ನವದೆಹಲಿ: ಇತ್ತೀಚಿನ ಕೆಲವ ದಿನಗಳಿಂದ ಲಬುಬು ಗೊಂಬೆಗಳು ಭಾರೀ ಟ್ರೆಂಡಿಂಗ್‌ನಲ್ಲಿವೆ. ಪಾಶ್ಚಾತ್ಯ ದೇಶದಲ್ಲಿ ಇದೊಂದು ಕ್ರೇಜ್ ಆಗಿದ್ದು, ಬಹುತೇಕ ಮಂದಿ ಲಬುಬು ಗೊಂಬೆಯನ್ನು ಖರೀದಿಸುತ್ತಿದ್ದಾರೆ. ಭಾರತೀಯ ಮಹಿಳೆಯೊಬ್ಬರು ಲಬುಬು ಗೊಂಬೆಯನ್ನು (Labubu doll) ಪೂಜಿಸುತ್ತಿರುವ ವಿಡಿಯೊ ವೈರಲ್ ಆಗಿದ್ದು ಸಾಮಾಜಿಕ ಮಾಧ್ಯಮದಲ್ಲಿ (social media) ಭಾರಿ ಸಂಚಲನವನ್ನು ಸೃಷ್ಟಿಸಿದೆ. ಲಬುಬು ಗೊಂಬೆಯು ಒಂದು ಸಂಗ್ರಾಹಕ ಆಟಿಕೆಯಾಗಿದೆ.ಆದರೆ, ಭಾರತೀಯ ಮಹಿಳೆಗೆ ಮಾತ್ರ ಇದು ಸಾಮಾನ್ಯ ಗೊಂಬೆಯಾಗಿಲ್ಲ. ಆಕೆ ಇದನ್ನು ಚೀನೀ ದೇವತೆ ಎಂದು ನಂಬಿದ್ದಾಳೆ. ಇನ್ನು ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಹೌದು, ಲಬುಬು ಗೊಂಬೆಯನ್ನು ದೇವರಂತೆ ಪೂಜೆಸುವ ಇಲ್ಲೊಬ್ಬ ಮಹಿಳೆ, ಸಾಂಪ್ರದಾಯಿಕವಾಗಿ ದೇವರನ್ನು ಪೂಜಿಸುವಂತೆ ಈ ಗೊಂಬೆಗಳನ್ನು ಪೂಜಿಸಿದ್ದಾಳೆ. ದೇವರಿಗೆ ನೈವೇದ್ಯ ಅರ್ಪಿಸುವಂತೆ ಲಬುಬು ಗೊಂಬೆಗೂ ಅರ್ಪಿಸಿದ್ದಾಳೆ. ಇದು ಸಂಗ್ರಹ ವಸ್ತು ಎಂಬುದು ಆಕೆಗೆ ತಿಳಿದಿರಿಲಿಲ್ಲ. ಟಿಕ್‌ಟಾಕ್ ಮತ್ತು ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೊದಲ್ಲಿ, ಆಕೆ ತುಂಬಾ ಶ್ರದ್ಧಾ ಭಕ್ತಿಯಿಂದ ಪೂಜೆಯಲ್ಲಿ ತೊಡಗಿರುವುದನ್ನು ನೋಡಬಹುದು. ಅದು ಚೀನಾ ದೇವರು ಎಂದು ಮಗಳು ಹೇಳಿದ ಮಾತನ್ನು ನಂಬಿದ ತಾಯಿ ಅದನ್ನು ಪೂಜಿಸಲು ಪ್ರಾರಂಭಿಸಿದಳು.
ವಿಡಿಯೊ ವೀಕ್ಷಿಸಿ:
An Indian girl told her mother that Labubu is a chinese god.
— Oppressor (@TyrantOppressor) August 13, 2025
Just hearing this she started worship Labubu.
Jai Labubu 🙇🏻♀️🚩 pic.twitter.com/E5PoR9fZKj
ಸದ್ಯ ಈ ವಿಡಿಯೊ ಭಾರಿ ವೈರಲ್ (Viral Video) ಆಗಿದ್ದು, ಇಲ್ಲಿಯವರೆಗೆ 1.1 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಇದು ಕೊನೆಯ ತಲೆಮಾರಿನ ಮುಗ್ಧತೆ ಎಂದು ಒಬ್ಬ ಬಳಕೆದಾರರೊಬ್ಬರು ಬರೆದಿದ್ದಾರೆ. ಎಲ್ಲದರಲ್ಲೂ ದೈವತ್ವವನ್ನು ನೋಡುವ ಮಹಿಳೆ ಈಕೆ ಎಂದು ಮತ್ತೊಬ್ಬ ಬಳಕೆದಾರರು ಮೆಚ್ಚುಗೆ ಸೂಚಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಸಾವಿರಾರು ಜನ ಓಡಾಡೋ ಹೈವೇಯಲ್ಲಿ ನೇತಾಡುತ್ತಿದೆ ಅಪಾಯಕಾರಿ ಕೇಬಲ್ ವೈರ್! ವಿಡಿಯೊ ಫುಲ್ ವೈರಲ್
ಅಂದಹಾಗೆ, ಲಬುಬು ಗೊಂಬೆಯನ್ನು ಹಾಂಗ್ ಕಾಂಗ್ ಮೂಲದ ಕಲಾವಿದ ಕೇಸಿಂಗ್ ಲುಂಗ್ ರಚಿಸಿದ್ದಾರೆ. ಮೊದಲು 2019 ರಲ್ಲಿ ಬಿಡುಗಡೆಯಾದ ಇದು ಸಂಗ್ರಹಯೋಗ್ಯ ವಸ್ತುವಾಗಿ ಪ್ರಾರಂಭವಾಯಿತು. ಆದರೆ ಶೀಘ್ರದಲ್ಲೇ ಬಹಳ ಜನಪ್ರಿಯತೆ ಗಳಿಸಿತು. ಬ್ಲ್ಯಾಕ್‌ಪಿಂಕ್‌ನ ಲಿಸಾ, ರಿಹಾನ್ನಾ ಮತ್ತು ದುವಾ ಲಿಪಾ ಅವರಂತಹ ಸೆಲೆಬ್ರಿಟಿಗಳು ಈ ಆಟಿಕೆಯನ್ನು ಖರೀದಿಸಿದ ನಂತರ ಇದರ ಕ್ರೇಜ್ ಹೆಚ್ಚಾಯಿತು.