ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬ್ಯಾಂಕಾಕ್‌ನಲ್ಲಿ ಲಡ್ಡುಗಳ ಬದಲಿಗೆ ಗಣೇಶನಿಗೆ ಬಬಲ್ ಟೀ ಅರ್ಪಿಸಿದ ಭಕ್ತರು: ವಿಡಿಯೊ ನೋಡಿ

Viral News: ಥೈಲ್ಯಾಂಡ್ ಬ್ಯಾಂಕಾಕ್‌ನಲ್ಲಿರುವ ಗಣಪತಿ ದೇವಾಲಯವೊಂದರಲ್ಲಿ ಚೌತಿಯನ್ನು ವಿಶಿಷ್ಟ ರೀತಿ ಆಚರಿಸಲಾಗಿದೆ. ಇಲ್ಲಿನ ಭಕ್ತರು ಸಾಂಪ್ರದಾಯಿಕ ಲಡ್ಡುಗಳ ಬದಲಿಗೆ ಗಣೇಶನಿಗೆ ಬಬಲ್ ಟೀ ಅರ್ಪಿಸಿದ್ದಾರೆ. ಭಕ್ತರು ಗಣಪನಿಗೆ ಅರ್ಪಿಸಲು ಸ್ವತಃ ಬಬಲ್ ಟೀಯನ್ನು ತೆಗೆದುಕೊಂಡು ದೇವಾಲಯಕ್ಕೆ ಆಗಮಿಸಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಬ್ಯಾಂಕಾಕ್‌ನಲ್ಲಿ ಲಡ್ಡುಗಳ ಬದಲಿಗೆ ಗಣೇಶನಿಗೆ 'ಬಬಲ್ ಟೀ' ಅರ್ಪಿಸುತ್ತಿರುವ ಭಕ್ತರು

ಬ್ಯಾಂಕಾಕ್, ಸೆ. 16: ಗಣಪತಿಗೆ ಅತೀ ಇಷ್ಟವಾದ ಲಡ್ಡು, ಮೋದಕದಂತಹ ಸಿಹಿತಿಂಡಿ ನೈವೇದ್ಯವಾಗಿ ಆರ್ಪಿಸುವ ಪದ್ಧತಿ ನಮ್ಮಲಿದೆ. ಆದರೆ ಥೈಲ್ಯಾಂಡ್ ಬ್ಯಾಂಕಾಕ್‌ನಲ್ಲಿರುವ ಗಣಪತಿ ದೇವಾಲಯವೊಂದರಲ್ಲಿ ವಿಶಿಷ್ಟ ರೀತಿಯಲ್ಲಿ ಚೌತಿ ಆಚರಿಸಲಾಗಿದೆ. ಇಲ್ಲಿನ ಭಕ್ತರು ಸಾಂಪ್ರದಾಯಿಕ ಲಡ್ಡುಗಳ ಬದಲಿಗೆ ಗಣೇಶನಿಗೆ ಬಬಲ್ ಟೀ ಅರ್ಪಿಸಿದ್ದಾರೆ. ಭಕ್ತರು ಗಣಪನಿಗೆ ಅರ್ಪಿಸಲು ಸ್ವತಃ ಬಬಲ್ ಟೀಯನ್ನು ತೆಗೆದುಕೊಂಡು ದೇವಾಲಯಕ್ಕೆ ಆಗಮಿಸುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದೆ.

ಥೈಲ್ಯಾಂಡ್ ರಾಜಧಾನಿಯ ಜನಪ್ರಿಯ ಶಾಪಿಂಗ್ ಕೇಂದ್ರವಾದ ಯೂನಿಯನ್ ಮಾಲ್ ಹತ್ತಿರದ ದೇವಾಲಯದಲ್ಲಿ ಈ ದೃಶ್ಯ ಕಂಡು ಬಂದಿದೆ. ಭಕ್ತರು ವಿಶಿಷ್ಟ ರೀತಿಯಲ್ಲಿ ನೈವೇದ್ಯ ಅರ್ಪಿಸುತ್ತಿರುವ ವಿಡಿಯೊ ವೈರಲ್ ಆಗುತ್ತಿದ್ದಂತೆ ಭಾರತೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ‌

ವಿಡಿಯೊ ನೋಡಿ:



ಸ್ಥಳೀಯ ಇನ್‌ಸ್ಟಾಗ್ರಾಮ್ ಬಳಕೆದಾರರಾದ ಪಿಯಾ ಪಿಂಗ್ ಈ ವಿಡಿಯೊ ಹಂಚಿಕೊಂಡಿದ್ದಾರೆ. ಭಕ್ತರು ಗಣೇಶನ ವಿಗ್ರಹದ ಮುಂದೆ ಬಬಲ್ ಟೀ ಕಪ್‌ಗಳನ್ನು ಸಾಲಾಗಿ ಇಟ್ಟು ಪೂಜಿಸುತ್ತಿರುವುದು ಕಂಡುಬಂದಿದೆ. ಸಾಂಪ್ರದಾಯಿಕ ಗಣೇಶನ ಪೂಜಾ ವಿಧಾನಗಳ ಪರಿಚಯವಿರುವ ಭಾರತೀಯ ಭಕ್ತರಿಗೆ ಈ ದೃಶ್ಯ ಆಶ್ಚರ್ಯ ಉಂಟು ಮಾಡಿದೆ. ಆದರೆ ಬ್ಯಾಂಕಾಕ್‌ನ ಭಕ್ತರು ಈ ಪದ್ಧತಿಯನ್ನು ರೂಢಿಸಿಕೊಂಡಿದ್ದಾರೆ ಎಂದು ಪಿಯಾ ವಿವರಿಸಿದ್ದಾರೆ.

ಪಂಡಾಲ್‌ಗೆ ತರುತ್ತಿದ್ದಾಗ ಕೆಳಗೆ ಬಿದ್ದ ಗಣೇಶನ ಮೂರ್ತಿ

ವಿಡಿಯೊದಲ್ಲಿ ಅನೇಕ ಭಕ್ತರು ದೇವಾಲಯದಲ್ಲಿ ಬಬಲ್ ಟೀಯನ್ನು ಅರ್ಪಿಸುತ್ತಿರುವುದು ಕಂಡುಬಂದಿದೆ‌. ​ಯೂನಿಯನ್ ಮಾಲ್‌ನ ಯಾವ ಯಾವ ಮಹಡಿಯಲ್ಲಿ ಯಾವ ಬ್ರ್ಯಾಂಡ್‌ನ ಬಬಲ್ ಟೀ ಸಿಗುತ್ತದೆ ಎಂಬುದನ್ನು ತಿಳಿಸು ಫಲಕವನ್ನು ಸಹ ದೇವಾಲಯದ ಬಳಿ ಇಡಲಾಗಿದೆ. ಗಣೇಶನಲ್ಲಿ ಬೇಡಿಕೊಂಡ ಇಷ್ಟಾರ್ಥ ಈಡೇರಿದ ಬಳಿಕ ಭಕ್ತರು ಹೆಚ್ಚಿನ ಪ್ರಮಾಣದ ಬಬಲ್ ಟೀಯೊಂದಿಗೆ ದೇವಾಲಯಕ್ಕೆ ಮರಳುತ್ತಾರೆ. 3, 6, 12 ಕಪ್‌ಗಳಿಂದ ಹಿಡಿದು 200 ಕಪ್‌ಗಳವರೆಗೆ ನೈವೇದ್ಯ ನೀಡುವ ಪದ್ಧತಿ ಇಲ್ಲಿದೆ‌.

ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು, ʼʼ​ಭಕ್ತಿ ಎನ್ನುವುದು ಕೇವಲ ನಿರ್ದಿಷ್ಟ ಆಹಾರಕ್ಕೆ ಸೀಮಿತವಾಗಿರದೆ, ಶುದ್ಧ ಮನಸ್ಸಿನಿಂದ ದೇವರಿಗೆ ಅರ್ಪಿಸುವ ಸಂಸ್ಕೃತಿಯ ಭಾಗʼʼ ಎಂದಿದ್ದಾರೆ.