ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಇಂಡಿಗೋ ವಿಮಾನ ಎಡವಟ್ಟು: ಕೈಯಲ್ಲಿ ಅಸ್ಥಿ ಹಿಡಿದು ಏರ್‌ಪೋರ್ಟ್‌ನಲ್ಲೇ ಕುಳಿತ ಯುವತಿ!

ದೇಶಾದ್ಯಂತ ನೂರಾರು ವಿಮಾನಗಳ ಹಾರಾಟವನ್ನು ಇಂಡಿಗೋ ಏರ್‌ಲೈನ್ಸ್ ರದ್ದುಗೊಳಿಸಿದ್ದು ಪ್ರಯಾಣಿಕರು ಭಾರೀ ಗೊಂದಲಕ್ಕೆ ಒಳಗಾಗುವಂತೆ ಮಾಡಿದೆ. ಇದರಿಂದ ವಿಮಾನ ನಿಲ್ದಾಣಗಳಲ್ಲಿ ತೀವ್ರ ಅಸ್ತವ್ಯಸ್ತತೆ ಉಂಟಾಗಿದ್ದು, ಪ್ರವಾಸಿಗರು, ಕುಟುಂಬಗಳು ಮತ್ತು ಯಾತ್ರಾರ್ಥಿಗಳು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ.ಇದಕ್ಕೆ ಸಾಕ್ಷಿ ಎಂಬಂತೆ ತಂದೆಯ ಆಸ್ಥಿ ವಿಸರ್ಜನೆಗಗಾಗಿ ಹೊರಟ ಯುವತಿ ಯೊಬ್ಬಳಿಗೂ ಕೂಡ ವಿಮಾನ ನಿಲ್ದಾಣದಲ್ಲೇ ಪರದಾಡುವಂತಹ ಸಂದರ್ಭ ಒದಗಿ ಬಂದಿದೆ..

ಇಂಡಿಗೋ ವಿಮಾನ ರದ್ದು

ಬೆಂಗಳೂರು: ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಸದ್ಯ ಭಾರೀ ಸಂಕಷ್ಟಕ್ಕೆ ಒಳಗಾಗಿದೆ. ದೇಶಾದ್ಯಂತ ನೂರಾರು ವಿಮಾನಗಳ ಹಾರಾಟವನ್ನು ಇಂಡಿಗೋ ಏರ್‌ ಲೈನ್ಸ್​ ರದ್ದುಗೊಳಿಸಿದ್ದು ಪ್ರಯಾಣಿಕರು ಭಾರೀ ಗೊಂದಲಕ್ಕೆ ಒಳಗಾಗುವಂತೆ ಮಾಡಿದೆ. ಇದರಿಂದ ವಿಮಾನ ನಿಲ್ದಾಣಗಳಲ್ಲಿ ತೀವ್ರ ಅಸ್ತವ್ಯಸ್ತತೆ ಉಂಟಾಗಿದ್ದು, ಪ್ರವಾಸಿಗರು, ಕುಟುಂಬಗಳು ಮತ್ತು ಯಾತ್ರಾ ರ್ಥಿಗಳು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ.ಇದಕ್ಕೆ ಸಾಕ್ಷಿ ಎಂಬಂತೆ ತಂದೆಯ ಆಸ್ಥಿ ವಿಸರ್ಜನೆಗಗಾಗಿ ಹೊರಟ ಯುವತಿಯೊಬ್ಬಳಿಗೂ ಕೂಡ ವಿಮಾನ ನಿಲ್ದಾಣದಲ್ಲೇ ಪರದಾಡು ವಂತಹ ಸಂದರ್ಭ ಒದಗಿ ಬಂದಿದೆ. ಈಗಾಗಲೇ ಕುಟುಂಬಸ್ಥರು ಹರಿದ್ವಾರದಲ್ಲಿ ಅಸ್ಥಿ ವಿಸರ್ಜನೆ ಮತ್ತು ಸಂಬಂಧಿತ ಪೂಜಾ ಕಾರ್ಯಗಳಿಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿದ್ದರು. ಆದರೆ ಫ್ಲೈಟ್ ಕ್ಯಾನಲ್ ಆಗಿ ಯುವತಿಯೂ ಏರ್ ಪೋರ್ಟ್ ನಲ್ಲೇ ಬಾಕಿಯಾಗಿ ಆತಂಕ ವ್ಯಕ್ತ ಪಡಿಸಿದ್ದಾರೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್(Viral Video) ಆಗುತ್ತಿದೆ.

ಬೆಂಗಳೂರಿನ ವಿಮಾನ‌ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ನಮಿತಾ ಎಂಬ ಯುವತಿಯ ತಂದೆ ತೀರಿ ಹೋಗಿದ್ದರಿಂದ ಅಸ್ಥಿ‌ವಿಸರ್ಜನೆ'ಗಾಗಿ ಹರಿದ್ವಾರಕ್ಕೆ ತೆರಳಬೇಕಿತ್ತು.‌ ಆದರೆ ಫ್ಲೈಟ್ ರದ್ದು ಗೊಂಡ ಸಮಸ್ಯೆ ಯಿಂದ ಅವರು ದೆಹಲಿ ತಲುಪಲು ಸಾಧ್ಯವಾಗದೇ ಆತಂಕಕ್ಕೆ ಒಳಗಾಗಿದ್ದಾರೆ.‌ ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ನಮಿತಾ, ಮಾತನಾಡಿ “ನನ್ನ ತಂದೆಯ 'ಅಸ್ಥಿ' ವಿಸರ್ಜನೆ ಮಾಡಬೇಕಿದೆ. ನಾನು ಬೆಂಗಳೂರಿನಿಂದ ದೆಹಲಿಗೆ ತಲುಪಬೇಕು. ಹರಿದ್ವಾರ ತಲುಪಲು ದೆಹಲಿಯಿಂದ ಡೆಹ್ರಾಡೂನ್‌ಗೆ ವಿಮಾನ ಹತ್ತಬೇಕು. 'ಅಸ್ಥಿ ವಿಸರ್ಜನೆ' ನಾಳೆಯೇ ಮಾಡಬೇಕು. ಆದರೆ ಯಾವುದೇ ಪೂರ್ವ ಸೂಚನೆ ಇಲ್ಲದೆ ವಿಮಾನ ರದ್ದುಪಡಿಸಲಾಗಿದೆ. ಬೇರೆ ವಿಮಾನಗಳ ಟಿಕೆಟ್‌ ದರ ಹೆಚ್ಚಾಗಿದೆ. ಅಷ್ಟು ಹಣ ಕೊಟ್ಟು ಟಿಕೆಟ್‌ ಕೊಳ್ಳಲು ನನ್ನಿಂದ ಸಾಧ್ಯವಿಲ್ಲ. ಇದಕ್ಕೆ ಸರ್ಕಾರವೇ ತನಗೆ ವ್ಯವಸ್ಥೆ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.

ವಿಡಿಯೊ ನೋಡಿ:



ಅದೇ ರೀತಿ ಜೆಡ್ಡಾದಿಂದ ಸಿಲ್ಚಾರ್‌ಗೆ ತೆರಳುತ್ತಿದ್ದ 25 ಮಂದಿ ಹಿರಿಯರು, ಮಹಿಳೆಯರು ಮತ್ತು ಮಕ್ಕಳನ್ನು ಒಳಗೊಂಡ ಹಜ್ ಯಾತ್ರಿಕರ ಗುಂಪು ಕೂಡ ವಿಮಾನ ನಿಲ್ದಾಣದಲ್ಲಿ ಭಾರೀ ಪರ ದಾಡಿದೆ. ಊಟ, ಕುಡಿಯುವ ನೀರು ಮತ್ತು ಶೌಚಾಲಯದಂತಹ ಮೂಲಭೂತ ಸೌಕರ್ಯಗಳಿಗೂ ಅವರು ತೀವ್ರ ತೊಂದರೆ ಅನುಭವಿಸಿದ್ದಾರೆ‌. ಮದುವೆ ಸಮಾರಂಭಕ್ಕೆ ಹೊರಟಿದ್ದ ಪ್ರಯಾಣಿಕರು, ಮತ್ತು ಶಬರಿಮಲೆಯಿಂದ ವಾಪಾಸ್ಸಾದ ಯಾತ್ರಿಕರು ಸರಿಯಾದ ಸಮಯಕ್ಕೆ ಹಾಜರಾಗಲು ಆಗ ದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನು ವಿಮಾನಗಳು ರದ್ದು ಆದ ಕಾರಣ ಬ್ಯಾಗ್ ಕಳೆದು ಹೋಗಿರುವ ಘಟನೆಗಳೂ ಕೂಡ ನಡೆದಿವೆ.

Viral Video: ರೈಲ್ವೆ ಫ್ಲ್ಯಾಟ್‌ಫಾರ್ಮ್‌ನಲ್ಲಿ ಮಲಗಿದ ವಿಶೇಷ ಚೇತನ ವ್ಯಕ್ತಿಯ ಮೇಲೆ ಕಾನ್‌ಸ್ಟೇಬಲ್‌ನಿಂದ ಹಲ್ಲೆ; ನೆಟ್ಟಿಗರಿಂದ ಆಕ್ರೋಶ

ಇಂಡಿಗೋ ವಿಮಾನ ರದ್ದಾದ ಕಾರಣ ಹೊಸ ವಧು-ವರ ಜೋಡಿಯೂ ತಮ್ಮದೇ ಆರತಕ್ಷತೆಗೆ ಬರಲು ಸಾಧ್ಯವಾಗದೇ ಆನ್​ಲೈನ್ ಮೂಲಕ ಭಾಗವಹಿಸಿ ಕಾರ್ಯಕ್ರಮ ಮುಗಿಸಿದ್ದಾರೆ. ಭುವ ನೇಶ್ವರದಿಂದ ಹುಬ್ಬಳ್ಳಿಗೆ ಬರಬೇಕಿದ್ದ ವಧು ವರರು ಬರಲಾಗದೇ ವಧುವಿನ ಪೋಷಕರು ವಧು-ವರರ ಸ್ಥಾನದಲ್ಲಿ ಕುಳಿತು ಅತಿಥಿಗಳನ್ನು ಬರಮಾಡಿಕೊಂಡ ಘಟನೆ ಕೂಡ ವರದಿಯಾಗಿದೆ. ಗಂಟೆಗಟ್ಟಲೇ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಕಾದು ಕುಳಿತ ದೃಶ್ಯಗಳು ಕಂಡುಬಂದಿದ್ದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ವಿಮಾನಗಳು ರದ್ದಾಗಿದ್ದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.