#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Narendra Modi: ಸಾವರ್ಕರ್‌ ಅವರನ್ನು ಮಾರ್ಸೆಲ್ಸ್‌ನಲ್ಲಿ ಮೋದಿ ಸ್ಮರಿಸಿದಾದ್ದರೂ ಯಾಕೆ? ಮಾರ್ಸೆಲ್ಸ್‌ ಮತ್ತು ಸಾವರ್ಕರ್‌ಗಿರುವ ನಂಟೇನು?

ಪ್ರಧಾನಿ ನರೇಂದ್ರ ಮೋದಿ ಮಂಗಳವಾರ(ಫೆ.11) ಪ್ಯಾರಿಸ್‌ನಲ್ಲಿ ನಡೆದ AI ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ನಂತರ ಮಾರ್ಸೆಲ್ಸ್‌ಗೆ ಆಗಮಿಸಿದ್ದಾರೆ. ಅಲ್ಲಿನ ಯುದ್ಧ ಸ್ಮಾರಕ್ಕೆ ಭೇಟಿಕೊಟ್ಟು ಮಹಾ ಯುದ್ಧಗಳಲ್ಲಿ ಮಡಿದ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಿದ್ದಾರೆ. ಅದೇ ಸಮಯದಲ್ಲಿ ವೀರ ಸಾವರ್ಕರ್‌ ಅವರನ್ನೂ ಸ್ಮರಿಸಿದ್ದಾರೆ. ಮಾರ್ಸೆಲ್ಸ್‌ ಮತ್ತು ಸಾವರ್ಕರ್‌ಗಿರುವ ಸಂಬಂಧದ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಮಾರ್ಸೆಲ್ಸ್‌ ಮತ್ತು ಸಾವರ್ಕರ್‌ಗಿರುವ ನಂಟೇನು? ಏನಿದು ಇತಿಹಾಸ?

ಸಾಂದರ್ಭಿಕ ಚಿತ್ರ

Profile Deekshith Nair Feb 12, 2025 4:51 PM

ಪ್ಯಾರಿಸ್: ಪ್ರಧಾನಿ ನರೇಂದ್ರ ಮೋದಿ(Narendra Modi) ಮಂಗಳವಾರ ಪ್ಯಾರಿಸ್‌ನಲ್ಲಿ(Paris) ನಡೆದ AI ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ನಂತರ ಮಾರ್ಸೆಲ್ಸ್‌ಗೆ(Marseilles) ಆಗಮಿಸಿದ್ದಾರೆ. ಅಲ್ಲಿನ ಯುದ್ಧ ಸ್ಮಾರಕ್ಕೆ ಭೇಟಿಕೊಟ್ಟು ಮಹಾ ಯುದ್ಧಗಳಲ್ಲಿ ಮಡಿದ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಿದ್ದಾರೆ. ಅದೇ ಸಮಯದಲ್ಲಿ ವೀರ ಸಾವರ್ಕರ್‌(Veer Savarkar) ಅವರನ್ನೂ ಸ್ಮರಿಸಿದ್ದಾರೆ. ಫ್ರಾನ್ಸ್‌ನ ಮಾರ್ಸೆಲ್ಸ್‌ ಮತ್ತು ಭಾರತದ ಸಾವರ್ಕರ್‌ಗಿರುವ ಸಂಬಂಧವೇನು? ಎಂಬ ಕುತೂಹಲ ಸಹಜವಾಗಿ ಮೂಡುತ್ತದೆ. ಅದರ ಹಿಂದಿನ ಕಥೆಯನ್ನುಇಲ್ಲಿ ವಿವರಿಸಲಾಗಿದೆ.

ಮಾರ್ಸೆಲ್ಸ್‌ಗೆ ಭೇಟಿಕೊಟ್ಟ ನಂತರ ಪ್ರಧಾನಿ ಮೋದಿ ತಮ್ಮ ಎಕ್ಸ್‌ ಖಾತೆಯಲ್ಲಿ, ಈ ನಗರವು ವಿಶೇಷ ಮಹತ್ವವನ್ನು ಹೊಂದಿದೆ. ಮಹಾನ್ ವೀರ್ ಸಾವರ್ಕರ್ ಧೈರ್ಯದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು ಇದೇ ಜಾಗದಲ್ಲಿ" ಎಂದು ತಿಳಿಸಿದ್ದಾರೆ. ಸಾವರ್ಕರ್‌ ಅವರನ್ನು ಬ್ರಿಟಿಷ್ ಕಸ್ಟಡಿಗೆ ಹಸ್ತಾಂತರಿಸಬಾರದು ಎಂದು ಒತ್ತಾಯಿಸಿದ ಮಾರ್ಸೆಲ್ಸ್ ಜನರಿಗೆ ಮತ್ತು ಆ ಕಾಲದ ಫ್ರೆಂಚ್ ಸರ್ಕಾರಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ಪ್ರಧಾನಿ ಹೇಳಿದ್ದು, ವೀರ್ ಸಾವರ್ಕರ್ ಅವರ ಶೌರ್ಯ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇದೆ ಎಂದು ಹೇಳಿದ್ದಾರೆ.



ಮಾರ್ಸೆಲ್ಸ್‌ ಬಂದರಿನಲ್ಲಿ‌ ಹಡಗಿನಿಂದ ಸಮುದ್ರಕ್ಕೆ ಜಿಗಿದಿದ್ದ ಸಾವರ್ಕರ್

1910ರ ಜುಲೈನಲ್ಲಿ ಲಂಡನ್‌ನಲ್ಲಿ ವಕೀಲ ವೃತ್ತಿ ಮಾಡುತ್ತಿದ್ದ ಸಾವರ್ಕರ್‌ ಅವರನ್ನು ಬ್ರಿಟಿಷ್‌ ಸರ್ಕಾರ ರಾಜದ್ರೋಹದ ಆಪಾದನೆ ಮೇಲೆ ಬಂಧಿಸಿತ್ತು. ಗಡಿಪಾರು ಮಾಡಲು ಹಡಗಿನಲ್ಲಿ ಕೊಂಡೊಯ್ಯಲಾಗಿತ್ತು. ಹಡಗು ಫ್ರಾನ್ಸ್‌ನ ಮಾರ್ಸೆಲ್ಸ್ ಬಂದರಿನ ಸಮೀಪ ನಿಂತಿತ್ತು. ಯಾಂತ್ರಿಕ ತೊಂದರೆಯಿಂದ ನಿಂತಿದ್ದ ಹಡಗನ್ನು ಕೆಲಸಗಾರರು ಸರಿಪಡಿಸುವುದರಲ್ಲಿ ನಿರತರಾಗಿದ್ದರು. ಬಂಧಿಯಾಗಿದ್ದ ಸಾರ್ವಕರ್‌ರನ್ನು ಇಬ್ಬರು ಕಾವಲುಗಾರರು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದರು. ಸೆರೆಯಾಳುವಾಗಿದ್ದ ಸಾವರ್ಕರ್ "ನಾನು ಶೌಚಾಲಯಕ್ಕೆ ಹೋಗಬೇಕು" ಎಂದು ಹೇಳಿ ಬಾಗಿಲು ಹಾಕಿಕೊಂಡರು. ಶೌಚಾಲಯಕ್ಕೆ ಗಾಜಿನ ಕಿಟಕಿ ಇದ್ದುದರಿಂದ ಬಂಧಿತನನ್ನು ಗಮನಿಸಲು ಅನುಕೂಲವಾಗಿತ್ತು. ಸಾವರ್ಕರ್ ತನ್ನ ಮೇಲಂಗಿಯನ್ನು ಕಿಟಕಿಯ ಮೇಲೆ ನೇತು ಹಾಕಿದರು. ಕ್ಷಣಾರ್ಧದಲ್ಲಿ ಸಾವರ್ಕರ್ ಹಡಗಿನ ಕಿಂಡಿಯಲ್ಲಿ ತಮ್ಮ ನೀಳ ಕಾಯವನ್ನು ತೂರಿಸಿ ʼಸ್ವಾತಂತ್ರ್ಯ ಲಕ್ಷ್ಮಿ ಕೀ ಜೈʼ ಎನ್ನುತ್ತಾ ತಳ ಸೇರಿ, ಸಮುದ್ರಕ್ಕೆ ಜಿಗಿದು,ಫ್ರಾನ್ಸ್ ದಡಕ್ಕೆ ಸೇರಿದರು. ಮತ್ತೆ ಅವರನ್ನು ಬ್ರಿಟಿಷರು ಬಂಧಿಸಿದರು. ಆದರೆ ಫ್ರಾನ್ಸ್‌ ದಡ ಸೇರಿದ್ದ ಸಾವರ್ಕರ್‌ ಅವರನ್ನು ಬಂಧಿಸಕೂಡದು, ಬ್ರಿಟಿಷರಿಗೆ ಇವರನ್ನು ಹಸ್ತಾಂತರಿಸುವುದು ನಮ್ಮ ದೇಶದ ಕಾನೂನಿಗೆ ವಿರುದ್ಧವಾಗುತ್ತದೆ ಎಂದು ಅಂದಿನ ಫ್ರೆಂಚ್‌ ಜನರು ಮತ್ತು ಸರ್ಕಾರ ಹೇಳಿತ್ತು. ಮಾರನೆಯ ದಿನ ಪತ್ರಿಕೆಗಳಲ್ಲಿ ಅದು ಬಹುದೊಡ್ಡ ಸುದ್ದಿಯೂ ಆಗಿತ್ತು.

ಈ ಸುದ್ದಿಯನ್ನೂ ಓದಿ:Modi in Paris: ಮರ್ಸೆಲ್ಲೆ ಯುದ್ಧ ಸ್ಮಾರಕಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ; ವೀರ್‌ ಸಾವರ್ಕರ್‌ಗೆ ಸ್ಮರಣೆ

ಈ ಸಂದರ್ಭವನ್ನೇ ಮೋದಿ ಇದೀಗ ನೆನಪು ಮಾಡಿಕೊಂಡಿದ್ದು, ಫ್ರೆಂಚ್‌ ಜನರಿಗೆ ಕೃತಜ್ಞತೆ ತಿಳಿಸಿದ್ದಾರೆ.