ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೈಕ್ ಮೇಲೆ ಲ್ಯಾಪ್ ಟಾಪ್ ಆನ್ ಇಟ್ಟು ಚಲಾಯಿಸಿದ ಯುವಕ: ಕಾರ್ಪೊರೇಟ್ ಒತ್ತಡದ ಕುರಿತು ಜನ ಹೇಳೋದೇನು?

Viral News: ಹೈದರಾಬಾದ್‌ ನ ಕಾರಿಡಾರ್‌ನ ಹೈಟೆಕ್ಸ್ ಕಮಾನ್ ಸಿಗ್ನಲ್ ಬಳಿ ಯುವಕನೊಬ್ಬ ಬೈಕ್ ಮೇಲೆ ಲ್ಯಾಪ್ ಟಾಪ್ ಆನ್ ಇಟ್ಟು ಚಲಾಯಿಸಿದ್ದಾನೆ. ಕಾರಿನಲ್ಲಿದ್ದ ಪ್ರಯಾಣಿಕರೊಬ್ಬರು ಈ ದೃಶ್ಯ ರೆಕಾರ್ಡ್ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ...

ಬೈಕ್ ಮೇಲೆ ಲ್ಯಾಪ್ ಟಾಪ್ ಆನ್ ಇಟ್ಟು ಚಲಾಯಿಸಿದ ಯುವಕ

ಹೈದರಾಬಾದ್‌, ಜೂ.13: ಇತ್ತೀಚೆಗೆ ಕಾರ್ಪೊರೇಟ್ ಉದ್ಯೋಗದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಲವು ರೀತಿಯ ಚರ್ಚೆಗಳು ಆಗುತ್ತಿವೆ. ಕೆಲಸದ ಒತ್ತಡ, ಕೆಲಸದ ಅವಧಿ ಬಗ್ಗೆ ದೂರುಗಳು ಕೇಳಿ ಬರುತ್ತಲೇ ಇರುತ್ತದೆ. ಇದೀಗ ಹೈದರಾಬಾದ್‌ ನ ಕಾರಿಡಾರ್‌ನ ಹೈಟೆಕ್ಸ್ ಕಮಾನ್ ಸಿಗ್ನಲ್ ಬಳಿ ಯುವಕನೊಬ್ಬ ಬೈಕ್ ಮೇಲೆ ಲ್ಯಾಪ್ ಟಾಪ್ ಆನ್ ಇಟ್ಟು ಚಲಾಯಿಸಿದ್ದಾನೆ. ಕಾರಿನಲ್ಲಿದ್ದ ಪ್ರಯಾಣಿಕರೊಬ್ಬರು ಈ ದೃಶ್ಯ ರೆಕಾರ್ಡ್ ಮಾಡಿದ್ದು ಸೋಷಿಯಲ್ ಮೀಡಿಯಾ ದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.

ಯುವಕನೊಬ್ಬ ಚಲಿಸುವ ಮೋಟಾರ್ ಬೈಕ್ ನ ಫ್ಯುಯೆಲ್ ಟ್ಯಾಂಕ್ ಮೇಲೆ ಲ್ಯಾಪ್‌ಟಾಪ್ ಆನ್ ಮಾಡಿಟ್ಟುಕೊಂಡು ಬೈಕ್ ಚಲಾಯಿಸಿದ್ದಾನೆ. ಸದ್ಯ ಈ ದೃಶ್ಯವು ಕೆಲಸ, ಜೀವನ ಸಮ ತೋಲನ ಹಾಗೂ ರಸ್ತೆ ಸುರಕ್ಷತೆಯ ಬಗ್ಗೆ ಚರ್ಚೆಗೆ ಕಾರಣ ವಾಗಿದೆ. ಈ ವಿಡಿಯೊ ಲ್ಯಾಪ್‌ಟಾಪ್ ಪರದೆ ಯನ್ನು ಆನ್ ಇಟ್ಟುಕೊಂಡು ಸವಾರ ಸಂಚಾರವನ್ನು ನಿಯಂತ್ರಿಸುತ್ತಿರುವುದನ್ನು ತೋರಿಸುತ್ತದೆ.

ವಿಡಿಯೋ ನೋಡಿ:



ವೈರಲ್ ಆದ ದೃಶದಲ್ಲಿ ಯುವಕನು ಮಾಧಾಪುರ ಐಟಿ ಕಾರಿಡಾರ್‌ನಲ್ಲಿರುವ ಹೈಟೆಕ್ಸ್ ಕಮಾನ್ ಲ್ಯಾಂಡ್‌ಮಾರ್ಕ್ ಬಳಿ ಹಾದುಹೋಗುತ್ತಿದ್ದನು. ಈ ಸಂದರ್ಭದಲ್ಲಿ ಲ್ಯಾಪ್‌ಟಾಪ್ ಪರದೆ ಆನ್ ಇಟ್ಟು ಅದನ್ನೊಮ್ಮೆ ವೀಕ್ಷಿಸುವುದು ಹಾಗೂ ಮತ್ತೆ ಬೈಕ್ ಮೇಲೆ ಕೇಂದ್ರಿಕರಿಸುವ ದೃಶ್ಯ ಕಂಡು ಬಂದಿದೆ. ಈ ವಿಡಿಯೋ ಸದ್ಯ ಇಂಟರ್ನೆಟ್‌ನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ನೆಟ್ಟಿಗರು ಇದನ್ನು "ವರ್ಕ್ ಫ್ರಮ್ ಬೈಕ್" ಎಂದು ಟೀಕೆ ಮಾಡುತ್ತಿದ್ದಾರೆ.

Viral Video: ಬೆಂಗಳೂರಿನಲ್ಲಿ ಮಧ್ಯರಾತ್ರಿ ಆಟೋದಲ್ಲಿ ಸಂಚರಿಸಿದ ಮಹಿಳೆ ವಿಡಿಯೋದಲ್ಲಿ ಹೇಳಿದ್ದೇನು?

ಇದು ಇಂದಿನ ಕಾರ್ಪೊರೇಟ್ ವಲಯದ ಕರಾಳ ಮುಖ ಎಂದು ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ. ತಮ್ಮ ಜೀವಗಳನ್ನು ಅಪಾಯಕ್ಕೆ ಸಿಲುಕಿಸುವ ಆಧುನಿಕ ಕಾರ್ಪೊರೇಟ್ ಉದ್ಯೋಗ ಎಂದು ಕೆಲವರು ಕಿಡಿಕಾರಿದ್ದಾರೆ. ಬಳಕೆದಾರರೊಬ್ಬರು ಕೆಲಸದ ಗುರಿ ತಲುಪಲು ಐಟಿ ಕಂಪನಿ ಯಲ್ಲಿ ಹೀಗೆ ಸಾಹಸ ಮಾಡುತ್ತಿರಬೇಕು ಎಂದು ಬರೆದುಕೊಂಡಿದ್ದಾರೆ. ಬೈಕ್ ಸವಾರ ಚಾಲನೆ ಮಾಡುವಾಗ ಲ್ಯಾಪ್‌ಟಾಪ್ ಬಳಸುತ್ತಿರುವುದು ಕಂಡುಬಂದ ಮೊದಲ ನಿದರ್ಶನ ಇದಲ್ಲ. ಕಳೆದ ಏಪ್ರಿಲ್‌ನಲ್ಲಿ ಯುವಕನೊಬ್ಬ ಬೈಕ್ ಮೇಲೆ ಕೆಲಸ ಮಾಡುತ್ತಾ ಸಾಗುವ ವಿಡಿಯೋವೊಂದು ವೈರಲ್ ಆಗಿತ್ತು. ಮತ್ತೊಂದು ಘಟನೆಯಲ್ಲಿ, ಬೈಕ್ ಹಿಂಬದಿ ಕುಳಿತ ಯುವತಿ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಾ ಸಾಗುತ್ತಿದ್ದ ದೃಶ್ಯ ಕಂಡುಬಂದಿತ್ತು