊಂದ ಕಿಡಿಗೇಡಿಗಳು; ಶಾಕಿಂಗ್‌ ವಿಡಿಯೊ ಇಲ್ಲಿದೆ

ರೋಗಿಯನ್ನು ಕರೆತಂದ ಆಂಬ್ಯುಲೆನ್ಸ್ ಕೂಡ ಆಸ್ಪತ್ರೆಯ ಗೇಟ್ ಬಳಿ ಕೆಟ್ಟು ನಿಂತಿದ್ದು, ಮತ್ತೆ ಚಾಲನೆ ಮಾಡಲು ಪಕ್ಕದಲ್ಲಿದ್ದವರು ಅದನ್ನು ತಳ್ಳಬೇಕಾಯಿತು ಎಂದು ವರದಿಯಾಗಿದೆ. ಅಲ್ಲದೆ, ಈ ಆಸ್ಪತ್ರೆಯು ಈಗಾಗಲೇ ಅನೇಕ ದೂರುಗಳನ್ನು ಹೊಂದಿದೆ. ಪ್ರತಿದಿನ ನೂರಾರು ರೋಗಿಗಳು ಇಲ್ಲಿ ದಾಖಲಾಗುತ್ತಿದ್ದಾರೆ. ಆದರೂ ಸ್ಟ್ರೆಚರ್‌ಗಳು, ಹಾಸಿಗೆಗಳು ಮತ್ತು ಮೂಲಭೂತ ಸೌಲಭ್ಯದ ಕೊರತೆ ಹೆಚ್ಚಿದೆ ಎಂದು ಹೇಳಲಾಗಿದೆ.