ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸೂರ್ಯ ನೆತ್ತಿಗೇರಿದರೂ ಏಳದ ಮಕ್ಕಳನ್ನು ಎಬ್ಬಿಸಲು ತಾಯಿಯ ಪ್ಲ್ಯಾನ್‌; ಕೋಣೆಯೊಳಗೆ ಬಂತು ಬ್ಯಾಂಡ್ ಸೆಟ್

Indian Mom Hires Band: ಸಾಮಾಜಿಕ ಮಾಧ್ಯಮಗಳಲ್ಲಿ ಹೃದಯಗಳನ್ನು ಗೆಲ್ಲುತ್ತಿರುವ ಹಾಸ್ಯದ ವಿಡಿಯೊದಲ್ಲಿ ತಾಯಿಯೊಬ್ಬಳು ತನ್ನ ಹೆಣ್ಣುಮಕ್ಕಳನ್ನು ನಿದ್ರೆಯಿಂದ ಎಬ್ಬಿಸಲು ಲೈವ್ ಬ್ಯಾಂಡ್ ನೇಮಿಸಿದ್ದಾರೆ. ತಮ್ಮ ಮಕ್ಕಳನ್ನು ನಿದ್ದೆಯಿಂದ ಎಬ್ಬಿಸುವ ಸಲುವಾಗಿ ತಾಯಿಯು ಈ ಪ್ಲ್ಯಾನ್‌ ಮಾಡಿದ್ದಾರೆ.

ದೆಹಲಿ: ಬೆಳಗ್ಗೆ ಬೇಗನೆ ಏಳುವುದೆಂದರೆ ಬಹುತೇಕರಿಗೆ ಬಹಳ ಕಷ್ಟದ ಕೆಲಸ. ಅದರಲ್ಲೂ ಯುವ ಜನತೆಯಂತೂ ಸೂರ್ಯ ನೆತ್ತಿಗೆ ಬಂದರೂ ಹಾಸಿಗೆಯಿಂದ ಕದಲುವುದಿಲ್ಲ. ಅಮ್ಮಂದಿರಂತೂ (Mothers) ಎದ್ದೇಳಿ ಎಂದು ಕೂಗುತ್ತಲೇ ಇರುತ್ತಾರೆ. ಮಲಗಿರುವ ಕೋಣೆಯ ಲೈಟ್ಸ್ ಆನ್ ಮಾಡಿ, ಫ್ಯಾನ್ ಸ್ವಿಚ್ ಆಫ್ ಮಾಡಿ ತೊಂದರೆ ಕೊಡುತ್ತಾರೆ. ಇನ್ನು ಕೆಲ ಅಮ್ಮಂದಿರಂತೂ ಮಿಕ್ಸ್ ಆನ್ ಮಾಡುವುದು, ಜೋರಾಗಿ ಹಾಡು ಹಾಕುವುದು, ಪಾತ್ರೆ ತೊಳೆಯುವಾಗ ಜೋರಾಗಿ ಶಬ್ಧಗಳನ್ನು ಮಾಡುತ್ತಾರೆ. ಆದರೂ ಎದ್ದೇಳದಿದ್ದರೆ ನೀರು ತಂದು ಸುರಿಯುವವರೂ ಇದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೊ (Viral Video) ನೋಡಿದ್ರೆ ಖಂಡಿತಾ ನೀವು ನಗೋದ್ರಲ್ಲಿ ಸಂಶಯವಿಲ್ಲ.

ಸಾಮಾಜಿಕ ಮಾಧ್ಯಮಗಳಲ್ಲಿ ಹೃದಯಗಳನ್ನು ಗೆಲ್ಲುತ್ತಿರುವ ಹಾಸ್ಯದ ವಿಡಿಯೊದಲ್ಲಿ ತಾಯಿಯೊಬ್ಬಳು ತನ್ನ ಹೆಣ್ಣುಮಕ್ಕಳನ್ನು ನಿದ್ರೆಯಿಂದ ಎಬ್ಬಿಸಲು ಲೈವ್ ಬ್ಯಾಂಡ್ ಅನ್ನು ನೇಮಿಸಿದ್ದಾರೆ. ಈ ಮೂಲಕ ಮಕ್ಕಳನ್ನು ಎಬ್ಬಿಸಲು ಮತ್ತೊಂದು ಹಂತಕ್ಕೆ ಹೋಗಿದ್ದಾರೆ. ಈಗ ವೈರಲ್ ಆಗಿರುವ ಈ ವಿಡಿಯೊದಲ್ಲಿ, ಬ್ಯಾಂಡ್ ಪ್ರದರ್ಶಕಿಯೊಬ್ಬರು ಡೋಲು ಬಾರಿಸುತ್ತಿದ್ದರೆ, ಮತ್ತೊಬ್ಬರು ಟ್ರಂಪೆಟ್ ನುಡಿಸಿದ್ದಾರೆ.

ಯುವತಿಯರು ಮಲಗಿರುವ ಕೋಣೆಯತ್ತ ಬಂದ ಬ್ಯಾಂಡ್ ಸೆಟ್ ಅವರನ್ನು ಎಬ್ಬಿಸುವ ಸಲುವಾಗಿ ಜೋರಾಗಿ ವಾದ್ಯ ನುಡಿಸಿದೆ. ಜೋರಾದ ಶಬ್ಧಕ್ಕೆ ಬೆದರಿದ ಯುವತಿಯರು ಅಚ್ಚರಿಗೊಳಗಾಗಿ ನೋಡಿದ್ದಾರೆ. ಈ ವೇಳೆ ಬ್ಯಾಂಡ್ ಸೆಟ್ ಬಂದು ತಮ್ಮ ಕೋಣೆಯಲ್ಲಿ ನಿಂತಿರುವುದನ್ನು ಕಂಡು ಅಚ್ಚರಿಗೊಂಡಿದ್ದಾರೆ. ಶಬ್ಧವನ್ನು ಕೇಳಲು ತಾಳಲಾರದೆ ಮತ್ತೆ ಕಂಬಳಿಯ ಒಳಗೆ ಹೊಕ್ಕು ಮಲಗಿದ್ದಾರೆ.

ವಿಡಿಯೊ ವೀಕ್ಷಿಸಿ:



ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊ, ತ್ವರಿತವಾಗಿ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಳ್ಳಲಾಗಿದೆ. ನೆಟ್ಟಿಗರು ಆ ಮಹಿಳೆಯನ್ನು ವರ್ಷದ ತಾಯಿ ಎಂದು ಕರೆದಿದ್ದಾರೆ. ಅನೇಕರು, ಈ ವಿಡಿಯೊ ನನ್ನ ತಾಯಿಗೆ ತಲುಪುವ ಮೊದಲು ಅದನ್ನು ಡಿಲೀಟ್ ಮಾಡಿ ಎಂದು ತಮಾಷೆ ಮಾಡಿದರು.

ಇದನ್ನೂ ಓದಿ: Viral Video: ಹಾಡಹಗಲೇ ಚಿನ್ನದ ಅಂಗಡಿಯಲ್ಲಿ ಖತರ್ನಾಕ್ ಕಳ್ಳಿಯರ ಕೈಚಳಕ; ಇಲ್ಲಿದೆ ನೋಡಿ ಶಾಕಿಂಗ್‌ ವಿಡಿಯೊ

ಈ ವಿಡಿಯೊವನ್ನು ಎಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ಭಾರತೀಯ ಪೋಷಕರು ತಮ್ಮ ಮಕ್ಕಳನ್ನು ನಿದ್ದೆಯಿಂದ ಏಳಿಸುವ ಸಲುವಾಗಿ ಯಾವ ನಾಟಕೀಯ ಪ್ರತಿಭೆಗೆ ಹೆಸರುವಾಸಿಯಾಗಿದ್ದಾರೆ ಎಂಬುದನ್ನು ಈ ವಿಡಿಯೊ ಸೆರೆಹಿಡಿಯುತ್ತದೆ. ಮಜವಾದ ಶಿಕ್ಷೆಗಳಿಂದ ಹಿಡಿದು ವಿಶಿಷ್ಟ ಜೀವನ ಪಾಠಗಳವರೆಗೆ, ದೇಸಿ ತಾಯಂದಿರು ಎಂದಿಗೂ ಅಚ್ಚರಿ ಮೂಡಿಸುವಲ್ಲಿ ವಿಫಲರಾಗುವುದಿಲ್ಲ.

ತಮ್ಮ ಮಕ್ಕಳನ್ನು ಎಬ್ಬಿಸಲು ವಿಭಿನ್ನ ತಂತ್ರ ಬಳಸಿದ ಈ ತಾಯಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಇದು ಭಾರತದ ಪ್ರತಿ ಮನೆ-ಮನೆಯ ಕಥೆ ಎಂದು ನೆಟ್ಟಿಗರು ಹಂಚಿಕೊಂಡಿದ್ದಾರೆ. ಒಟ್ಟಾರೆ, ಬ್ಯಾಂಡ್‌ನ ಬೀಟ್‌ಗಳು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದರೆ, ಈ ತಾಯಿಯ ಅದ್ಭುತವಾದ ಎಚ್ಚರಗೊಳಿಸುವ ತಂತ್ರವು ಪೋಷಕರ ಸೃಜನಶೀಲತೆಯನ್ನು ತೋರಿಸಿದೆ. ಒಟ್ಟಿನಲ್ಲಿ ನೆಟ್ಟಿಗರು ಈ ವಿಡಿಯೊ ನೋಡಿ ಬಿದ್ದು ಬಿದ್ದು ನಕ್ಕಿದ್ದಂತೂ ಸುಳ್ಳಲ್ಲ.