Viral News: ನಾವು ಭಾರತವನ್ನು ಆಳಿದವರು: ಭಾರತೀಯ ಮಹಿಳೆ ಮೇಲೆ ಬ್ರಿಟನ್ ವ್ಯಕ್ತಿಯ ದರ್ಪ-ಸುದ್ದಿ ವೈರಲ್!
ಲಂಡನ್‌ನಿಂದ ಮ್ಯಾಂಚೆಸ್ಟರ್‌ಗೆ ಪ್ರಯಾಣಿಸುತ್ತಿದ್ದ ವೇಳೆ ಭಾರತೀಯ ಮಹಿಳೆಯೊಬ್ಬರನ್ನು ಬ್ರಿಟನ್ ವ್ಯಕ್ತಿ ಜನಾಂಗೀಯವಾಗಿ ನಿಂದಿಸಿದ ಆತಂಕಕಾರಿ ಘಟನೆ ನಡದಿದೆ. ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯು ಮಹಿಳೆಯ ಮೇಲೆ ದರ್ಪ ತೋರಿದ್ದು, ಸಹ ಪ್ರಯಾಣಿಕರ ಮೇಲೂ ಕೂಗಾಡಿದ್ದಾನೆ. ಆ ಕುರಿತ ಸುದ್ದಿ ಇದೀಗ ಸಾಕಷ್ಟು ವೈರಲ್ ಆಗುತ್ತಿದೆ.
![ಕುಡಿದ ಅಮಲಿನಲ್ಲಿ ಭಾರತೀಯ ಮಹಿಳೆಯನ್ನು ನಿಂದಿಸಿದ ಬ್ರಿಟನ್ ವ್ಯಕ್ತಿ!](https://cdn-vishwavani-prod.hindverse.com/media/original_images/Viral_News_20.jpg)
ವೈರಲ್ ಸುದ್ದಿ
![Profile](https://vishwavani.news/static/img/user.png)
ಲಂಡನ್: ಲಂಡನ್‌ನಿಂದ(London) ಮ್ಯಾಂಚೆಸ್ಟರ್‌ಗೆ(Manchester) ಪ್ರಯಾಣಿಸುತ್ತಿದ್ದ ವೇಳೆ ಭಾರತೀಯ ಮಹಿಳೆಯೊಬ್ಬರನ್ನು ಬ್ರಿಟನ್ ವ್ಯಕ್ತಿ ಜನಾಂಗೀಯವಾಗಿ ನಿಂದಿಸಿದ(Racially Abuse) ಆತಂಕಕಾರಿ ಘಟನೆ ನಡದಿದೆ. ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯು ಮಹಿಳೆಯ ಮೇಲೆ ದರ್ಪ ತೋರಿದ್ದು, ಸಹ ಪ್ರಯಾಣಿಕರ ಮೇಲೂ ಕೂಗಾಡಿದ್ದಾನೆ. ಆ ಕುರಿತ ಸುದ್ದಿ ಇದೀಗ ಸಾಕಷ್ಟು(Viral News) ವೈರಲ್ ಆಗುತ್ತಿದೆ. ಇಂಗ್ಲೆಂಡ್‌ನ ವ್ಯಕ್ತಿಯ ದಬ್ಬಾಳಿಕೆಯನ್ನು ಭಾರತೀಯ ಸಾಮಾಜಿಕ ಜಾಲತಾಣದ ಬಳಕೆದಾರರು ಕಟುವಾಗಿ ಟೀಕಿಸಿದ್ದಾರೆ.
ಬ್ರಿಟನ್ ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಭಾರತೀಯ ಮೂಲದ ಮಹಿಳೆಯನ್ನು ನಿಂದಿಸಿದ್ದಾನೆ. ಅವನ ನಡವಳಿಕೆಯಿಂದಾಗಿ ಸಹ ಪ್ರಯಾಣಿಕರೂ ಕಿರಿಕಿರಿ ಅನುಭವಿಸಿದ್ದಾರೆ. ಘಟನೆಯ ವಿಡಿಯೊ ಸಾಕಷ್ಟು ಹರಿದಾಡಿತ್ತು. ಸದ್ಯ ವಿಡಿಯೊ ಡಿಲೀಟ್ ಆಗಿದೆ. ಕುಡಿದಿದ್ದ ವ್ಯಕ್ತಿ ಫೋರ್ಸಿತ್ ಎಂಬ ಹೆಸರಿನ ಮಹಿಳೆಯ ಮೇಲೆ ಜೋರಾಗಿ ಕೂಗಾಡಿದ್ದಾನೆ. ಇಂಗ್ಲೆಂಡ್ ಸಾರ್ವಭೌಮತ್ವದ ಬಗ್ಗೆ ಹೆಮ್ಮೆಪಡುತ್ತಾ,ದರ್ಪ ತೋರಿದ್ದಾನೆ. ಅದೇ ರೈಲಿನಲ್ಲಿದ್ದ ಇನ್ನು ಹಲವು ಪ್ರಯಾಣಿಕರನ್ನು ವಲಸಿಗರು ಎನ್ನುವ ಮೂಲಕ ಅಸಭ್ಯವಾದ ಪದಗಳಲ್ಲಿ ಬೈದಿದ್ದಾನೆ.
ಈ ಸುದ್ದಿಯನ್ನೂ ಓದಿ:Narendra Modi: ಸಾವರ್ಕರ್ ಅವರನ್ನು ಮಾರ್ಸೆಲ್ಸ್‌ನಲ್ಲಿ ಮೋದಿ ಸ್ಮರಿಸಿದಾದ್ದರೂ ಯಾಕೆ? ಮಾರ್ಸೆಲ್ಸ್ ಮತ್ತು ಸಾವರ್ಕರ್‌ಗಿರುವ ನಂಟೇನು?
"ನೀವು ಇಂಗ್ಲೆಂಡ್‌ನಲ್ಲಿದ್ದೀರಿ. ನಮ್ಮ ಭಿಕ್ಷೆಯಲ್ಲಿ ಬದುಕುತ್ತಿದ್ದೀರಿ. ನಾವು ಮನಸ್ಸು ಮಾಡದಿದ್ದರೆ ನೀವು ಇಂಗ್ಲೆಂಡ್‌ನಲ್ಲಿ ಬದುಕಲೂ ಆಗುತ್ತಿರಲಿಲ್ಲ. ನಮ್ಮ ಋಣದಲ್ಲಿದ್ದೀರಿ. ಇಂಗ್ಲಿಷ್ ಜನರು ಜಗತ್ತನ್ನು ಗೆದ್ದು ಅದನ್ನು ನಿಮಗೆ ಹಿಂತಿರುಗಿಸಿದ್ದಾರೆ. ನಾವು ಭಾರತವನ್ನು ವಶಪಡಿಸಿಕೊಂಡು ಆಳಿದವರು. ನಮಗೆ ಅದು ಬೇಕಾಗಿರಲಿಲ್ಲ. ಅದಕ್ಕೆ ನಾವು ಅದನ್ನು ಮತ್ತೆ ನಿಮಗೇ ಹಿಂತಿರುಗಿಸಿದೆವು" ಎಂದು ಅಹಂಕಾರದಿಂದ ಹೇಳಿದ್ದಾನೆ. ಅವನ ಮಾತುಗಳನ್ನು ಮಹಿಳೆ ವಿಡಿಯೊ ಮೂಲಕ ಸೆರೆ ಹಿಡಿದಿದ್ದರು. ವಿಡಿಯೊ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಪೋಲೆಂಡ್‌ನಲ್ಲಿ ಭಾರತೀಯನಿಗೆ ಜನಾಂಗೀಯ ನಿಂದನೆ
ಕೆಲ ವರ್ಷಗಳ ಹಿಂದೆಯಷ್ಟೇ ಪೋಲೆಂಡ್‌ನಲ್ಲಿ ಜನಾಂಗೀಯ ನಿಂದನೆಗೆ ಭಾರತೀಯ ವ್ಯಕ್ತಿಯೊಬ್ಬರು ಗುರಿಯಾಗಿದ್ದರು. ಪರಾವಲಂಬಿ, ಆಕ್ರಮಣಕಾರ ಎಂದು ಜರಿದಿದ್ದ ಅಮೆರಿಕದ ವ್ಯಕ್ತಿ, ನಿಮ್ಮ ದೇಶಕ್ಕೆ ಹಿಂತಿರುಗು ಎಂದು ಹೇಳಿ ನಿಂದಿಸಿದ್ದನು. ಭಾರತೀಯನ ಗುರುತು ಪತ್ತೆಯಾಗಿರಲ್ಲ. ವಿಡಿಯೊ ಚಿತ್ರೀಕರಣವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡಿತ್ತು. ಮಾಲ್ ಬಳಿ ನಡೆದುಕೊಂಡು ಹೋಗುವ ಭಾರತೀಯನನ್ನು ತಡೆದು ‘ಯುರೋಪಿನಲ್ಲಿ ಏಕೆ ಇದ್ದೀಯಾ? ರೆಕಾರ್ಡ್ ಮಾಡುವುದನ್ನು ನಿಲ್ಲಿಸು’ ಎಂದು ಅಮೆರಿಕದ ವ್ಯಕ್ತಿ ದರ್ಪದಿಂದ ಹೇಳಿದ್ದ ವಿಡಿಯೊ ಭಾರೀ ವೈರಲ್ ಆಗಿತ್ತು.