ಫುಕೆಟ್, ಏ. 27: ಇತ್ತೀಚೆಗೆ ಪ್ರವಾಸಿಗರ ಮೇಲೆ ಹಲ್ಲೆ ನಡೆಸುವ ಅನೇಕ ಪ್ರಕರಣ ಆಗಾಗ ವರದಿಯಾಗುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಭಾರತೀಯ ಯುವಕನ ಮೇಲೆ ಥೈಲ್ಯಾಂಡ್‌ನ ಫುಕೆಟ್ ನಲ್ಲಿ ಹಲ್ಲೆ ಮಾಡಿರುವ ಘಟನೆ ನಡೆದಿದೆ. ವೈರಲ್ (Viral News) ಕ್ಲಿಪ್‌ನಲ್ಲಿ ಜಿತೇಶ್ ಎಂದು ಗುರುತಿಸಲಾದ ವ್ಯಕ್ತಿಯನ್ನು ರೆಸ್ಟೋರೆಂಟ್‌ನೊಳಗೆ ಸಿಬ್ಬಂದಿ ಥಳಿಸುತ್ತಿರುವ ದೃಶ್ಯ ಕಂಡು ಬಂದಿದೆ. ಇದನ್ನು ನೋಡಿದ ಅನೇಕರು ಆತಂಕ ವ್ಯಕ್ತ ಪಡಿಸಿದ್ದಾರೆ.
ಯುವಕ ರೆಸ್ಟೋರೆಂಟ್ ಒಳಗೆ ಪದೇ ಪದೆ ಬಂದು ಹೋಗುತ್ತಾ ಅಲ್ಲಿನ ಕೆಲಸಗಾರರಿಗೆ ತೊಂದರೆ ನೀಡುತ್ತಿದ್ದ ಎಂದು ಅಲ್ಲಿನ ಸಿಬ್ಬಂದಿ ದೂರಿದ್ದಾರೆ. ವಿಡಿಯೊದಲ್ಲಿ ಹಲವು ರೆಸ್ಟೋರೆಂಟ್ ಉದ್ಯೋಗಿಗಳು ಆ ವ್ಯಕ್ತಿಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸುವುದನ್ನು ಕಾಣಬಹುದು. ಹಲ್ಲೆಗೆ ಒಳಗಾದ ಪ್ರವಾಸಿಗನು ಪೊಲೀಸರ ಮುಂದೆ ಅಳುತ್ತಾ ಸಹಾಯಕ್ಕಾಗಿ ವಿನಂತಿಸಿದ್ದಾನೆ.
ವಿಡಿಯೊ ನೋಡಿ:
ಯುವಕನ ಮೇಲೆ ಥೈಲ್ಯಾಂಡ್ ಸಿಬ್ಬಂದಿ ಅಮಾನವೀಯ ರೀತಿಯಲ್ಲಿ ಥಳಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಅನೇಕರು ಕಳವಳ ವ್ಯಕ್ತ ಪಡಿಸಿದ್ದಾರೆ. ಸ್ವಲ್ಪ ಸಮಯದ ನಂತರ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಪ್ರವಾಸಿ ಅಧಿಕಾರಿಗಳೊಂದಿಗೆ ಬೇಡಿಕೊಳ್ಳುತ್ತ ಸಹಾಯವನ್ನು ಕೋರುತ್ತಿರುವುದು ಕಂಡು ಬಂದಿದೆ.
ಜನ ನಿಬಿಡ ರಸ್ತೆ ಮಧ್ಯೆ ನಮಾಜ್ ಮಾಡಿದ ಮಹಿಳೆ
"ಅವರು ನನ್ನನ್ನು ಹೊಡೆದರು" ಎಂದು ಕೈಗಳನ್ನು ಮುಗಿದು ಕಣ್ಣೀರು ಹಾಕಿದ್ದಾನೆ. "ನಾನು ಮನೆಗೆ ಹೋಗಬೇಕು, ನನಗೆ ಸಹಾಯ ಮಾಡಿ" ಎಂದು ಕಣ್ಣೀರಿಟ್ಟಿದ್ದಾನೆ. ಈ ದೃಶ್ಯ ನಿಜಕ್ಕೂ ನೋಡುಗರನ್ನು ನೋಯಿಸಿದ್ದು ಯುವಕನಿಗೆ ರಕ್ಷಣೆ ನೀಡಿ ಎಂದು ಹಲವರು ಮನವಿ ಮಾಡಿದ್ದಾರೆ.
ಈ ದೃಶ್ಯದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ರೆಸ್ಟೋರೆಂಟ್ ಸಿಬ್ಬಂದಿಯೊಂದಿಗೆ ಮಾತನಾಡುತ್ತಿರುವುದನ್ನು ಕಾಣಬಹುದು. ಬಳಿಕ ಅಧಿಕಾರಿ ಪ್ರವಾಸಿಗನನ್ನು ರೆಸ್ಟೋರೆಂಟ್ ಆವರಣದಿಂದ ಹೊರಗೆ ಕರೆದೊಯ್ಯುತ್ತಾರೆ. ಆದರೆ ಈ ಘಟನೆಗೆ ಸಂಬಂಧಿಸಿದಂತೆ ಥೈಲ್ಯಾಂಡ್ ಅಧಿಕಾರಿಗಳಿಂದ ಯಾವುದೇ ಹೇಳಿಕೆ ಬಂದಿಲ್ಲ.