ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಆಪರೇಷನ್ ರೋರಿಂಗ್ ಲಯನ್ ಮೂಲಕ ಅಬ್ಬರಿಸಿದ ಇಸ್ರೇಲ್‌; ಇರಾನ್ ಮೇಲಿನ ದಾಳಿಯ ಮೊದಲ ವಿಡಿಯೊ ರಿಲೀಸ್‌

Israel releases first video of strikes: ಇರಾನ್‌ ಮೇಲೆ ದಾಳಿ ನಡೆಸಿದ ಮೊದಲ ಅಧಿಕೃತ ವಿಡಿಯೊವನ್ನು ಇಸ್ರೇಲ್ ಬಿಡುಗಡೆ ಮಾಡಿದೆ. ಇಸ್ರೇಲ್ ರಕ್ಷಣಾ ಪಡೆಗಳು (IDF) ಆಪರೇಷನ್ ರೋರಿಂಗ್ ಲಯನ್ ಅಡಿಯಲ್ಲಿ ಪಶ್ಚಿಮ ಇರಾನ್‌ನ ನೂರಾರು ಗುರಿಗಳ ಮೇಲೆ ದಾಳಿ ನಡೆಸಿವೆ ಎಂದು ತಿಳಿಸಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸುತ್ತಿದ್ದು, ಮಧ್ಯ ಪ್ರಾಚ್ಯ ಪ್ರಕ್ಷುಬ್ಧವಾಗಿದೆ.

ಇರಾನ್ ಮೇಲಿನ ದಾಳಿಯ ಮೊದಲ ವಿಡಿಯೊ ರಿಲೀಸ್‌ ಮಾಡಿದ ಇಸ್ರೇಲ್

ಇರಾನ್ ಮೇಲಿನ ದಾಳಿಯ ಮೊದಲ ವಿಡಿಯೊ ಬಿಡುಗಡೆ ಮಾಡಿದ ಇಸ್ರೇಲ್ -

Priyanka P
Priyanka P Feb 28, 2026 7:34 PM

ಟೆಹರಾನ್‌, ಫೆ. 28: ಇರಾನ್‌ ಮೇಲೆ ದಾಳಿ ನಡೆಸಿದ ಮೊದಲ ಅಧಿಕೃತ ವಿಡಿಯೊವನ್ನು ಇಸ್ರೇಲ್ (Israel) ಬಿಡುಗಡೆ ಮಾಡಿದೆ. ಈ ದಾಳಿಗಳು ಆಪರೇಷನ್ ರೋರಿಂಗ್ ಲಯನ್ (Operation Roaring Lion) ಎಂಬ ಹೆಸರಿನಲ್ಲಿ ನಡೆದಿದೆ. ಅಮೆರಿಕ-ಇಸ್ರೇಲ್ ಜಂಟಿಯಾಗಿ (US-Israel joint attack) ಈ ಕಾರ್ಯಾಚರಣೆ ನಡೆಸಿದ ನಂತರ ಮಧ್ಯ ಪೂರ್ವ ದೇಶದಲ್ಲಿ ಉದ್ವಿಗ್ನತೆ ತೀವ್ರಗೊಂಡಿದೆ.

ಇಸ್ರೇಲ್ ರಕ್ಷಣಾ ಪಡೆಗಳು (IDF) ಆಪರೇಷನ್ ರೋರಿಂಗ್ ಲಯನ್ ಅಡಿಯಲ್ಲಿ ಪಶ್ಚಿಮ ಇರಾನ್‌ನಲ್ಲಿ ನೂರಾರು ಗುರಿಗಳ ಮೇಲೆ ದಾಳಿ ನಡೆಸಿವೆ ಎಂದು ಮೂಲಗಳು ತಿಳಿಸಿವೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಗ್ಗೆ ಮಾತನಾಡಿ, ದಾಳಿಯು ಅಮೆರಿಕ ಎದುರಿಸುತ್ತಿರುವ ಭದ್ರತಾ ಬೆದರಿಕೆಯನ್ನು ನಿವಾರಿಸುತ್ತದೆ. ಇರಾನ್ ಜನತೆಗೆ ತಮ್ಮ ಆಡಳಿತಗಾರರನ್ನು ಕೆಡವಲು ಅವಕಾಶ ಒದಗಿಸುತ್ತದೆ ಎಂದು ಹೇಳಿದ್ದಾರೆ.

ಇಲ್ಲಿದೆ ವಿಡಿಯೊ:



ʼಆಪರೇಷನ್ ಎಪಿಕ್ ಫ್ಯೂರಿʼ ಎಂದು ಹೆಸರಿನ ಅಮೆರಿಕದ ಕಾರ್ಯಾಚರಣೆಯು ಮುಖ್ಯವಾಗಿ ಇರಾನ್ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡಿದ್ದವು ಎಂದು ಮೂಲಗಳು ತಿಳಿಸಿವೆ. ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಹಾಗೂ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಇಬ್ಬರನ್ನೂ ಗುರಿಯಾಗಿಸಿಕೊಂಡಿದ್ದರೂ, ದಾಳಿಯ ಪರಿಣಾಮ ಏನು ಎಂಬುದು ತಕ್ಷಣ ಸ್ಪಷ್ಟವಾಗಿಲ್ಲ ಎಂದು ಇಸ್ರೇಲ್ ಅಧಿಕಾರಿಯೊಬ್ಬರು ಹೇಳಿದಾರೆ.

ಇರಾನ್ ಮತ್ತು ಅದರ ದೀರ್ಘಕಾಲದ ವಿರೋಧಿಗಳ ನಡುವೆ ಹೆಚ್ಚಾದ ಸಂಘರ್ಷವು, ಟೆಹರಾನ್‌ನ ಅಣು ವಿವಾದಕ್ಕೆ ರಾಜತಾಂತ್ರಿಕ ಪರಿಹಾರ ದೊರೆಯುವ ಭರವಸೆಯನ್ನು ಕುಗ್ಗಿಸಿದೆ. ಈ ವಾರ ನಡೆದ ಅಮೆರಿಕ ಮತ್ತು ಇರಾನ್ ನಡುವಿನ ಇತ್ತೀಚಿನ ಪರೋಕ್ಷ ಮಾತುಕತೆಗಳೂ ಯಾವುದೇ ಪ್ರಮುಖ ಪ್ರಗತಿಯನ್ನು ಸಾಧಿಸಲು ವಿಫಲವಾಗಿವೆ.

ಬದ್ಧ ವೈರಿ ಅಮೆರಿಕ- ಇರಾನ್ ಸಂಘರ್ಷಕ್ಕೆ ಇದೆ 4 ದಶಕಗಳ ಹಿನ್ನೆಲೆ; ಇಲ್ಲಿದೆ ಸಂಪೂರ್ಣ ಇತಿಹಾಸ

ಇನ್ನು ಪ್ರತೀಕಾರವಾಗಿ ಇರಾನ್, ಇಸ್ರೇಲ್ ವಿರುದ್ಧ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ಮೊದಲ ಹಂತವನ್ನು ಆರಂಭಿಸಿದೆ. ಈ ಪ್ರದೇಶದಲ್ಲಿನ ಎಲ್ಲ ಅಮೆರಿಕನ್ ನೆಲೆಗಳು ಮತ್ತು ಹಿತಾಸಕ್ತಿಗಳು ಇರಾನ್‌ನ ವ್ಯಾಪ್ತಿಯಲ್ಲಿವೆ ಎಂದು ಇರಾನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶತ್ರು ನಿರ್ಣಾಯಕವಾಗಿ ಸೋಲಲ್ಪಡುವವರೆಗೆ ಪ್ರತೀಕಾರ ಮುಂದುವರಿಯುತ್ತದೆ ಎಂದು ಇರಾನ್ ಹೇಳಿದೆ.

ಗಲ್ಫ್ ದೇಶದಲ್ಲಿ ಭಾರಿ ಸ್ಫೋಟಗಳ ಶಬ್ಧಗಳು ಕೇಳಿಬಂದಿವೆ. ಯುನೈಟೆಡ್ ಅರಬ್ ಎಮಿರೇಟ್ಸ್ ರಾಜಧಾನಿ ಅಬುಧಾಬಿ ಮತ್ತು ವಾಣಿಜ್ಯ ಕೇಂದ್ರವಾದ ದುಬೈ ನಗರಗಳಲ್ಲಿ ಭಾರಿ ಸದ್ದುಗಳು ಮೊಳಗಿವೆ. ಅಬುಧಾಬಿಯಲ್ಲಿ ತ್ವರಿತವಾಗಿ ಐದು ಸ್ಫೋಟದ ಶಬ್ಧ ಕೇಳಿಸಿದ್ದು, ಅದರಿಂದ ಕಿಟಕಿಗಳು ಕಂಪಿಸಿದವು ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ. ಅಲ್ಲದೆ ಅಲ್ ಧಾಫ್ರಾ ಮತ್ತು ಬತೀನ್ ಪ್ರದೇಶಗಳಲ್ಲಿಯೂ ಭಾರಿ ಸ್ಫೋಟದ ಶಬ್ಧಗಳು ಕೇಳಿರುವುದಾಗಿ ಜನರು ತಿಳಿಸಿದ್ದಾರೆ.

ಅಮೆರಿಕದ ಐದನೇ ನೌಕಾಪಡೆಯ ಸೇವಾ ಕೇಂದ್ರವು ಕ್ಷಿಪಣಿ ದಾಳಿಗೆ ಒಳಗಾಗಿದೆ ಎಂದು ಬಹ್ರೈನ್‌ ಹೇಳಿದೆ. ದ್ವೀಪ ರಾಜ್ಯದ ಕರಾವಳಿಯ ಬಳಿಯಿಂದ ದಟ್ಟವಾದ ಹೊಗೆಯು ಮೇಲೇರುತ್ತಿರುವುದನ್ನು ಪ್ರತ್ಯಕ್ಷದರ್ಶಿಗಳು ನೋಡಿದ್ದಾರೆ, ಸೈರನ್‌ಗಳು ಮೊಳಗುತ್ತಿದ್ದವು ಎಂದು ಹೇಳಿದ್ದಾರೆ. ದೇಶವನ್ನು ಗುರಿಯಾಗಿಸಿಕೊಂಡಿದ್ದ ಎಲ್ಲ ಕ್ಷಿಪಣಿಗಳನ್ನು ಹೊಡೆದುರುಳಿಸಿರುವುದಾಗಿ ಕತಾರ್ ಮಾಹಿತಿ ನೀಡಿದೆ.