Viral Video: ನ್ಯಾಯ ಕೊಡಿ ಎಂದ ಅತ್ಯಾಚಾರ ಸಂತ್ರಸ್ತೆ ಗೋಳಾಟ! ಪೊಲೀಸ್ ಉಪ ಮಹಾನಿರ್ದೇಶಕರ ಕಚೇರಿ ಬಳಿ ಹೈಡ್ರಾಮಾ, ಇಲ್ಲಿದೆ ವಿಡಿಯೊ
ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಸಂತ್ರಸ್ಥೆ, ಪೊಲೀಸ್ ಉಪ ಮಹಾನಿರ್ದೇಶಕರ ಕಚೇರಿ ಬಳಿ ಮನವಿ ಮಾಡಿಕೊಳ್ಳುವ ವೇಳೆ ದೊಡ್ಡ ಹೈಡ್ರಾಮಾ ನಡೆದಿದೆ. ಘಟನೆಯ ಸಂಪೂರ್ಣ ವಿಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಅತ್ಯಾಚಾರ ಪ್ರಕರಣದಲ್ಲಿ ನ್ಯಾಯ ದೊರಕಿಸಿ ಕೊಡಲು ಸಂತ್ರಸ್ಥೆಯ ಅಳಲು (ಸಂಗ್ರಹ ಚಿತ್ರ) -
ಲಖನೌ: ಸಾಮೂಹಿಕ ಅತ್ಯಾಚಾರದಿಂದ ನೊಂದ ಯುವತಿಯೊಬ್ಬಳು, ಸ್ಥಳದಲ್ಲಿದ್ದ ಪೊಲೀಸರನ್ನು ಧಿಕ್ಕರಿಸಿ, ಪೊಲೀಸ್ ಉಪ ಮಹಾನಿರ್ದೇಶಕ (ಡಿಐಜಿ) ಅವರನ್ನು ಭೇಟಿ ಮಾಡಿ, ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾಳೆ. ಉತ್ತರ ಪ್ರದೇಶದ (Uttar Pradesh) ಬುಲಂದರ್‌ಶರ್‌ನಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ವರದಿಗಳ ಪ್ರಕಾರ, ಸಂತ್ರಸ್ಥೆ ಯುವತಿಯನ್ನು ಆರಂಭದಲ್ಲಿ ಪೊಲೀಸ್ ಠಾಣೆಯಲ್ಲಿ ಪುರುಷ ಮತ್ತು ಮಹಿಳಾ ಅಧಿಕಾರಿಗಳು ಡಿಐಜಿ ಅವರನ್ನು ಭೇಟಿಯಾಗದಂತೆ ತಡೆದರು. ಆದರೆ, ಆಕೆ ಇದರಿಂದ ವಿಚಲಿತಳಾಗದೆ ಅವರನ್ನು ದಾಟಿ ಹೋಗಿ ನೇರವಾಗಿ ಹಿರಿಯ ಅಧಿಕಾರಿಯ ಬಳಿ ನ್ಯಾಯಕ್ಕಾಗಿ ಓಡಿದ್ದಾಳೆ. ಈ ವೇಳೆ ಪೊಲೀಸರು ಆಕೆಯನ್ನು ತಡೆಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಆಕೆ ಹಿರಿಯ ಪೊಲೀಸ್ ಅಧಿಕಾರಿಯ ವಾಹನವನ್ನು ಅಡ್ಡಗಟ್ಟಿದ ನಂತರ, ಅಧಿಕಾರಿ ಕಾರಿನಿಂದ ಇಳಿದು ಆಕೆಗೆ ತನ್ನ ಕಷ್ಟವನ್ನು ವಿವರಿಸಲು ಅವಕಾಶ ನೀಡಿದರು.
ಇದನ್ನೂ ಓದಿ: Viral News: "ಬೀದಿ ನಾಯಿ ತಂದು ಹಾಸಿಗೆ ಮೇಲಿಡುತ್ತಾಳೆ"; ಪತ್ನಿಯ ಕಾಟಕ್ಕೆ ಬೇಸತ್ತು ವಿಚ್ಛೇದನ ಕೋರಿದ ಪತಿ!
ಈ ವೇಳೆ ಪೊಲೀಸ್ ವರಿಷ್ಠಾಧಿಕಾರಿಯ ಬಳಿ ತನ್ನ ನೋವನ್ನು ಹೇಳಿಕೊಂಡಿದ್ದಾಳೆ. ಕೆಲವು ಸಮಯದ ಹಿಂದೆ ಆರು ಜನರು ತನ್ನ ಮೇಲೆ ಕ್ರೂರವಾಗಿ ಅತ್ಯಾಚಾರ ಎಸಗಿದ್ದರು ಎಂದು ಅಳಲು ತೋಡಿಕೊಂಡಿದ್ದಾಳೆ. ಅವರನ್ನು ಜೈಲಿಗೆ ಹಾಕಲಾಗಿದೆಯೇ? ಎಂದು ಡಿಐಜಿ ಪ್ರಶ್ನಿಸಿದರು. ಅವರಲ್ಲಿ ನಾಲ್ವರನ್ನು ಜೈಲಿಗೆ ಹಾಕಲಾಗಿದೆ, ಇಬ್ಬರು ತಲೆಮರೆಸಿಕೊಂಡಿದ್ದಾರೆ ಎಂದು ಅವಳು ಹೇಳಿದಳು.
ಇಲ್ಲಿದೆ ವಿಡಿಯೊ:
- Rape victim went to police station
— 🚨Indian Gems (@IndianGems_) November 14, 2025
- Complained that 2 accused boys are still absconding
- Police officer didn't listen to her
- She then went to DIG
- All police tried their best to prevent the victim from reaching the DIG
That's India for you pic.twitter.com/uMtCiXJXVE
ನಾನು ಪೊಲೀಸರ ಬಳಿ ಹಲವು ಬಾರಿ ಮನವಿ ಮಾಡಿದ್ದೇನೆ. ಆದರೆ, ನನ್ನ ಮನವಿಗಳಿಗೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ತೋರಿಲ್ಲ. ಯಾವುದೇ ನಿರ್ದಿಷ್ಟ ಕ್ರಮ ಕೈಗೊಂಡಿಲ್ಲ ಎಂದು ಯುವತಿಯು ಪೊಲೀಸ್ ಅಧಿಕಾರಿಗೆ ಹೇಳಿದ್ದಾಳೆ. ಈ ವೇಳೆ ಡಿಐಜಿ ಸರ್ಕಲ್ ಆಫೀಸರ್ ಅನ್ನು ಕರೆಸುವಂತೆ ತಾಕೀತು ಮಾಡಿದರು. ನಂತರ ಹಿರಿಯ ಪೊಲೀಸ್ ಅಧಿಕಾರಿಯು ಸಂಬಂಧಪಟ್ಟ ಅಧಿಕಾರಿಗಳಿಗೆ ಆಕೆಗೆ ಸಹಾಯ ಮಾಡುವಂತೆ ಮತ್ತು ಪ್ರಕರಣ ಸಂಬಂಧ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಇತರ ಎಲ್ಲ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಿ ಜೈಲಿಗೆ ಕಳುಹಿಸಲಾಗುವುದು ಎಂದು ಡಿಐಜಿ ಭರವಸೆ ನೀಡಿದರು. ಯುವತಿಗೆ ನ್ಯಾಯ ದೊರಕಿಸಿಕೊಡಲಾಗುವುದು ಎಂದು ಹೇಳಿದರು.
ಕೆಲವು ದಿನಗಳ ಹಿಂದೆ ಮಹಿಳೆಯ ಮೇಲೆ ಆರು ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿದ್ದರು ಎಂದು ಆರೋಪಿಸಲಾಗಿದೆ. ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಆದರೆ, ಪ್ರಕರಣದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಡಿಐಜಿ ಅವರೊಂದಿಗಿನ ಭೇಟಿಯ ಸಮಯದಲ್ಲಿ, ಉಳಿದ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಸಂತ್ರಸ್ತೆ ಮನವಿ ಮಾಡಿಕೊಂಡರು.
ತಲೆಮರೆಸಿಕೊಂಡಿರುವ ಎಲ್ಲಾ ಆರೋಪಿಗಳನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ. ಶೀಘ್ರದಲ್ಲೇ ಅವರನ್ನು ಬಂಧಿಸಿ, ಜೈಲಿಗೆ ಕಳುಹಿಸಲಾಗುವುದು ಎಂದು ಡಿಐಜಿ ಸಂತ್ರಸ್ಥ ಯುವತಿಗೆ ಭರವಸೆ ನೀಡಿದರು. ಇನ್ನು ಈ ಸಂಬಂಧ ಪರಾರಿಯಾದವರ ಹುಡುಕಾಟವನ್ನು ಅಧಿಕಾರಿಗಳು ತೀವ್ರಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.