ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆಕ್ರಮ ಸಂಬಂಧದ ಬಗ್ಗೆ ಪ್ರಶ್ನಿಸಿದ ಪತ್ನಿಗೆ ಮನಬಂದಂತೆ ಥಳಿಸಿದ ಪತಿ: ವಿಡಿಯೊ ವೈರಲ್

Viral Video: ಪತಿ-ಪತ್ನಿ ನಡುವಿನ ಸಣ್ಣ ಪುಟ್ಟ ಜಗಳಗಳು ಬೀದಿಗೆ ಬರುವಂತ ಘಟನೆಗಳು ವರದಿಯಾಗುತ್ತಿವೆ. ವೈಯಕ್ತಿಕ ವಿಚಾರ, ಆಕ್ರಮ ಸಂಬಂಧ, ಹಣಕಾಸಿನ ಸಮಸ್ಯೆ ಹೀಗೆ ನಾನಾ ಕಾರಣಕ್ಕಾಗಿ ಜಗಳ ಉಂಟಾಗಿ ದಾಂಪತ್ಯ ಜೀವನ ಕೊನೆಗೊಂಡ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಪತಿಯ ಆಕ್ರಮ ಸಂಬಂಧವನ್ನು ಪ್ರಶ್ನಿಸಿದ ಕಾರಣಕ್ಕೆ ಪತ್ನಿಯ ಮೇಲೆ ಆಕೆಯ ಗಂಡನೇ ಮನ ಬಂದಂತೆ ಥಳಿಸಿದ್ದಾನೆ‌. ಈ ಹಲ್ಲೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ಇಂಟರ್‌ನೆಟ್ ಚಿತ್ರ

ಗಾಂಧಿನಗರ, ಜು. 28: ಇತ್ತೀಚೆಗೆ ದಾಂಪತ್ಯ ಜೀವನದಲ್ಲಿ ಪತಿ-ಪತ್ನಿಯ ಸಣ್ಣ-ಪುಟ್ಟ ಜಗಳ ಬೀದಿಗೆ ಬರುವಂತ ಘಟನೆ ವರದಿಯಾಗುತ್ತಿದೆ. ವೈಯಕ್ತಿಕ ವಿಚಾರ, ಆಕ್ರಮ ಸಂಬಂಧ, ಹಣಕಾಸಿನ ಸಮಸ್ಯೆ ಹೀಗೆ ನಾನಾ ಕಾರಣಕ್ಕಾಗಿ ಜಗಳ ಉಂಟಾಗಿ ದಾಂಪತ್ಯ ಜೀವನ ಕೊನೆಗೊಂಡ ಪ್ರಕರಣಗಳು ಇತ್ತೀಚೆಗೆ ವರದಿಯಾಗುತ್ತಲೇ ಇವೆ. ಇದೀಗ ಪತಿಯ ಆಕ್ರಮ ಸಂಬಂಧವನ್ನು ಪ್ರಶ್ನಿಸಿದ ಕಾರಣಕ್ಕೆ ಪತ್ನಿಯ ಮೇಲೆಯೇ ಆತ ಮನ ಬಂದಂತೆ ಥಳಿಸಿದ್ದಾನೆ‌. ಈ ಹಲ್ಲೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದ್ದು, ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ಪತಿಯ ಅಕ್ರಮ ಸಂಬಂಧವನ್ನು ಪ್ರಶ್ನಿಸಿದ್ದಾಳೆ ಎನ್ನುವ ಕಾರಣಕ್ಕೆ ಪತ್ನಿಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾನೆ‌. ಈ ಘಟನೆ ಗುಜರಾತ್‌ನ ರಾಜಕೋಟ್‌ನಲ್ಲಿ ನಡೆದಿದೆ. ವೈರಲ್ ಆದ ವಿಡಿಯೊದಲ್ಲಿ ಒಬ್ಬ ವ್ಯಕ್ತಿ ಮಹಿಳೆಯನ್ನು ಪದೇ ಪದೆ ಹೊಡೆದು ಒದೆಯುತ್ತಿರುವುದು ಕಂಡು ಬಂದಿದೆ‌. ಆದರೆ ಪೊಲೀಸರು ಇನ್ನೂ ಈ ಬಗ್ಗೆ ದೂರು ಸ್ವೀಕರಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ವಿಡಿಯೊ ನೋಡಿ:



ಸ್ಥಳೀಯ ವರದಿಗಳ ಪ್ರಕಾರ, ಮನೆಯಲ್ಲಿ ಮಗಳಿಗೆ ಪಾಠ ಮಾಡುತ್ತಿದ್ದ ಮಹಿಳೆಯೊಂದಿಗೆ ಈತ ಆಕ್ರಮ ಸಂಬಂಧ ಹೊಂದಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾಳೆ. ಪತಿ ಕಾರ್ಖಾನೆಯೊಂದರ ಮಾಲಕ ಎಂದು ತಿಳಿದು ಬಂದಿದೆ. ತನ್ನ ಗಂಡನಿಗೆ ಟ್ಯೂಷನ್ ಟೀಚರ್ ಜೊತೆ ಆಕ್ರಮ ಸಂಬಂಧ ಇದೆ ಎಂದು ವಿಷಯ ತಿಳಿದ ಪತ್ನಿ ತರಾಟೆಗೆ ತೆಗೆದುಕೊಂಡಿದ್ದಾಳೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಸಿಟ್ಟಿಗೆದ್ದ ಪತಿ ಸರಿಯಾಗಿ ಥಳಿಸಿದ್ದಾನೆ‌.

ಕ್ಷುಲ್ಲಕ ಕಾರಣಕ್ಕೆ ಲಿಫ್ಟ್‌ನಲ್ಲೇ ಹೊಡೆದಾಡಿದ ಅಪಾರ್ಟ್‌ಮೆಂಟ್ ಮಾಲಕರು

ಮಹಿಳೆಯೂ ಈ ಹೊಡೆತಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ, ಆ ವ್ಯಕ್ತಿ ಪದೇ ಪದೆ ಗುದ್ದುತ್ತಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೆ ವೈರಲ್ ಆಗಿರುವ ವಿಡಿಯೊದ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೂರು ಬಂದರೆ ನಾವು ತನಿಖೆ ಮಾಡಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.