ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಮತ್ತು ಇತರ ಗ್ಯಾಜೆಟ್‌ಗಳ ಬಳಕೆ ಪ್ರಮಾಣ ಹೆಚ್ಚಾಗುತ್ತಿದೆ. ಅದರಲ್ಲೂ ಮಕ್ಕಳ ಕೈಗೆ ಇಂತಹ ಗ್ಯಾಜೆಟ್‌ಗಳು ಅನೇಕ ಕೆಟ್ಟ ಹವ್ಯಾಸಗಳನ್ನು ಅಭ್ಯಾಸ ಮಾಡಿಸಿ ಬಿಡುತ್ತವೆ. ರೀಲ್ಸ್ ಮಾಡುವುದು, ಗೇಮ್ ಆಡುವುದು, ಬ್ಲೂ ಫಿಲ್ಮಂ ವೀಕ್ಷಣೆ, ಪೋರ್ನ್ ವಿಡಿಯೊ ನೋಡುವುದು, ಬೆಟ್ಟಿಂಗ್ ಆಡುವುದು ಹೀಗೆ ನಾನಾ ತರನಾಗಿ ಕೆಟ್ಟ ಹವ್ಯಾಸಗಳು ಮಕ್ಕಳನ್ನು ಆಕರ್ಷಿಸುತ್ತವೆ. ಅದೇ ರೀತಿ ವ್ಯಕ್ತಿಯೊಬ್ಬ ತನ್ನ 8ನೇ ವಯಸ್ಸಿನಿಂದಲೇ ಪೋರ್ನ್ ವಿಡಿಯೊ ದಾಸನಾಗಿದ್ದಾನೆ. ಆತನನ್ನು ಸರಿದಾರಿಗೆ ತರಲು ಹೋದ ಪತ್ನಿಯೂ ಕೂಡ ಅಶ್ಲೀಲ ವಿಡಿಯೊ ಚಟಕ್ಕೆ ಬಲಿಯಾದ ಘಟನೆ ಅಮೆರಿಕದಲ್ಲಿ ನಡೆದಿದೆ. ಪತಿಯ ಈ ಚಟವನ್ನು ಉಪಾಯವಾಗಿ ಸರಿಪಡಿಸಬೇಕು ಎಂದು ಹೋಗಿ ತಾನು ಅದಕ್ಕೆ ಅಡಿಕ್ಟ್ ಆಗಿ ಬಳಿಕ ಆ ಕೆಟ್ಟ ಹವ್ಯಾಸದಿಂದ ಹೊರಬಂದ ವಿಚಾರವನ್ನು ಮಹಿಳೆ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾಳೆ.
ಅಮೆರಿಕದ ಕೈಲ್ (Kyle) ಮತ್ತು ಮ್ಯಾಡಿಸನ್ ಲಾಫ್ಟಿನ್ (Madison Loftin) 2019ರಲ್ಲಿ ವಿವಾಹವಾಗಿದ್ದರು. ಮದುವೆಯಾದ ಕೇವಲ ಒಂದು ತಿಂಗಳಿಗೆ ಮ್ಯಾಡಿಸನ್ ಲಾಫ್ಟಿನ್‌ಗೆ ತನ್ನ ಪತಿ ಕೈಲ್‌ಗೆ ಕೆಟ್ಟ ಚಟವಿದೆ ಎಂಬುದು ತಿಳಿದು ಬಂತು. ಆತನ ಫೋನ್‌ನಲ್ಲಿ ಅನೇಕ ಪೋರ್ನ್ ವಿಡಿಯೊ ಕಂಡು ಶಾಕ್ ಆಗುತ್ತದೆ. ಇಂತಹ ವಿಡಿಯೊವನ್ನು ತನ್ನ ಪತಿ ಗುಟ್ಟಾಗಿ ವೀಕ್ಷಿಸುವುದನ್ನು ಕೂಡ ಆಕೆ ಪತ್ತೆ ಹಚ್ಚಿದಳು. ಬಳಿಕ ಆತನನ್ನು ಈ ಬಗ್ಗೆ ಕೇಳಿದ್ದಾಗ 8 ವರ್ಷದವನಿದ್ದಾಗಿನಿಂದಲೂ ಈ ಅಭ್ಯಾಸ ಇತ್ತು ಎಂಬುದು ತಿಳಿದುಬಂತು. ಮದುವೆಗೆ ಮೊದಲು ಅವರು ಡೇಟಿಂಗ್ ಮಾಡುತ್ತಿದ್ದಾಗ, ಕೈಲ್ ಮ್ಯಾಡಿಸನ್ ಬಾಲ್ಯದಲ್ಲಿ ಈ ಅಭ್ಯಾಸ ಇತ್ತು ಎಂದು ಮಾತ್ರ ಹೇಳಿದ್ದನಂತೆ. ಆದರೆ ಇದು ಚಟವಾಗಿ ಬಿಡಲಾಗದ ಹವ್ಯಾಸವಾಗಿತ್ತು ಎಂದು ಹೇಳಿಕೊಂಡಿರಲಿಲ್ಲವಂತೆ. ಇದೇ ಕಾರಣಕ್ಕೆ ತನ್ನ ಪತಿಯ ಕೆಟ್ಟ ಹವ್ಯಾಸದ ಬಗ್ಗೆ ಪತ್ನಿಗೆ ಅಸಮಾಧಾನ ಉಂಟಾಗಿದೆ.
ಉತಾಹ್‌ನ ಸಾಲ್ಟ್ ಲೇಕ್ ಸಿಟಿಯಲ್ಲಿ ಪ್ಲಂಬರ್ ಕೆಲಸ ಮಾಡುತ್ತಿದ್ದ ಕೈಲ್ ತನ್ನ ಪತ್ನಿಗೆ ಈ ಬಗ್ಗೆ ತಿಳಿಸಿ, ತಾನು ಮೊದಲು ಪೋರ್ನ್ ವಿಡಿಯೊ ನೋಡುವಾಗ ಎಂಟು ವರ್ಷ. ಇದನ್ನು ನೋಡುತ್ತಲೇ ವ್ಯಸನಿಯಾಗಿದ್ದಾಗಿ ಹೇಳಿದ್ದ. ಇದರಿಂದ ನಕಾರಾತ್ಮಕ ಭಾವನೆಗಳನ್ನು ನಿಭಾಯಿಸಲು ತನ್ನಿಂದ ಸಾಧ್ಯವಾಯಿತು. ಈ ಅಭ್ಯಾಸವು ತನ್ನ ಮೇಲೆ ಪರಿಣಾಮ ಬೀರಿತು. ಪ್ರೀತಿಸಿದ ಜನರಿಗೆ ನೋವುಂಟು ಮಾಡಬಾರದು ಎಂಬ ಕಾರಣಕ್ಕೆ ತಾನು ಈ ವಿಚಾರವನ್ನು ಗುಟ್ಟಾಗಿ ಇಟ್ಟುಕೊಂಡಿರುವುದಾಗಿ ಹೇಳಿಕೊಂಡಿದ್ದಾನೆ.
2019ರಲ್ಲಿ ಮದುವೆಯ ಒಂದು ತಿಂಗಳ ನಂತರ ಮ್ಯಾಡಿಸನ್ ಮತ್ತು ಕೈಲ್ ಲಾಂಗ್ ಡ್ರೈವ್‌ಗೆ ತೆರಳಿದ್ದರು. ಡ್ರೈವ್‌ನ ಸಮಯದಲ್ಲಿ, ಮ್ಯಾಡಿಸನ್ ಕೈಲ್‌ನ ಫೋನ್‌ನಲ್ಲಿ ಅವಳಿಗೆ ತಿಳಿಯಬಾರದಿದ್ದ ಏನೋ ಒಂದನ್ನು ಕಂಡುಕೊಂಡಳು. ಈ ಬಹಿರಂಗ ಪಡಿಸುವಿಕೆಯು ಆತನನ್ನು ಆಶ್ಚರ್ಯ ಪಡಿಸಿತ್ತು.
ತನ್ನ ಪತಿಯ ಈ ತರಹದ ನಡೆಗೆ ಮ್ಯಾಡಿಸನ್ ಕೋಪಗೊಂಡು ಪತಿಗೆ ಬುದ್ಧಿ ಕಲಿಸಲು ಮುಂದಾದಳು. ಹೀಗಾಗಿ ಇಂತಹ ಪೋರ್ನ್ ಸಿನಿಮಾ ತಾನು ನೋಡಿದರೆ ಆಗ ಪತಿಗೆ ಬೇಸರವಾಗುತ್ತದೆ. ಇದೆಲ್ಲ ತಪ್ಪು ಎಂಬ ಭಾವನೆ ಆತನಿಗೆ ಕಾಡುತ್ತದೆ ಎಂಬ ಕಾರಣಕ್ಕೆ ಪೋರ್ನ್ ವಿಡಿಯೊ ನೋಡಲು ಆಕೆ ಮುಂದಾದಳು. ಆದರೆ ಪ್ರತೀಕಾರ ತೀರಿಸಲು ಹೋದ ಪತ್ನಿಯೇ ಈ ಚಟಕ್ಕೆ ದಾಸಿಯಾದಳು. ಬಳಿಕ ಆಕೆಗೆ ಇದೊಂದು ಗಂಭೀರ ಸಮಸ್ಯೆ ಎಂಬ ಅರಿವಾಯಿತು. ಹೀಗಾಗಿ ಪತಿಯ ಮನಸ್ಥಿತಿ ಅರ್ಥ ಮಾಡಿಕೊಂಡಳು. ಬಳಿಕ ಇಬ್ಬರು ಈ ಚಟದಿಂದ ಮುಕ್ತಿ ಹೊಂದಲು ಬಯಸಿದರು.
ದಂಪತಿ ಈ ಸಮಸ್ಯೆಯನ್ನು ಒಟ್ಟಿಗೆ ಎದುರಿಸಲು ನಿರ್ಧರಿಸಿದರು. ಇದಕ್ಕಾಗಿ ಅವರು ಕೌನ್ಸಲಿಂಗ್ ಮೊರೆ ಹೋದರು. ಚರ್ಚ್‌ನಲ್ಲಿ ನಡೆಯುವ ವ್ಯಸನಮುಕ್ತ ಶಿಬಿರಕ್ಕೆ ಸೇರಿದ್ದಾರೆ. ಕೈಲ್ ಚಿಕಿತ್ಸೆಗೆ ಸ್ಪಂದಿಸುತ್ತ ಸರಿಯಾಗಿದ್ದಾರೆ. ಬಳಿಕ ಇಬ್ಬರು ಈ ಹವ್ಯಾಸದಿಂದ ಹೊರಬಂದು ಸುಗಮ ಜೀವನ ನಡೆಸುತ್ತಿದ್ದಾರೆ. ಅವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಈಗ ಅವರು ಇಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ಇತರ ದಂಪತಿಗೆ ಸಹಾಯ ಮಾಡಲು ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ.