#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral News: ಸಂಜೆ 6 ಗಂಟೆಯಾಗುತ್ತಿದ್ದಂತೆ ಈ ಹಳ್ಳಿಯಲ್ಲಿ ಫೋನ್‌ ಮತ್ತು ಟಿವಿ ಬಂದ್!

ಇತ್ತೀಚೆಗೆ ಎಲ್ಲರೂ ಮೊಬೈಲ್‌ ಮತ್ತು ಟಿವಿಗೆ ದಾಸರಾಗಿದ್ದಾರೆ. ಹೊರಗಿನ ಪ್ರಪಂಚ ಮತ್ತು ಸಂಬಂಧಗಳ ಮೌಲ್ಯವನ್ನು ಮರೆತಿದ್ದಾರೆ. ಹಲವರಿಗೆ ಮೊಬೈಲ್‌ ಮತ್ತು ಟಿವಿ ಇದ್ದರೆ ಸಾಕು ಬೇರೆನೂ ಬೇಡ. ಆದರೆ ಮಹಾರಾಷ್ಟ್ರದ ಹಳ್ಳಿಯೊಂದರ ದೇವಸ್ಥಾನದಲ್ಲಿ ಸಂಜೆ 7 ಗಂಟೆಗೆ ಸೈರನ್ ಬಾರಿಸುತ್ತಿದ್ದಂತೆ ಗ್ರಾಮಸ್ಥರು ಒಂದೂವರೆ ಗಂಟೆಗಳ ಕಾಲ ತಮ್ಮ ಮೊಬೈಲ್‌ ಸ್ವಿಚ್‌ ಆಫ್ ಮಾಡಿ ಮತ್ತು ಟಿವಿಗಳನ್ನು ಬಂದ್‌ ಮಾಡುತ್ತಾರೆ. ಈ ಸುದ್ದಿ ಇದೀಗ ಸಾಕಷ್ಟು ವೈರಲ್‌ ಆಗಿದೆ.

ಸೈರನ್‌ ಬಾರಿಸುತ್ತಿದ್ದಂತೆ ಈ ಹಳ್ಳಿಯಲ್ಲಿ ಫೋನ್‌ ಮತ್ತು ಟಿವಿ ಬಂದ್!

Viral News

Profile Deekshith Nair Feb 10, 2025 11:21 AM

ಮುಂಬೈ: ಇತ್ತೀಚೆಗೆ ಎಲ್ಲರೂ ಮೊಬೈಲ್‌(Mobile) ಮತ್ತು ಟಿವಿಗೆ(Television) ದಾಸರಾಗಿದ್ದಾರೆ. ಅದೆಷ್ಟೋ ಮಕ್ಕಳು ಮೊಬೈಲ್‌ ಗೀಳಿಗೆ ಬಲಿಯಾಗುತ್ತಿದ್ದಾರೆ. ಜನರು ಕೂಡ ಹೊರಗಿನ ಪ್ರಪಂಚ ಮತ್ತು ಸಂಬಂಧಗಳ ಮೌಲ್ಯವನ್ನು ಮರೆಯುತ್ತಿದ್ದಾರೆ. ಕೆಲವರಿಗಂತೂ ಮೊಬೈಲ್‌ ಮತ್ತು ಟಿವಿ ಇದ್ದರೆ ಸಾಕು ಬೇರೆನೂ ಬೇಡ. ಆದರೆ ಮಹಾರಾಷ್ಟ್ರದ(Maharashtra) ಹಳ್ಳಿಯೊಂದರಲ್ಲಿ ಸಂಜೆ 7 ಗಂಟೆಗೆ ದೇವಸ್ಥಾನದ(Temple) ಸೈರನ್ ಬಾರಿಸುತ್ತಿದ್ದಂತೆ ಗ್ರಾಮಸ್ಥರು ಒಂದೂವರೆ ಗಂಟೆಗಳ ಕಾಲ ತಮ್ಮ ಮೊಬೈಲ್‌ ಸ್ವಿಚ್‌ ಆಫ್ ಮಾಡಿ ಮತ್ತು ಟಿವಿಗಳನ್ನು ಬಂದ್‌ ಮಾಡುತ್ತಾರೆ. ಹಲವರಲ್ಲಿ ಹೌದಾ? ಯಾಕೆ? ಎಂಬ ಕುತೂಹಲ ಮೂಡುವುದು ಸಹಜ. ಈ ಸುದ್ದಿ ಕೂಡ(Viral News) ಸಾಕಷ್ಟು ವೈರಲ್‌ ಆಗಿದೆ.

ಮಹಾರಾಷ್ಟ್ರದ ಸಾಂಗ್ಲಿ(Sangli) ಜಿಲ್ಲೆಯ ವಡಗಾಂವ್‌(Vadgaon) ಗ್ರಾಮದ ದೇವಸ್ಥಾನದಲ್ಲಿ ಪ್ರತಿದಿನ ಸಂಜೆ 7 ಗಂಟೆಗೆ ಸೈರನ್ ಮೊಳಗುತ್ತಿದ್ದಂತೆ ಗ್ರಾಮಸ್ಥರು ಒಂದೂವರೆ ಗಂಟೆಗಳ ಕಾಲ ತಮ್ಮ ಮೊಬೈಲ್‌ ಸ್ವಿಚ್‌ ಆಫ್ ಮಾಡಿ ಮತ್ತು ಟಿವಿಗಳನ್ನು ಬಂದ್‌ ಮಾಡುತ್ತಾರೆ. ಈ ಅವಧಿಯಲ್ಲಿ ಸ್ಥಳೀಯರು ಓದು, ಬರಹ ಮತ್ತು ನೆರೆಹೊರೆಯವರೊಂದಿಗೆ ಮಾತುಕತೆಯಲ್ಲಿ ತೊಡಗುತ್ತಾರೆ. ಟಿವಿ ಮತ್ತು ಫೋನ್‌ಗಳಿಗೆ ಜನರು ದಾಸರಾಗುವುದನ್ನು ತಪ್ಪಿಸಲು ಗ್ರಾಮದ ಮುಖ್ಯಸ್ಥರು ಈ ವ್ಯವಸ್ಥೆಯನ್ನು ಜಾರಿಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.



ಕೆಲವು ವರ್ಷಗಳ ಹಿಂದೆ ಭಾರತದ ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನ ನಡೆದ ಗ್ರಾಮ ಸಭೆಯಲ್ಲಿ ನಾವು ಈ ಮೊಬೈಲ್‌ ಮತ್ತು ಟಿವಿ ಚಟವನ್ನು ನಿಲ್ಲಿಸಬೇಕು ಎಂದು ನಿರ್ಧರಿಸಿದೆವು ಎಂದು ಗ್ರಾಮ ಪರಿಷತ್ತಿನ ಅಧ್ಯಕ್ಷರು ಸುದ್ದಿಗಾರರೊಂದಿಗೆ ಹೇಳಿದ್ದಾರೆ. ಸಭೆ ನಡೆಸಿದ ಮಾರನೆಯ ದಿನದಿಂದಲೇ ದೇವಸ್ಥಾನದಲ್ಲಿ ಸೈರನ್ ಮೊಳಗುತ್ತಿದ್ದಂತೆ ಎಲ್ಲರ ಮನೆಯಲ್ಲೂ ಟಿವಿ ಮತ್ತು ಮೊಬೈಲ್‌ಗಳನ್ನು ಸ್ಥಗಿತಗೊಳಿಸಲಾಗುತ್ತದೆ.

ಈ ಸುದ್ದಿಯನ್ನೂ ಓದಿ:Viral Video: ವಿಮಾನದಲ್ಲಿ ಗನ್ ತೋರಿಸಿ ಬೆದರಿಕೆ ಹಾಕಿದ ಪ್ರಯಾಣಿಕ; ಭಯಾನಕ ವಿಡಿಯೊ ವೈರಲ್

ವಡ್ಗಾಂವ್‌ನಲ್ಲಿ ಸರಿ ಸುಮಾರು 3,000 ಜನರಿದ್ದು, ಅವರಲ್ಲಿ ಹೆಚ್ಚಿನವರು ರೈತರು ಮತ್ತು ಸಕ್ಕರೆ ಗಿರಣಿ ಕಾರ್ಮಿಕರಾಗಿದ್ದಾರೆ.