ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಸ್ಸಾಂ ರೈಲು ನಿಲ್ದಾಣದಲ್ಲಿ ಖಾಸಗಿ ಅಂಗ ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ ಕಾಮುಕ: ಅಸಹ್ಯ ಕೃತ್ಯ ಕ್ಯಾಮೆರಾದಲ್ಲಿ ಸೆರೆ

Viral Video: ಅಸ್ಸಾಂನ ಗುವಾಹಟಿ ಕಾಮಾಖ್ಯ ರೈಲ್ವೆ ನಿಲ್ದಾಣದಲ್ಲಿ ಯುವತಿಯೊಬ್ಬಳಿಗೆ ಕಾಮುಕ ವ್ಯಕ್ತಿಯೊಬ್ಬ ಅಸಭ್ಯ ಸನ್ನೆ ಮಾಡಿದ್ದಾನೆ. ಆತನ ನಿರಂತರ ವರ್ತನೆಯಿಂದಾಗಿ ಬೇಸತ್ತ ಯುವತಿ  ಆತನ ದೃಶ್ಯ ಚಿತ್ರೀಕರಿಸಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ. ಈ ಘಟನೆಯ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೋಷಿಯಲ್ ಮೀಡಿಯಾ ಬಳಕೆದಾರರು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಅಸ್ಸಾಂನ ರೈಲ್ವೆ ನಿಲ್ದಾಣದಲ್ಲಿ ಅಸಭ್ಯವಾಗಿ ವರ್ತಿಸಿದ ಕಾಮುಕ

ದಿಸ್‌ಪುರ, ಸೆ. 27: ಇತ್ತೀಚೆಗೆ ಸಾರ್ವಜನಿಕ ಸ್ಥಳದಲ್ಲೂ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವ ಅನೇಕ ಘಟನೆಗಳು ವರದಿಯಾಗುತ್ತಿವೆ.‌ ಇದಕ್ಕೆ ಉದಾಹರಣೆ ಎನ್ನುವಂತೆ ಅಸ್ಸಾಂನ ಗುವಾಹಟಿ ಕಾಮಾಖ್ಯ ರೈಲ್ವೆ ನಿಲ್ದಾಣದಲ್ಲಿ ಯುವತಿಯೊಬ್ಬಳಿಗೆ ಕಾಮುಕ ವ್ಯಕ್ತಿಯೊಬ್ಬ ಅಸಭ್ಯ ಸನ್ನೆ ಮಾಡಿದ್ದಾನೆ. ಈ ಘಟನೆಯ ಬಗ್ಗೆ ಕ್ರಮ ಕೈಗೊಳ್ಳುವಂತೆ (Viral News) ಸೋಷಿಯಲ್ ಮೀಡಿಯಾ ಬಳಕೆದಾರರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಗುಣ್‌ಗುಣ್ ದತ್‌ ಎಂಬ ಯುವತಿ ಸಂಬಂಧಿಕರನ್ನು ಬಿಡಲೆಂದು ರೈಲು ನಿಲ್ದಾಣಕ್ಕೆ ಬಂದಿದ್ದಾಗ ವ್ಯಕ್ತಿಯೊಬ್ಬ ನಿರಂತರವಾಗಿ ನೋಡುತ್ತಾ ನಿಂತಿದ್ದ. ಅಷ್ಟೇ ಅಲ್ಲದೆ ಯುವತಿಯನ್ನು ನೋಡಿ ಅಸಭ್ಯ ಸನ್ನೆ ಮಾಡಿದ್ದಾನೆ. ಬೂದು ಬಣ್ಣದ ಪೋಲೋ ಶರ್ಟ್, ಕಂದು ಬಣ್ಣದ ಶಾರ್ಟ್ಸ್ ಧರಿಸಿದ್ದ ಆ ವ್ಯಕ್ತಿ, ಫೋನ್‌ನಲ್ಲಿ ಮಾತನಾಡುತ್ತಲೇ ಎಲ್ಲರೆದುರು ತನ್ನ ಖಾಸಗಿ ಅಂಗ ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾನೆ.

ವಿಡಿಯೊ ನೋಡಿ:



ಆತನ ನಿರಂತರ ವರ್ತನೆಯಿಂದಾಗಿ ಬೇಸರಗೊಂಡ ಯುವತಿ ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲು ಆರಂಭಿಸಿದರು. ಇದರ ಅರಿವಾಗುತ್ತಲೇ ಆತ ಅಲ್ಲಿಂದ ದೂರ ಸರಿದಿದ್ದಾನೆ‌. ಆದರೆ ಆತನ ಕಿರುಕುಳ ಅಷ್ಟಕ್ಕೆ ಮುಗಿಯಲಿಲ್ಲ. ತನ್ನ ಬಳಿ ಬಂದು ದಿಟ್ಟಿಸಿ ನೋಡುತ್ತಿದ್ದ ಎಂದು ದತ್‌ ದೂರಿದ್ದಾರೆ.

ರಾಜಸ್ಥಾನ ಎಕ್ಸ್‌ಪ್ರೆಸ್‌ವೇಯಲ್ಲೇ ಪಾರ್ಟಿ ಮಾಡಿದ ಕುಟುಂಬ

ಆಕೆ ರೈಲಿನ ಕಿಟಕಿಯಿಂದಲೂ ಆತನ ವರ್ತನೆಯನ್ನು ವಿಡಿಯೋ ಮಾಡುವುದನ್ನು ಮುಂದುವರಿಸಿದಾಗ ಆತ ಮತ್ತೆ ಅಲ್ಲಿಂದ ಹೊರನಡೆದಿದ್ದಾನೆ. ವೈರಲ್‌ ದೃಶ್ಯದಲ್ಲಿ ಆ ವ್ಯಕ್ತಿಯು ಮಹಿಳೆಯರನ್ನು ನೋಡುತ್ತಿರುವುದು ಮತ್ತು ಅನುಚಿತ ಸನ್ನೆಗಳನ್ನು ಮಾಡುತ್ತಿರುವುದು ಕಂಡುಬಂದಿದೆ. ಈ ಘಟನೆಯು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಈ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ನಂತರ, ನೆಟ್ಟಿಗರು ಮಹಿಳೆಯ ಧೈರ್ಯವನ್ನು ಮೆಚ್ಚಿದ್ದಾರೆ. ವ್ಯಕ್ತಿಯನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಿ ಆತನನ್ನು ಸುಮ್ಮನೆ ಬಿಡಬೇಡಿ ಎಂದು ಅಸ್ಸಾಂ ಪೊಲೀಸರನ್ನು ಟ್ಯಾಗ್ ಮಾಡಿ ಆಗ್ರಹಿಸಿದ್ದಾರೆ.